ಮಹಲಿಂಗಪುರ

ಮಾರ್ಚ 23ರಿಂದ ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಎಂಟನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ.

ಮಾರ್ಚ 23ರಿಂದ ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಎಂಟನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ.

ಮಹಾಲಿಂಗಪುರ : ಜಗದ್ಗುರು ಶಿಸಿದ್ಧಾರೂಢ ಮಹಾಸ್ವಾಮಿಗಳವರ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ಮಾರ್ಚ 23 ರಿಂದ 28 ರವರೆಗೆ ರಾಜ್ಯ ಮಟ್ಟದ ಎಂಟನೇ ವರ್ಷದ ಭಜನಾ ಸ್ಪರ್ಧೆ ಏರಿ​‍್ಡಸಲಾಗಿದೆ ಎಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರು ಹಾಗೂ ಶ್ರೀಮಠದ ಧರ್ಮದರ್ಶಿ ಶಾಮಾನಂದ ಬಾ.ಪೂಜೇರಿ ಹೇಳಿದರು. 

ಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು  ಭಾಗವಹಿಸುವ ಭಜನಾ ಮೇಳದವರಿಗೆ ಶ್ರೀಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಭಜನಾ ತಂಡಕ್ಕೆ ಸವಿನೆನಪಿನ ಕಾಣಿಕೆ,  ಹಾಗೂ ತಂಡದ ಪ್ರತಿಯೊಬ್ಬ ಕಲಾವಿದರಿಗೂ ಪ್ರಶಸ್ತಿ ಪತ್ರ ನೀಡಲಾಗುವದು. ಈ ವರ್ಷದ ಸ್ಪರ್ಧೆಯಲ್ಲಿ ನಾನಾ ಜಿಲ್ಲೆಗಳಿಂದ ಸುಮಾರು 300 ಭಜನಾ ತಂಡಗಳು ಭಾಗವಹಿಸುವ ನೀರೀಕ್ಷೆ ಇದೆ ಎಂದರು. 

ಬಹುಮಾನಗಳ ವಿವರ :  ಪ್ರಥಮ : ರೂ.95,000/- ದ್ವಿತೀಯ: ರೂ.75,000/- ತೃತೀಯ: ರೂ.65,000/- * ಸಮಾಧಾನಕರ: ರೂ.8,500/-*  (ಹತ್ತು ತಂಡಗಳನ್ನು ಆಯ್ಕೆಮಾಡಿ, ಪ್ರತಿ ತಂಡಕ್ಕೆ ರೂ.8,500/- ನೀಡಲಾಗುವುದು.)  * 16 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರಿಗೆ ಪ್ರತಿಭಾ ಪುರಸ್ಕಾರ ರೂ. 9,500.00   (ಒಂದು ಬಾಲಕರ ತಂಡ ಮತ್ತು ಒಂದು ಬಾಲಕಿಯರ ತಂಡಕ್ಕೆ ಮಾತ್ರ) * ಮಹಿಳಾ ಭಜನಾ ತಂಡಕ್ಕೆ ಪುರಸ್ಕಾರ ರೂ.9,500.00 (ಒಂದು ತಂಡಕ್ಕೆ ಮಾತ್ರ) 


ವಯಕ್ತಿಕ ಬಹುಮಾನಗಳ ವಿವರ : ಉತ್ತಮ ಹಾಡುಗಾರರಿಗೆ  : ರೂ.2,500/- (ಇಬ್ಬರಿಗೆ ಮಾತ್ರ) ಉತ್ತಮ ಹಾರ್ಮೋನಿಯಂ ವಾದಕರಿಗೆ : ರೂ.2,500/- (ಇಬ್ಬರಿಗೆ ಮಾತ್ರ)  ಉತ್ತಮ ತಬಲಾ ವಾದಕರಿಗೆ : ರೂ.2,500/- (ಇಬ್ಬರಿಗೆ ಮಾತ್ರ)  ಉತ್ತಮ ತಾಳ ವಾದಕರಿಗೆ : ರೂ ರೂ.2,500/- (ಇಬ್ಬರಿಗೆ ಮಾತ್ರ)  ಉತ್ತಮ ಧಮಡಿ ವಾದಕರಿಗೆ ರೂ.2,500/- (ಇಬ್ಬರಿಗೆ ಮಾತ್ರ) ಬಹುಮಾನಗಳಿವೆ ಎಂದರು. 


ಪ್ರತಿ ದಿವಸ 50 ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವದು ಹಾಗೂ ಇದರಲ್ಲಿ ಆಯ್ಕೆಯಾದ ತಂಡಗಳಿಗೆ ಮಾರ್ಚ 27 ರಂದು  ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವದು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ತಂಡದವರಿಗೆ ಮಾತ್ರ  ಮೇಲ್ಕಾಣಿಸಿದ ಬಹುಮಾನಗಳನ್ನು ನೀಡಲಾಗುವದು, ಸದರಿ ಬಹುಮಾನ ವಿತರಣಾ ಕಾರ್ಯಕ್ರಮವು ಮಾರ್ಚ 28 ರಂದು ನಡೆಯಲಿದೆ. 


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶಾಮಾನಂದ ಬಾಳಪ್ಪ ಪೂಜೇರಿ, ಅಧ್ಯಕ್ಷರು ರಾಜ್ಯಮಟ್ಟದ ಭಜನಾ ಸ್ಪರ್ಧೆ ಹಾಗೂ ಧರ್ಮದರ್ಶಿಗಳು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ ಕಮೀಟಿ, ಹುಬ್ಬಳ್ಳಿ.  

ಮೋ: ನಂ-9620693060 / 9880169881. ಸಂಪರ್ಕಿಸಲು ವಿನಂತಿಸಿದ್ದಾರೆ.  


ಸುದ್ದಿ ಓದಿ