ವಿದ್ಯೆಯೆಂಬುವುದು ಮನುಷ್ಯನ ಮೂರನೆಯ ಕಣ್ಣು: ಅನ್ಸಾರಿ
ಮಹಾಲಿಂಗಪುರ 17: ವಿದ್ಯೆಯೆಂಬುವುದು ಮನುಷ್ಯನ ಮೂರನೆಯ ಕಣ್ಣು, ಎರಡು ಕಣ್ಣುಗಳು ಮಾಡದ ಕೆಲಸವನ್ನು ಇದು ಪೂರ್ಣಗೊಳಿಸುತ್ತದೆ. ಜಗತ್ತಿನಲ್ಲಿ ಪ್ರಸಿದ್ಧಿ ಪಡೆದ ಮಹನೀಯರು ಇದೆ ವಿದ್ಯೆಯಿಂದಲೇ. ಆದ್ದರಿಂದ ಮಕ್ಕಳು ಸುಸಂಸ್ಕೃತರಾಗಿ, ಮಾದರಿ ವ್ಯಕ್ತಿಗಳಾಗಲು ಪಾಲಕರು, ಶಿಕ್ಷಕರು ಮತ್ತು ಅಭಿವೃದ್ಧಿ ಸಮಿತಿ ತಮ್ಮ ಶ್ರಮವನ್ನು ವ್ಯಹಿಸಬೇಕೆಂದು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ ಮೌಲಾನ ಜಕ್ರೀಯಾಸಾಹಬ್ ಅನ್ಸಾರಿ ಹೇಳಿದರು.
ಬುಧವಾರ ಪಟ್ಟಣದ ಕೆಂಗೇರಿಮಡ್ಡಿ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಗೆ ನೂತನ ಎಸ್ಡಿಎಂಸಿ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಸದಸ್ಯರನ್ನು ಶಾಲಾ ಸಿಬ್ಬಂದಿಗಳು ಸ್ವಾಗತಿಸಿಕ್ಕೊಂಡರು ಮತ್ತು ನಿಕಟಪೂರ್ವ ಆಡಳಿತ ಮಂಡಳಿಯ ಸರ್ವ ಸದಸ್ಯರನ್ನು ಕೂಡ ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಮುಖ್ಯ ಅತಿಥಿ ಪುರಸಭೆ ವಾರ್ಡ್ ಸದಸ್ಯ ಶೇಖರ್ ಅಂಗಡಿ ಅವರು ಮಾತನಾಡಿ ಶಿಕ್ಷಣಕ್ಕೆ ಪೂರಕವಲ್ಲದ ಕಾರ್ಯಕ್ರಮಗಳಿಗೆ ಒತ್ತು ಕೊಡದೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಆಗ ಮಕ್ಕಳ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ನೂತನ ಆಡಳಿತ ಮಂಡಳಿಗೆ ಮತ್ತು ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಎಸ್ಡಿಎಂಸಿ ನೂತನ ಅಧ್ಯಕ್ಷ ಯುನುಸ್ ಪಠಾಣ ಹಾಗೂ ಉಪಾಧ್ಯಕ್ಷೆ ಸುಮಯೆ್ಯೈ ಕೌಜಲಗಿ ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅತಿಥಿ ಶಿಕ್ಷಕರಾದ ತಬಸ್ಸುಮ್ ಬೈರಕದಾರ, ಖಾಜಿ ಮೇಡಂ, ಸಿರಾಜ್ ಪಾಂಡು, ಭಾಷಾ ಬಿಸ್ತಿ, ರೇಷ್ಮಾ ಜಕಾತಿ ಹಾಗೂ ನೂತನ ಎಸ್ಡಿಎಂಸಿ ಸದಸ್ಯರು, ಶಾಲಾ ಮಕ್ಕಳು ಪಾಲಕರು ಉಪಸ್ಥಿತರಿದ್ದರು. ಶಿಕ್ಷಕರಾದ ಬಿ. ಎಂ. ದೊಡಮನಿ ಸ್ವಾಗತಿಸಿ, ಬಂದೇನವಾಜ್ ಕತ್ನಳ್ಳಿ ನಿರೂಪಿಸಿ, ಮುಖ್ಯಗುರುಗಳು ಎಚ.ಎಸ್. ಕಡಿವಾಳ ವಂದಿಸಿದರು.