ರಾಣೆಬೆನ್ನೂರ

ಚುನಾವಣಾ ಆಯೋಗದ ಗಣತಿ ಕಾರ್ಯ ಸರಳ; ಆತಂಕ ಬೇಡ: ಎಚ್‌.ಎಫ್‌. ಅಕ್ಕಿ

ಚುನಾವಣಾ ಆಯೋಗದ ಗಣತಿ ಕಾರ್ಯ ಸರಳ; ಆತಂಕ ಬೇಡ: ಎಚ್‌.ಎಫ್‌. ಅಕ್ಕಿ

ರಾಣೆಬೆನ್ನೂರು, ಜು.11 : ಚುನಾವಣಾ ಆಯೋಗದ ವತಿಯಿಂದ ನಡೆಯುತ್ತಿರುವ ಗಣತಿ ಕಾರ್ಯ ಅತ್ಯಂತ ಸರಳವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಫೇವರ್ಡ್‌ ಕೆ. ಉಪಾಧ್ಯಕ್ಷ ಎಚ್‌.ಎಫ್‌. ಅಕ್ಕಿ ತಿಳಿಸಿದ್ದಾರೆ.  

ನಗರದ ವಿವಿಧ ಬಡಾವಣೆಗಳಲ್ಲಿ ಈಗಾಗಲೇ ಗಣತಿ ನಮೂನೆಗಳ ವಿತರಣೆ ಮತ್ತು ಮಾಹಿತಿ ಸಂಗ್ರಹ ಕಾರ್ಯ ಆರಂಭಗೊಂಡಿದೆ. ಮನೆಗಳಿಗೆ ಭೇಟಿ ನೀಡುವ ಬಿ.ಎಲ್‌.ಒ.ಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಸಮರ​‍್ಕ ಮಾಹಿತಿ ನೀಡಿದರೆ ಸಾಕು. ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಅಥವಾ ಆತಂಕಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದರು.  

ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ತಮ್ಮ ಸಂಸ್ಥೆ ಹಾಗೂ ಜಿಲ್ಲೆಯ ಸ್ವಯಂಸೇವಾ ಸಂಘಟನೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿವೆ. ಚುನಾವಣಾ ಆಯೋಗವು ಜುಲೈ 29, 2026 ಅನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಿರುವುದರಿಂದ, ಮನೆಗಳಿಗೆ ಬರುವ ಬಿ.ಎಲ್‌.ಒ.ಗಳಿಗೆ ಅಗತ್ಯ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.  

ಚಿತ್ರ: ರಾಣೆಬೆನ್ನೂರಿನ ಗೌರೀಶಂಕರ ನಗರದ ನೀಡ್ಸ್‌ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಫ್‌. ಅಕ್ಕಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಿ.ಎಲ್‌.ಒ. ಪರಮೇಶಪ್ಪ ದೊಡ್ಡಮನಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾಹಿತಿ ನೀಡಿದರು. 


ಸುದ್ದಿ ಓದಿ