ಈದ್ ಮಿಲಾದ್: ಮಕ್ಕಳಿಗೆ ಉಚಿತ ಖತ್ನಾ ಮುಂಜಿ ವಿತರಣೆ
ಸಿರುಗುಪ್ಪ 12: ತಾಲ್ಲೂಕು ತೆಕ್ಕಲಕೋಟೆ ಪಟ್ಟಣದ ಶಾಹ್ ಹುಸೇನ್ ನಗರ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಜಮಾತೆ ಮನ್ಸೂರ್ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ರಕ್ತದಾನ ಯುವಕ ಸಂಘದವರಿಂದ ಈದ್ ಮಿಲಾದ್ ಉನ್ ನಬಿ ಪೈಗಂಬರ್ ಜನ್ಮ ದಿನದ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಬಡ ಕುಟುಂಬದ 30ಮಕ್ಕಳಿಗೆ ಉಚಿತ ಖತ್ನಾ ಮುಂಜಿವನ್ನು ಮಾಡಿ ಬಟ್ಟೆ, ಗೋಧಿ, ಕೊಬ್ಬರಿ,ಬೆಲ್ಲ ಮತ್ತು ಔಷಧಿಗಳನ್ನು ವಿತರಿಸಲಾಯಿತು.
ಅಖಿಲ ಕರ್ನಾಟಕ ಜಮಾತೆ ಮನ್ಸೂರ್ ಅಧ್ಯಕ್ಷ ಹೆಚ್ ಮಾಬುಸಾಬ್, ಉಪಾಧ್ಯಕ್ಷ ಎಂ ಮಾಬುಸಾಬ್,ಪಿ ರೆಹಮಾನ್, ಕಾರ್ಯದರ್ಶಿ ಜಿ ಖಾದರ್ ಬಾಷಾ, ಹುಸೇನ್ ಬಾಷಾ ಸಮೂದಾಯದವರು ಮತ್ತು ಮುಖಂಡರು ಭಾಗವಹಿಸಿದ್ದರು