ಶಿಕ್ಷಣ ಇಲಾಖೆಯಿಂದ ಕ್ಷೌರಿಕ ವೃತ್ತಿಗೆ ಅಪಮಾ: ಕ್ಷಮೆಗೆ ಆಗ್ರಹಿಸಿ ಕ್ಷೌರಿಕ ಸಮಾಜದಿಂದ ಪ್ರತಿಭಟನೆ
ಮುದ್ದೇಬಿಹಾಳ 14: ದಿನಾಂಕ 6/11 ರಂದು ನಡೆದ ಶಿಕ್ಷಕರ ನೇಮಕಾತಿ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕ್ಷೌರಿಕ ವೃತ್ತಿಯನ್ನು ಅವಹೇಳನ ಮಾಡುವ ಪದಬಳಕೆ ಮಾಡುವ ಮೂಲಕ ಸ್ವಾಭಿಮಾನದಿಂದ ಕ್ಷೌರಿಕ ಕುಲವೃತ್ತಿಯನ್ನು ಮಾಡುವ ಕ್ಷೌರಿಕ ಸಮಾಜಕ್ಕೆ ಅವಹೇಳನ ಮಾಡಲಾಗಿದೆ ಎಂದು ಸೋಮುವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಹಡಪದ ಅಪ್ಪಣ್ಣ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಶಿಕ್ಷಣ ಇಲಾಖೆಯ ವಿರುದ್ಧ ದಿಕ್ಕಾರ ಕೂಗಿದರಲ್ಲದೆ ಶಿಕ್ಷಣ ಇಲಾಖೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಬೇಕೆಂದು ಆಗ್ರಹಿಸಿದರು.
ಪಟ್ಟಣದ ತಂಗಡಗಿ ರಸ್ತೆಯ ಹಡಪದ ಅಪ್ಪಣ್ಣ ವೃತ್ತದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ತಹಶಿಲ್ದಾರ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಮನವಿಯನ್ನು ಸಲ್ಲಿಸಿದರು.
ಸವಿತ ಸಮಾಜದ ಸಂಶೋಧಕ ಲೇಖಕ ಮಹೇಶ ತೇಲಂಗಿ ಮಾತನಾಡಿ ಶಿಕ್ಷಣ ಇಲಾಖೆ ಎಂದರೆ ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳಿಗೆ ನೈಜ ಶಿಕ್ಷಣವನ್ನು ನೀಡವಂತಹದು ಆದರೆ ಈ ಇಲಾಖೆಯು ಕ್ಷೌರಿಕ ವೃತ್ತಿಯನ್ನು ಅಪಮಾನ ಮಾಡಿದೆ ನಮ್ಮ ಕುಲವೃತ್ತಿಯನ್ನು ಅವಮಾನ ಮಾಡುವ ಪದಬಳಕೆಯನ್ನು ಶಿಕ್ಷಕರ ನೇಮಕಾತಿ ಪ್ರಶ್ನೆ ಪತ್ರಿಕೆಯಲ್ಲಿ ಬಳಸಿದೆ. ಕ್ಷೌರಿಕ ವೃತ್ತಿಗೆ ಅದರದೆಯಾದ ಮಹತ್ವ ಇದೆ ಕ್ಷೌರಿಕ ಸೇವೆಯನ್ನು ಪಡೆಯದ ಮನುಜರಿಲ್ಲವೆನ್ನಬಹುದು ಕ್ಷೌರಿಕ ವೃತ್ತಿ ಗೌರವಿಸುವ ಕೆಲಸ ಶಿಕ್ಷಣ ಇಲಾಖೆ ಮಾಡಬೇಕು ಇಂದಿನ ಮಕ್ಕಳಿಗೆ ಕ್ಷೌರಿಕ ವೃತ್ತಿಯನ್ನು ಹಿನ್ನೆಲೆ ಅ ಕಾಯಕದ ಮಹತ್ವ ತಿಳಿಸಬೇಕಾದವರೂ ಅಪಮಾನ ಮಾಡಿದ್ದು ನಿಜಕ್ಕೂ ಕ್ಷಮಿಸಲಾರದ ಪ್ರಮಾದ ಶಿಕ್ಷಣ ಇಲಾಖೆ ಮಾಡಿದೆ ಇದಕ್ಕೆ ಕಾರಣರಾದವರನ್ನು ಸೇವೆಯಿಂದ ವಜಾಗೂಳಿಸಬೇಕು ಮತ್ತು ಶಿಕ್ಷಣ ಇಲಾಖೆಯು ಇಂತಹ ಅಚಾತುರ್ಯ ಆಗದಂತೆ ನೋಡಿಕೊಳ್ಳಬೇಕು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪದೆ ಪದೇ ಎಲ್ಲರಿಂದಲೂ ನಮ್ಮ ವೃತ್ತಿಗೆ ಅಪಮಾನ ಮಾಡಲಾಗುತ್ತಿದೆ ಸರಕಾರ ಕ್ಷೌರಿಕ ವೃತ್ತಿಯನ್ನು ಅಪಮಾನ ಅವಹೇಳನ ಮಾಡುವವರ ಮೇಲೆ ಜಾತಿ ನಿಂದನೆ ವೃತ್ತಿ ನಿಂದನೆ ಕಾಯಿದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಭಾರತೀಯ ಭೀಮಸೇನೆಯ ರಾಜ್ಯ ಕಾರ್ಮಿಕ ಘಟಕದ ಉಪಾಧ್ಯಕ್ಷ ಪ್ರದೀಪ ಚಲವಾದಿ (ಕೊಂಡಗೂಳಿ ) ಮಾತನಾಡಿ ಮಕ್ಕಳಿಗೆ ವಿದ್ಯೆಯನ್ನು ನಾಡಿನ ಸಂಸ್ಕೃತಿ ಪರಿಚಯಿಸಬೇಕಾದವರೇ ಒಂದು ಗೌರವ ವೃತ್ತಿಗೆ ಅವಹೇಳನ ಪದಬಳಕೆ ಪ್ರಶ್ನೆ ಪತ್ರಿಕೆಯಲ್ಲಿ ಬಳಸಿದ್ದು ಅಪರಾಧವಾಗುರುತ್ತದೆ ಕೂಡಲೆ ಇದಕ್ಕೆ ಸಂಬಂಧಿಸಿದ ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮ ಮಾತ್ರವಲ್ಲದೆ ಅವರನ್ನು ಅಮಾನತ್ತು ಮಾಡಬೇಕು ಶಿಕ್ಷಣ ಇಲಾಖೆ ಕ್ಷೆಮೆಯಾಚಿಸಬೇಕು ಎಂದರು.
ಶಂಕರ್ಪ ಹಡಪದ, ರವಿ ತೇಲಂಗಿ, ಚಂದ್ರ್ಪ ಹಡಪದ, ದೇವೇಂದ್ರ ಶಹಾಪೂರ,ಅಡಿವೆಪ್ಪ ಹಡಪದ, ಈರಣ್ಣ ಈಡ್ಲೂರ,ಶಂಕರ ಹಡಪದ, ಕುಮಾರ್ ತೇಲಂಗಿ, ಭೀಮಣ್ಣ ಹಡಪದ, ಶ್ರೀನಿವಾಸ ತೇಲಂಗಿ, ಭೀಮಣ್ಣ ಹಡಪದ, ಮಲ್ಲಣ್ಣ ತೇಲಂಗಿ, ಶಿವು ಹಡಪದ ,ಶರಣಪ್ಪ ಮಸಾಲಜಿ,ಮಹಾಂತೇಶ ಹಡಪದ, ಪ್ರಲ್ಹಾದ ಹಡಪದ,ಶಿವು ಬಳವಾಟ ಶ್ರೀಕಾಂತ ಹಡಪದ ಬಸವರಾಜ್ ಅಬ್ಬಿಹಾಳ ಭಾರತೀಯ ಭೀಮ್ ಸೇನೆಯ ರಾಜ್ಯ ಉಪಾಧ್ಯಕ್ಷ ಪರಶುರಾಮ್ ಚಲವಾದಿ (ಕಪನೂರ್ )ಸೇರಿದಂತೆ ಹಡಪದ ಅಪ್ಪಣ್ಣ ಹಾಗೂ ತಾಲೂಕು ಸವಿತಾ ಸಮಾಜದ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.