ಶಿಗ್ಗಾವ್

ನೌಕರರು ಗುತ್ತಿಗೆದಾರರು ಜಿವಿಪಿಗಳು ಪರಿವಾರವಿದ್ದಂತೆ

ನೌಕರರು ಗುತ್ತಿಗೆದಾರರು ಜಿವಿಪಿಗಳು ಪರಿವಾರವಿದ್ದಂತೆ

ಶಿಗ್ಗಾವಿ 17: ಸರ್ಕಾರಿ ಇಲಾಖೆಗಳು ಹಲವಾರು ಇದ್ದು ಆದರೆ ಗ್ರಾಹಕರ ಸೇವೆಗೆ ಗುತ್ತಿಗೆದಾರರು ಜಿವಿಪಿಗಳು ಜೊತೆಗೆ ಗ್ರಾಹಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಇಲಾಖೆ ಹೆಸ್ಕಾಂ ಇಲಾಖೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರ ಸಂಘದ ಪೂರ್ವ ನಿಯೋಜಿತ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಮನ್ನಣ್ಣವರ್ ಅಭಿಪ್ರಾಯ ಪಟ್ಟರು. 

ಪಟ್ಟಣದ ಹೆಸ್ಕಾಂ ಇಲಾಖೆಯಲ್ಲಿ ಹಾವೇರಿ ಜಿಲ್ಲಾ ಸಹಕಾರಿ ಪತ್ತಿನ ಸಂಘಕ್ಕೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಶಿಗ್ಗಾವಿ ಉಪ ವಿಭಾಗದ ಸಿ ಎಸ್ ಅಜ್ಜಣ್ಣವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಹಣ ಮಾಡುವುದು ಅಧಿಕಾರ ಪಡೆದುಕೊಳ್ಳುವುದು ದೊಡ್ಡ ಮಾತಲ್ಲ ಆದರೆ ಸರ್ಕಾರದಲ್ಲಿ ಹಲವಾರು ಇಲಾಖೆಗಳಿದ್ದು ಅವುಗಳಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಗ್ರಾಹಕರಿಗೆ ಸೇವೆ ದೊರಕಿಸುವಲ್ಲಿ ಗುತ್ತಿಗೆದಾರರನ್ನು ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿರುವುದು ಸಂತಸದ ವಿಷಯವಾಗಿದೆ, ಸರ್ಕಾರಿ ಇಲಾಖೆಗಳಲ್ಲಿ ಸಂಘ ಸಂಸ್ಥೆಗಳ ಚುನಾವಣೆಗಳು ಸಹಜ ಸೋಲು ಗೆಲುವುಗಳು ಸಹಜ ಗೆದ್ದವರು ಅವರ ಇಲಾಖೆಯ ನೌಕರರಿಗೆ ತಮ್ಮ ಸೇವೆಯನ್ನು ಮನಃಪೂರ್ವಕವಾಗಿ ಸಲ್ಲಿಸಬೇಕು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಅವರ ಮೇಲೆ ಹೆಚ್ಚಾಗುತ್ತದೆ ಗ್ರಾಹಕರಿಗೆ ಸೇವೆ ಕೊಡುವಲ್ಲಿ ಇಲಾಖೆಯ ಅಧಿಕಾರಿಗಳು ನೌಕರರು ಗುತ್ತಿಗೆದಾರರು ಜಿವಿಪಿಗಳು ಪರಿವಾರವಿದ್ದಂತೆ ಎಲ್ಲರಿಗೂ ಸಮಾನ ಗೌರವ ನೀಡುವ ಕೆಲಸ ಮುಂದುವರೆಯಬೇಕು ಎಂದರು. 

ಕಾರ್ಯಕ್ರಮದಲ್ಲಿ ನೂತನ ನಿರ್ದೇಶಕ ಸಿ ಎಸ್ ಅಜ್ಜಣ್ಣವರ ಅವರಿಗೆ ಸನ್ಮಾನಿಸಲಾಯಿತು. ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಂಡಿವಡ್ಡರ್, ಕಾರ್ಯದರ್ಶಿ ಶಿವಾನಂದ ಹಾದಿಮನಿ, ಉಪ ವಿಭಾಗದ ಎಲ್ಲ ಶಾಖಾಧಿಕಾರಿಗಳು, ಗುತ್ತಿಗೆದಾರ ಸಂಘದ ಅಧ್ಯಕ್ಷ ಎನ್ ಎಸ್ ಹಿರೇಮಠ, ಉಪಾಧ್ಯಕ್ಷ ಅಬ್ದುಲ್ ಹರ​‍್ಪನಹಳ್ಳಿ, ಕಾರ್ಯದರ್ಶಿ ಕೇಟಿ ಪಾಟೀಲ್, ಜಿವಿಪಿ ಸಂಘದ ಜಿ ಸಿ ಪಾಟೀಲ್, ಪೊಲೀಸ್ ಪಾಟೀಲ್ ಬಡಿಗೇರ್ ಹಾಗೂ ಪದಾಧಿಕಾರಿಗಳು ನೌಕರರು ಸವಣೂರು ತಾಲೂಕಿನ ಇಲಾಖೆಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ