ಜಿಲ್ಲಾ ಕುರುಬರ ಸಂಘದ ಕಾರ್ಯಕಾರಿ ಸಮಿತಿಯಿಂದ ನಿರ್ದೇಶಕರ ಚುನಾವಣೆ
ಬಳ್ಳಾರಿ : ಜಿಲ್ಲಾ ಕುರುಬರ ಸಂಘದ ಕಾರ್ಯಕಾರಿ ಸಮಿತಿಯ ಗ್ರಾಮೀಣ ಮತ್ತು ನಗರ ಪ್ರದೇಶದ ನಿರ್ದೇಶಕರ ಚುನಾವಣೆಯು ಆಶ್ರಯ ಹೋಟೆಲ್ ಪಕ್ಕದಲ್ಲಿರುವ ಹೊಸ ಬಸ್ ನಿಲ್ದಾಣ ಎದುರುಗಡೆ ಇರುವ ಹೀರದ ಸುಗಮ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡುವ ಸ್ಥಳ ಏರ್ಪಡಿಸಲಾಗಿತ್ತು.
ಅಭ್ಯರ್ಥಿಯಾದ ಮೋಹನ್ ರವರು ಮಾತನಾಡುತ್ತಾ ನಮ್ಮ ಸಮುದಾಯದ ಜನರಿಗೆ ಸಮಾಜ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಮಾತನಾಡಿದರು. ತರುವಾಯ ನಾವು ಈ ಚುನಾವಣೆಯಲ್ಲಿ ಗೆದ್ದರೂ ಅಥವಾ ಸೋತರು ಸಹ ನಮ್ಮ ಸಮುದಾಯದವರಿಗೆ ಸಹಕಾರದಿಂದ ಒಗ್ಗಟ್ಟಾಗಿ ಈಗ ಮಾತ್ರವಲ್ಲ ಸುಮಾರು ಹದಿನೈದು ವರ್ಷಗಳಿಂದ ನಮ್ಮ ಸಮಾಜಕ್ಕೆ ಏನೇ ಸಮಸ್ಯೆ ಬಂದರೂ ಸಹ ನಮ್ಮ ಕೈಯಿಂದಾಗುವಂತಹ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಕುರುಬರ ಸಮಾಜದ ಸಂಘದ ವತಿಯಿಂದ ಮೂರನೇ ಬಾರಿ ಈ ಚುನಾವಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮೂರು ವರ್ಷಗಳ ಅವಧಿಯವರಿಗೆ ತಮ್ಮ ಸ್ಥಾನವನ್ನು ಹೊಂದಿರುತ್ತಾರೆ. ಹಾಗೂ ಗ್ರಾಮಾಂತರ ಮಟ್ಟದಿಂದ 66 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಇದರಲ್ಲಿ 27 ಅಭ್ಯರ್ಥಿಗಳನ್ನು ನೇಮಕ ಮಾಡಲಾಯಿತು. ನಗರ ಮಟ್ಟದಿಂದ 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ಆರು ಮಂದಿಯನ್ನು ನೇಮಿಸಿ ಚುನಾವಣೆ ಪ್ರಕ್ರಿಯೆ ಸಂಘದ ನಿಯಮಾವಳಿಗಳ ಪ್ರಕಾರ ಚುನಾವಣಾ ಏರ್ಪಡಿಸಲಾಯಿತು. ಅದೇ ರೀತಿಯಾಗಿ ಇಂದು ನಾನೊಬ್ಬ ಅಭ್ಯರ್ಥಿಯಾಗಿ ನಿಂತಿದ್ದೇನೆ, ನಮ್ಮ ಸಂಘದ ಸದಸ್ಯರು ಮತದಾನ ಮಾಡಿ ಗೆಲ್ಲಿಸಬೇಕು ಎಂದು ಕೇಳಿದರು.ಇನ್ನು ಮುಂದಿನ ದಿನಗಳಲ್ಲಿಹೆಚ್ಚಿನ ರೀತಿಯಲ್ಲಿ ಹಾಗೂ ಸಹ ಇದೇ ರೀತಿ ನಮ್ಮ ಸಮುದಾಯ ಹಾಗೂ ಸಂಘದ ಜನರಿಗೆ ಇರುವಂತಹ ಕಷ್ಟವಾದ ಕೆಲಸಗಳಲ್ಲಿ ನಾವು ಭಾಗಿಯಾಗಿ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
ಇಂದು ಈ ಚುನಾವಣೆಯು ಪ್ರಶಾಂತವಾಗಿ ನಮ್ಮ ಸಮುದಾಯದವರು ಎಲ್ಲರೂ ಭಾಗವಹಿಸಿ ಮತದಾನವನ್ನು ಮಾಡುವುದನ್ನು ಕಂಡು ಬಹಳ ಸಂತೋಷವಾಗುತ್ತದೆ, ಎಂದು ಮನದಾಳದ ಮಾತು ವ್ಯಕ್ತಪಡಿಸಿದರು. ಕುರುಬರ ಸಂಘದ ತಾಲೂಕು ಮಾಜಿ ಅಧ್ಯಕ್ಷರಾದ ಚನ್ನಬಸವನಗೌಡ ಮಾತನಾಡುತ್ತಾ ಇಂದು ನಮ್ಮ ಸಮುದಾಯದಲ್ಲಿ ಜಿಲ್ಲೆಯ ಐದು ತಾಲೂಕುಗಳ ಒಟ್ಟಾರೆಯಾಗಿ ಬಳ್ಳಾರಿ ಅಖಂಡ ಚುನಾವಣೆ ಇಂದು ನಗರದಲ್ಲಿ ನಡೆಯುವುದು ಅಗೋಚರ ಹಾಗೂ ಪ್ರಮುಖವಾಗಿದೆ. ಹಾಗೂ ಒಂದು ಹಬ್ಬದ ಸಂಭ್ರಮವು ವಾತಾವರಣ ಕಾಣುತ್ತದೆ, ಯಾಕಂದರೆ ನಮ್ಮ ಕುರುಬರ ಸಂಘದ ಸದಸ್ಯರು ಐದರಿಂದ ಆರು ಸಾವಿರ ಸಂಘದ ಸದಸ್ಯರು ಈ ಚುನಾವಣೆಯ ಮತದಾನದಲ್ಲಿ ಭಾಗಿಯಾಗಿದ್ದಾರೆ. ಇಂದು ರವಿವಾರ ಬೆಳ್ಳಿಗೆ 9:00 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ನಮ್ಮ ಕುರುಬರ ಸಂಘದ ಸದಸ್ಯರು ಮತದಾನ ನೀಡುವುದರ ಮೂಲಕ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ನಿರ್ದೇಶಕರ ಸ್ಥಾನವನ್ನು ನಿರ್ಧರಿಸಲಾಗುವುದು. ನಂತರ ಚುನಾವಣೆ ಅಧಿಕಾರಿಗಳ ಮುಖಾಂತರ ಮತ ಎಣಿಕೆ ಮಾಡಿ ಬಹುತೇಕವಾಗಿ ಒಟ್ಟಾರೆಯಾಗಿ 31 ನಿರ್ದೇಶಕರ ಸ್ಥಾನ, ರಾತ್ರಿ 12 ಗಂಟೆಯ ಒಳಗೆ ನಿರ್ದೇಶಕರ ಸ್ಥಾನವನ್ನು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಕಾರ್ಯಕಾರಿ ಸಮಿತಿ ವತಿಯಿಂದ ಕಲ್ಪಿಸಿಕೊಡಲಾಗುವುದು ಎಂದು ಮಾತನಾಡಿದರು