ಮಹಲಿಂಗಪುರ

ಜೆಸಿ ಶಾಲೆಯ ಕಡಿಮೆ ಶುಲ್ಕ ಗುಣಮಟ್ಟದ ಶಿಕ್ಷಣ ಮಾದರಿ: ವಿದ್ಯಾಧರ ಸವದಿ.

ಜೆಸಿ ಶಾಲೆಯ ಕಡಿಮೆ ಶುಲ್ಕ  ಗುಣಮಟ್ಟದ ಶಿಕ್ಷಣ ಮಾದರಿ: ವಿದ್ಯಾಧರ ಸವದಿ.

ಮಹಾಲಿಂಗಪುರ :  ಗ್ರಾಮೀಣ ಭಾಗದ ಮಕ್ಕಳಿಗೆ 33 ವರ್ಷಗಳಿಂದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಮೂಲಕ ನಾಡಿಗೆ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದ ಜೆಸಿ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಭಾಜಪ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸವದಿ ಹೇಳಿದರು. 

ಸ್ಥಳೀಯ ಜೆಸಿ ಶಾಲೆಯ 2022-23 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಚಿಣ್ಣರ ಲೋಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಸೇವಾ ಮನೋಭಾವನೆಯಿಂದ ಅತ್ಯಂತ ಕಡಿಮೆ ಶುಲ್ಕ ಮತ್ತು ಗುಣಮಟ್ಟದ ಶಿಕ್ಷಣದಿಂದ ಶ್ರೇಷ್ಠ ಸೇವೆ ಮಾಡುತ್ತಿರುವ ಸಂಸ್ಥೆಯ ಸಾಧನೆ ಹಿರಿದು ಎಂದರು. 

ಸಿಆರ್ ಪಿ ಎಸ್. ಎನ್. ಬ್ಯಾಳಿ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಸುವ ಯಂತ್ರಗಳಾಗದೆ ಶಾರೀರಿಕ, ಬೌದ್ಧಿಕ, ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. 

ಕಳೆದ ಸಾಲಿನ ರಾಜ್ಯಕ್ಕೆ 4 ನೇ ಯಾರ್ಂಕ್ ವಿಜೇತ ನಂದನ ಮಲ್ಲಾಪುರ ಸೇರಿದಂತೆ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಕು. ಶ್ರೀಲಕ್ಷ್ಮಿ ಗೊಂದಿ ಶಾಲೆಗೆ ಕಂಪ್ಯೂಟರ್ ಕಾಣಿಕೆಯಾಗಿ ನೀಡಿದಳು.

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಅಧ್ಯಕ್ಷತೆ ವಹಿಸಿದ್ದರು,ಅಧ್ಯಕ್ಷ ಮಹೇಶ್ ಆರಿ, ನಿರ್ದೇಶಕ  ಆಯ್ ಬಿ. ಮುರಗೋಡ, ಗುರುರಾಜ ಅಂಬಿ, ರಮೇಶ ಮುಳವಾಡ, ಆರ್ ಎಂ.ಘಟ್ಟೆಪ್ಪನವರ ಇದ್ದರು.ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ ಸ್ವಾಗತಿಸಿ, ಮಕ್ಕಳು ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 


*ಸಂಸ್ಥೆಯ ಕೋರಿಕೆಗೆ ಸ್ಪಂದಿಸಿದ ಪುರಸಭಾಧ್ಯಕ್ಷ ಬಸವರಾಜ ಹಿಟ್ಟಿನಮಠ  ಪುರಸಭೆಯಿಂದ 5 ಲಕ್ಷ ಮೊತ್ತದ ಪಿವರ್ ಬ್ಲಾಕ್ ಹಾಕಿಸಲು ಸ್ಥಳಕ್ಕೆ ಮುಖ್ಯಾಧಿಕಾರಿಗಳನ್ನು ಕರೆಯಿಸಿ ಆದೇಶ ಮಾಡಿದರು. 

ಸುದ್ದಿ ಓದಿ