ಉಚಿತ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ
ಬಳ್ಳಾರಿ 30: ಸನ್ಮಾರ್ಗ ಗೆಳೆಯರ ಬಳಗ ಹಾಗೂ ಗುರು ಪುμÀ್ಕರ ಸೇವಾ ಸಮಿತಿ ಸಹಯೋಗದಲ್ಲಿ ನಗರದ ಕಾಳಮ್ಮ ರಸ್ತೆಯಲ್ಲಿ ಪರಿಶುದ್ಧವಾದ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ ನೀಡಿ ಮಾತನಾಡಿದ ಸನ್ಮಾರ್ಗದ ಅಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ಬಳ್ಳಾರಿಯಲ್ಲಿ ದಿನವೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ರಸ್ತೆಯಲ್ಲಿ ಸಾವಿರಾರು ಜನರು, ವಿದ್ಯಾರ್ಥಿಗಳು ಓಡಾಡುತ್ತಿದ್ದು ಅವರ ದಾಹ ತೀರಿಸಲು ಎರಡು ಸಂಸ್ಥೆಗಳು ಸೇರಿ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರೂಪ್ ಚಂದ್ ಜೈನ್, ಪವರ ಲಾಲ್, ದಿನೇಶ್, ಪ್ರಕಾಶ್ ಮೆಹೆತಾ, ಬಾಬುಲಾಲ್ ಬಂಡಾರಿ, ಅಶೋಕ್ ಭಂಡಾರಿ, ಪ್ರವೀಣ್ ಭಂಡಾರಿ, ಪ್ರವೀಣ್ ಪಾರೇಖ್, ತೇಜಾ ರಘುರಾಮರಾವ್, ಕಪ್ಪಗಲ್ಲು ಚಂದ್ರಶೇಖರ ಆಚಾರ್. ಸಿದ್ದು ವಣೇನೂರು, ವಿಶ್ವ ಸುರೇಶ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.