ದಾನಮ್ಮದೇವಿ ಮಂದಿರ ಉದ್ಘಾಟನಾ ವೇಳೆ ಕಳ್ಳರ ಕೈ ಚಳಕ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು
ಸಂಕೇಶ್ವರ : ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ದಾನಮ್ಮದೇವಿ ಮಂದಿರದ ಉದ್ಘಾಟನಾ ಹಾಗೂ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುವ ಮೂಲಕ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಗುರುವಾರ ನಡೆದಿದೆ.
ಸಂಕೇಶ್ವರ ಪಟ್ಟಣದ ಹನುಮಾನ ನಗರದ ಬಳಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ದಾನಮ್ಮದೇವಿಯ ಮಂದಿರದ ಉದ್ಘಾಟನಾ ಹಾಗೂ ಮೂರ್ತಿ ಪ್ರತಿಷ್ಟಾಪನೆ ಸಮಾರಂಭವು ಗುರುವಾರ ಜರುಗಿತು.
ಈ ವೇಳೆಯಲ್ಲಿ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತ್ತ ಕಾರ್ಯಕ್ರಮ ದಲ್ಲಿ ತೇಲಿಹೋಗಿದ್ದ ಭಕ್ತ ಸಮೂಹದ ಕೆಲ ಮಹಿಳೆಯರ ಕೊರಳಲ್ಲಿನ ಚಿನ್ನಾಭಬರಣವನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.
ಸಮೀಪದ ಹರಗಾಪೂರ ಗಡದ ವಯೋವೃದ್ದರೊಬ್ಬರ ಕೊರಳಲ್ಲಿದ್ದ ಸುಮಾರು 35 ಗ್ರಾಂ ಚಿನ್ನಾಭರಣವನ್ನು ಖದೀಮರು ದೋಚಿದ್ದಾರೆ. ಈ ಕಾರ್ಯಕ್ರಮ ದಲ್ಲಿ ಇಬ್ಬರ ಮಹಿಳೆಯರ ಕೊರಳಿನ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.