ರಂಭಾಪುರಿ ಶ್ರೀಗಳಿಂದ ಆರ್ಶಿವಾದ ಪಡೆದ ದುಂಡಿಗೌಡ
ಶಿಗ್ಗಾವಿ 17: ನಿಮ್ಮ ಸಾಮಾಜಿಕ ಸೇವೆ ನಿರಂತರವಾಗಿರಲಿ ನಿಮ್ಮ ವಿಶೇಷ ಸಮಾಜಮುಖಿ ಕಾರ್ಯಗಳನ್ನು ಆಲಿಸುತ್ತಿದ್ದೇನೆ ಹಾಗೂ ದಿನನಿತ್ಯ ಪತ್ರಿಕೆಯಲ್ಲಿ ನೋಡುತ್ತಿದ್ದೇನೆ ನಿಮ್ಮ ರಾಜಕೀಯ ಶ್ರೇಯೋಭಿವೃದ್ಧಿಗೆ ನಮ್ಮ ಆಶೀರ್ವಾದ ಸದಾ ನಿಮ್ಮೊಂದಿಗಿದೆ ರಾಜಕೀಯ ಜೀವನದಲ್ಲಿ ಉನ್ನತ ಅಧಿಕಾರ ಸಿಗಲಿ ಎಂದು ಬಾಳೆಹೊನ್ನಿರಿನ ರಂಭಾಪುರಿ ಪೀಠದ ಜಗದ್ಗುರು ರಂಭಾಪುರಿ ವೀರಸಿಂಹಾಸನಾಧೀಶ್ವರ 1008 ಶ್ರೀಗಳು ಶ್ರೀಕಾಂತ ದುಂಡಿಗೌಡ್ರಗೆ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಸಾತಣ್ಣವರ, ಹನುಮರೆಡ್ಡಿ ನಡುವಿನಮನಿ, ಎಂ.ಎನ್. ವೆಂಕೋಜಿ, ರಮೇಶ ಸಾತಣ್ಣವರ, ಈಶ್ವರ ಹರಕುಣಿ,ಪಕ್ಕಿರ್ಪ ಕುಂದೂರ,ಬಸವರಾಜ ನಾರಾಯಣಪುರ, ನಾಗರಾಜ ಪಟ್ಟಣಶೆಟ್ಟಿ, ನಿಂಗಪ್ಪ ಅಣ್ಣಿಗೇರಿ ,ಎಲ್ಲಪ್ಪ ಹುಕ್ಕೇರಿ, ಈಶ್ವರಗೌಡ ಪಾಟೀಲ, ರಂಭಾಪುರಿ ಮಹಾವಿದ್ಯಾಲಯದ ಡಾ. ಪಿ.ಸಿ. ಹಿರೇಮಠ, ಡಾ.ಶ್ರೀಶೈಲ ಹುದ್ದಾರ, ಡಾ. ಬಿ.ವಾಯ. ತೊಂಡಿಹಾಳ, ಶಿವಯ್ಯ ಪೂಜಾರ , ಪ್ರೊ ಶಿವಪ್ರಕಾಶ್ ಬಳಿಗಾರ, ವಿನಯ ,ಬಸವರಾಜ ಹೊನ್ನಣವರ ಎಂ.ಎಸ್. ಸಿದ್ಧಪನವರ ,ಎಫ್.ಎಸ್. ಶಿವಣ್ಣನವರ, ಎಮ್.ಎಸ್. ಸಂಗಣ್ಣವರ, ಸಿದ್ಧಲಿಂಗಸ್ವಾಮಿ ಕುಲಕರ್ಣಿ, ಎನ್.ಸಿ. ನಾಯಕ್,ಎಸ್.ಎನ್. ತೀರ್ಥ, ಎಸ್.ವ್ಹಿ. ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು.