ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಏಕಾದಶಿ ಆಚರಣೆ
ಮಹಾಲಿಂಗಪುರ 17: ಸ್ಥಳೀಯ ಬುದ್ನಿ ಪಿಡಿಯವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಬುಧವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಅಭಿಷೇಕ, ಮಹಾಮಂಗಳಾರತಿ, ಸಾಬುದಾನಿ ಪ್ರಸಾದ ಮತ್ತು ಮಹಾಪ್ರಸಾದ ಜರುಗಿತು, ಭಕ್ತರು ವಿಠ್ಠಲ ರುಕ್ಮಿಣಿಗೆ ತುಳಸಿ ಮಾಲೆ ಮತ್ತು ಪುಷ್ಪಗಳನ್ನು ಸಮರ್ಿಸಿದರು. ಗುರುವಾರ ಬೆಳಗಿನವರೆಗೆ ಇಡೀ ರಾತ್ರಿ ಸಂತರಿಂದ ವಿಠ್ಠಲ ರುಕ್ಮಿಣಿ ನಾಮ ಜಪ ಮತ್ತು ಭಜನೆ ನಡೆಯಿತು.
ವಿಠ್ಠಲ ರುಕ್ಮಿಣಿ ಸೇವಾ ಸಮಿತಿಯ ಕೃಷ್ಣಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಮಲ್ಲಪ್ಪ ಅಂಬಣ್ಣಗೋಳ, ವಿಠ್ಠಲಗೌಡ ಪಾಟೀಲ, ನಾರಾಯಣಗೌಡ ಪಾಟೀಲ, ಸದಾಶಿವ ಶೇಗುಣಸಿ, ಸದಪ್ಪ ಬೇವಿನಗಿಡದ, ಮಹಾಲಿಂಗಗೌಡ ಪಾಟೀಲ, ಬಸಯ್ಯ ಮಠಪತಿ, ಕುಮಾರ ಪವಾರ, ಗಿರಿಮಲ್ಲಪ್ಪ ಯಾದವಾಡ, ಹನಮಂತ ಬಡಿಗೇರ, ಆದಿತ್ಯ ನಾಯಕ, ಅರ್ಚಕಿ ಬೇಬಬ್ಬ ಯಾದವಾಡ, ಕಲಾವತಿ ಯಾದವಾಡ ಮತ್ತು ಭಕ್ತರು ಇದ್ದರು.