ಮಹಲಿಂಗಪುರ

ಪಾಕ ವಿಧಾನದ ವಿಶ್ಲೇಷಣೆ, ಜನಪದ ಗೀತೆ, ಭಾವ ಗೀತೆಗಳ ಕಾರ್ಯಕ್ರಮ

ಪಾಕ ವಿಧಾನದ ವಿಶ್ಲೇಷಣೆ, ಜನಪದ ಗೀತೆ, ಭಾವ ಗೀತೆಗಳ ಕಾರ್ಯಕ್ರಮ

ಮಹಾಲಿಂಗಪೂರ 16: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವ ಅಭಿಯಾನದ 6ನೇ ವಾರದ ಕಾರ್ಯಕ್ರಮ ಪಾಕ ವಿಧಾನದ ವಿಶ್ಲೇಷಣೆಯ ಮತ್ತು ಜನಪದ ಗೀತೆಗಳು ಹಾಗೂ ಭಾವ ಗೀತೆಗಳ ಕಾರ್ಯಕ್ರಮ ದಿ. 16ರಂದು ಜರುಗಿತು.  

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಮಾತೆ ಎ.ವಿ.ಕುಂದಗೋಳ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಮೂಹ ಸಂಪನ್ಮೂಲ ವ್ಯಕ್ತಿ  ವಾಯ್‌.ಎಸ್‌.ಲಮಾಣಿ ಭಾಗವಹಿಸಿ. ಈ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಮಕ್ಕಳು ಮೂಲ ಸಾಮರ್ಥ್ಯಗಳಿಸುವ ಮೂಲಕ ವಿವಿಧ ಕೌಶಲ್ಯಗಳನ್ನು ಕ್ರಿಯಾತ್ಮಕವಾದ ಅನುಭವದ ಆಧಾರದ ಮೇಲೆ ಕಲಿಯುತ್ತಾರೆ ಎಂದರು.  

ಮುಖ್ಯ ಗುರುಮಾತೆ ಎ.ವಿ.ಕುಂದಗೋಳ ಮಾತನಾಡುತ್ತಾ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ನಾವು ಶ್ರಮಿಸುತ್ತಿದ್ದೇವೆ. ಮಕ್ಕಳು ನಾಡಿನ ಭವಿಷ್ಯ, ಅವರಿಗೆ ಮೂಲ ಸಾಮರ್ಥ್ಯ ಕಲಿಸುವ ಮೂಲಕ ಭಾವಿ ನಾಯಕರನ್ನು ತಯಾರಿಸುವ ಕಾಯಕದಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ತೊಡಗಿದ್ದೇವೆ ಎಂದರು.  

ಈ ಸಂದರ್ಭದಲ್ಲಿ ಶಿಕ್ಷಕರಾದ  ವಿ.ಐ.ಉಳ್ಳೇಗಡ್ಡಿ,  ಪಿ.ಆರಿ​‍್ಮರ್ಜಿ,  ಎಸ್‌.ಎಚ್‌.ಹಿರೇಮಠ,  ಎಂ.ಡಿ.ನರಗಟ್ಟಿ, ಎಲ್‌.ಎಂ.ಬಾಗೇವಾಡಿ, ಪ್ರಿಯಾ ಬಾಣಕಾರ, ಲಕ್ಷ್ಮೀ ಮುಕುಂದ ಇದ್ದರು.  ಎಂ.ಡಿ.ನರಗಟ್ಟಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ