ಮಹಲಿಂಗಪುರ

ದುರ್ಗಾದೇವಿ, ತಾಯಿ ದ್ಯಾಮವ್ವ ದೇವಿ ಅದ್ದೂರಿ ಜಾತ್ರಾ ಮಹೋತ್ಸವ

ದುರ್ಗಾದೇವಿ, ತಾಯಿ ದ್ಯಾಮವ್ವ ದೇವಿ ಅದ್ದೂರಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ,02 : ಗ್ರಾಮ ದೇವತೆ ದುರ್ಗಾದೇವಿ ಹೆಸರಿನಲ್ಲಿ ವಾರ ಹಿಡಿಯುವದು ಪಟ್ಟಣದ ಕೊನೆಯ ವಾರವಾದ ಶುಕ್ರವಾರ ದಿವಸ ಸದ್ಭಕ್ತರು ಪಟ್ಟಣದ ತುಂಬೆಲ್ಲ ದೇವಿಯ ಮೂರ್ತಿ ಮೆರವಣಿಗೆ ಮಾಡಿ,ಭಂಡಾರ ಆಡುವ ಹಾಗೂ ಧಾರ್ಮಿಕ ವಿಧಿವಿಧಾನಗಳ ಹಾಗೂ ಸಕಲ ಮಂಗಲ ವಾದ್ಯಗಳೊಂದಿಗೆ ಅತೀ ವಿಜೃಂಭಣೆಯಿಂದ ವಿಶೇಷ ವಾರಗಳ ಅಂತಿಮ ದಿನದ ಜಾತ್ರೆಯನ್ನು ಆಚರಿಸಿದರು. 

ನಗರದ ನಡುಚೌಕಿ ಹತ್ತಿರ ಇರುವ ತಾಯಿ ದ್ಯಾಮವ್ವ ಗುಡಿಯನ್ನು ಬಾಳೆ ದಿಂಡು ಮಾವಿನ ತಳಿರು ತೋರಣಗಳಿಂದ ಸಿಂಗರಿಸಿ ಊರಲೆಲ್ಲಾ ಹಬ್ಬದ ವಾತಾವರಣ ಕಳೆ ಕಟ್ಟಿತು. ಊರಿನ ಎಲ್ಲ ಸಮುದಾಯಗಳ ಜನ ಭಯ ಭಕ್ತಿಯಿಂದ ಕಠಿಣ ವೃತ್ತವನ್ನು ಪಾಲಿಸಿ ಇಬ್ಬರು ದೇವಿಯರ ಕೃಪೆಗೆ ಪಾತ್ರರಾಗುತ್ತಾರೆ. 

ಈ ಆಚರಣೆಯು ಮೂರು ಶುಕ್ರವಾರ ಹಾಗೂ ಎರಡು ಮಂಗಳವಾರಗಳಿಗೆ ಸೀಮಿತಗೊಂಡು ಪ್ರತಿ ವಾರ ಜನರು ದುರ್ಗಾದೇವಿಗೆ ಮೊಸರನ್ನ ನೈವೇದ್ಯ ಹಿಡಿಯುತ್ತಾರೆ. ಕಡೆ ವಾರ ಶುಕ್ರವಾರವಾಗಿರುತ್ತದೆ. ಅಂದು ಪಟ್ಟಣದ ಎಲ್ಲ ದೇವಸ್ಥಾನಗಳಿಗೆ ಭಕ್ತರು ಸುತ್ತಲಿನ ದೇವರುಗಳಿಗೆ ಮೊಸರನ್ನ, ಕರಚಿಕಾಯಿ, ಗಳಿಗಡಬಗಳ ಬಾನ ಹಿಡಿದು ನಂತರ ತೆಂಗಿನಕಾಯಿ ಒಡೆಯದೇ ಉರುಳಿಸುತ್ತಾರೆ. 

ತೇರುವು ಕೊಡುವುದು : ನಗರದ ಎಲ್ಲ ಹನುಮ ಮಂದಿರಗಳಿಗೆ ತೆರಳಿ ಬ್ರಹತ್ ಆಕಾರದ ಚಪ್ಪಲಿ ತೆರವು ಗಳನ್ನು ದುರ್ಗಾದೇವಿ ಜಾತ್ರಾ ಕಮಿಟಿ ಹಾಗೂ ಪೂಜಾರಿ ಸಕಲ ಸದ್ಭಕ್ತರು ಸೇರಿ ಮಂಗಲ ವಾದ್ಯಗಳೊಂದಿಗೆ ತೆರಳಿ ಅರ​‍್ಿಸಿ ಬರುವುದು ಪದ್ಧತಿ. ಇದನ್ನು ಚಾಚು ತಪ್ಪದೆ ನೆರವೇರಿಸುತ್ತಾರೆ. 

ವಾರ ಹಿಡಿಯುವ ಉದ್ದೇಶ : ಆಧುನಿಕ ತಂತ್ರಜ್ಞಾನದ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾಲದಲ್ಲಿ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಚೀನ ಕಾಲದಲ್ಲಿ ಭಾರತಿಯರು -ರೋಗಗಳು ಬಾರದಂತೆ ತಡೆಯಲು,ದೇವಾನು ದೇವತೆಗಳ ಮೊರೆ ಹೋಗುವ ಪದ್ಧತಿ ಇದು ಆದಿ ಕಾಲದಿಂದ ನಡೆದುಕೊಂಡು ಬಂದಿದೆ.ಅಂದು ನೆಗಡಿ ಕೆಮ್ಮು, ಶೀತ, ಜ್ವರ, ಹುರುಕು, ಕಜ್ಜಿ, ಗೊಬ್ಬರ ಗುಳ್ಳಿ ಎಳ್ಳುವುದುಇನ್ನೀತರ ಸಾಂಕ್ರಾಮಿಕ ರೋಗಗಳು ಹರುಡುವ ಭೀತಿ ಎದುರಾಗುತ್ತಿದ್ದವು.ಆದ್ದರಿಂದ ಊರ ಪ್ರಮುಖರು ಸೇರಿ ಊರಿನಲ್ಲಿ ಇಂದಿನಿಂದ ಯಾರು ಹೊಟೆಲು, ಮನೆ ಇನ್ನೀತರ ಕಡೆಗಳಲ್ಲಿ ವಗ್ಗರಣೆ, ಖಾದ್ಯ ತಿನಿಸು, ಬೇಳೆ, ರೊಟ್ಟಿ, ಚಪಾತಿ ಹಾಗೂ ಶುಭ ಕಾರ್ಯಗಳನ್ನು ಸಹಿತ ಮಾಡುವಂತಿಲ್ಲವೆಂದು ಊರು ತುಂಬ ಡಂಗುರ ಸಾರಿ ಹೇಳುತ್ತಿದ್ದರು.ಈ ಪ್ರಕಾರ ಸರ್ವ ಧರ್ಮಿಯರು ಪಾಲಿಸುತ್ತ ಬಂದಿದ್ದಾರೆ. 

ಅದ್ದೂರಿ ಮೆರವಣಿಗೆ : ದುರ್ಗಾದೇವಿ ಮೂರ್ತಿಯನ್ನು ನಗರದ ಪ್ರಮುಖ ಬಿದಿಗಳಲಿ ಮೆರವಣಿಗೆ ಸಾಗಿ ಭಂಡಾರ ಎರಚಿ ನಗರದ ತುಂಬೆಲ್ಲಾ ಭಂಡಾರಮಯ ಮಾಡಿ ಎಲ್ಲಿ ನೋಡಿದರೂ ಭಂಡಾರ ಕಾಣುವಂತೆ ಎರಚುತ್ತಾರೆ, ಭಕ್ತರು ತಾವು ಬೇಡಿಕೊಂಡಂತೆ 50 ಕೆಜಿ 100 ಕೆಜಿ ವರೆಗೆ ಭಂಡಾರ ತಂದು ಎರಚುತ್ತಾರೆ ದೇವಿ ಗುಡಿಗೆ ಬಂದು ತಲುಪಿ ವೇಳೆಗೆ ಊರೆಲ್ಲಾ ಭಂಡಾರಮಯವಾಗಿರುತ್ತದೆ, ನಂತರ ಹೋಮ ಹವನ ಪೂಜೆ ಸಲ್ಲಿಸುತ್ತಾರೆ. 

ಕಡೆ ವಾರದ ಶುಕ್ರವಾರ ನಡೆಯುವ ವಿಧಿವಿಧಾನಗಳು  ದುರ್ಗಾದೇವಿ ಜಾತ್ರೆ ಮುನ್ನಾದಿನ ರಾತ್ರಿ ಜಾಗರಣೆ ಜೊತೆಗೆ ದೇವಿ ಮಹಾತ್ಮೆ ಕಾರ್ಯಕ್ರಮ, ನಸುಕಿನ ಜಾವ ಸಮುದಾಯದಿಂದ ದೀಡ್ ನಮಸ್ಕಾರ, ಕುಂಕುಮಾರ್ಚನೆ,ಮಹಾಪೂಜೆ ನೆರವೇರಿಸಿ ಊರ ಜನ ತಾವು ತಯಾರಿಸಿದ ಅಡುಗೆ ಮೀಸಲು ಎಡೆಯನ್ನು ನೈವೇದ್ಯ ರೂಪದಲ್ಲಿ ತಾಯಿಯ ಗುಡಿಗೆ ತಂದು ಅರ​‍್ಿಸಿ ಧನ್ಯತಾ ಭಾವ ಮೆರೆಯುತ್ತಾರೆ,ನಂತರ ಪರಸ್ಪರ ಬಂಡಾರ ಎರಚುತ್ತ ದೇವಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚನ್ನಾಳ ಗ್ರಾಮದ ಭಕ್ತರಿಂದ ಪಟ್ಟಣದಲ್ಲಿರುವ ಎಲ್ಲ ಹನುಮಾನ ಮಂದಿರಗಳಿಗೆ ಪಾದರಕ್ಷೆಗಳ ಕೊಡುವ ಪದ್ದತಿಯನ್ನು ಭಯ ಭಕ್ತಿಯಿಂದ ಸಮರ​‍್ಿಸುತ್ತಾರೆ ನಂತರ ದೇವಿಗೆ ಉಡಿ ತುಂಬಿ ಪೂಜೆ ನೆರವೇರಿಸಲಾಗುತ್ತದೆ. ಸಂಜೆ ಹೊತ್ತಿಗೆ ಅನ್ನ ಪ್ರಸಾದ ಆರಂಭವಾಗಿ ಭಕ್ತಿಯಲ್ಲಿ ಮಿಂದೆದ್ದ ಸದ್ಭಕ್ತರು ಪ್ರಸಾದ ಸೇವಿಸಿ ಧನ್ಯತಾಭಾವ ಮೆರೆಯುತ್ತಾರೆ. 

ಜಾತ್ರೆಗೆ ಮೆರುಗು ಈ ಶುಕ್ರವಾರ ಜಾತ್ರೆಗೆ ಬೊಂಬೆ ರೂಪಕ, ಕುದುರೆ ಕುಣಿತ, ಹಲಗೆ ಮೇಳ ಕರಡಿ ಮೇಳ, ಸಂಬಾಳ ವಾದನ, ಕೈಪೆಟ್ಟ ಮೇಳ,ಹಾಗೂ ಸಂಗೀತ ಮೇಳದ ಜೊತೆಗೆ ಕುಂಬ ಕೊಡ ಹೊತ್ತ ಹೆಣ್ಣು ಮಕ್ಕಳು ದೇವಿ ಜಾತ್ರೆಗೆ ಮೆರುಗು ನೀಡಿದರು.ಊರಿನಲ್ಲಿ ಎಲ್ಲಿ ನೋಡಿದರೂ ಅಲ್ಲಿ ಬರಿ ಭಂಡಾರವೇ ಕಾಣುತಿತ್ತು, ಊರ ತುಂಬೆಲ್ಲ ಹಬ್ಬದ ವಾತಾವರಣ ಮನೆ ಮಾಡಿತ್ತು.ಜಾತ್ರೆಯ ಹಿಂದಿನ ದಿನ ನಗರದ ವಿವಿಧ ಕಲಾವಿದರಿಂದ ಸಂಗೀತ ಮನರಂಜನೆ ಮೂಜಿಕಲ್ ನೈಟ್ ಕಾರ್ಯಕ್ರಮ ಜನರ ಮನ ತನಿಸಿತು. 

 ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮಾಜಿ ಶಾಸಕ ಬಿ.ಜಿ ಜಮಖಂಡಿ, ನಾಗಪ್ಪ ಗೌಂಡಿ, ಅರ್ಜುನ ಆನೇಪ್ಪಗೋಳ, ಸಂತಪ್ಪ ದೊಡಮನಿ, ಚನ್ನಪ್ಪ ಮೇತ್ರಿ, ಸಂಜು ಕನಸಗೇರಿ, ಭೀಮಪ್ಪ ಕಿರಿಕಿರಿ, ಪ್ರಹ್ಲಾದ ಉತ್ತೂರ, ಸುಭಾಸ ಜಮಖಂಡಿ ಸೇರಿದಂತೆ ಸಮಾಜದ ಯುವಕರು ಭಾಗವಸಿದ್ದರು. 


ಸುದ್ದಿ ಓದಿ