ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿ
ಚಿಕ್ಕೋಡಿ ಜುಲೈ 27: ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯ ಸಕರ್ಾರಿ ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿ ನಿಮರ್ಾಣ ಸೇರಿದಂತೆ ಶಾಲಾ ದುರುಸ್ತಿಗೆ ರಾಜ್ಯದಲ್ಲೆ ಅತಿ ಹೇಚ್ಚು ಅನುದಾನ ತಂದು,ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನಿಡಿದ್ದಾರೆ ಎಂದು ಜಿಪಂ ಸದಸ್ಯ ಸಿದ್ದು ನರಾಟೆ ಹೇಳಿದರು.
ನಿಪ್ಪಾಣಿ ಸಮೀಪದ ಶ್ರೀಪೆವಾಡಿ, ಗಳತಗಾದ ಹಳದಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಿಪ್ಪಾಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 55 ಹೊಸ ಶಾಲಾ ಕೊಠಡಿ ನಿಮರ್ಾಣವಾಗಲಿದ್ದು,ಜೊಲ್ಲೆ ದಂಪತಿಗಳು ಸಾಮಾಜಿಕ,ರಾಜಕೀಯ,ಧಾಮರ್ಿಕ ಕ್ಷೇತ್ರ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೂ ಕೂಡ ಆದ್ಯತೆ ನಿಡಿದ್ದಾರೆ ಎಂದರು.
ಗ್ರಾಮದಲ್ಲಿ ಸಕರ್ಾರಿ ಶಾಲೆಗಳಲ್ಲಿ ಮಕ್ಕಳ ಸಂಖೈ ಹೇಚ್ಚಾಗಿದೆ.ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನಿಡಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತಿದೆ. ಸುಸಜ್ಜಿತ ಕಟ್ಟಡ ನಿಮರ್ಾನ ಮಾಡಲು ಗುತ್ತಿಗೆದಾರರಿಗೆ ಸೂಚನೆ ನಿಡಲಾಗಿದೆ ಎಂದರು.
ಹಾಲಸಿದ್ಧನಾಥ ಸಕ್ಕರೆ ಕಾಖರ್ಾನೆ ಉಪಾಧ್ಯಕ್ಷ ಎಂ.ಪಿ.ಪಾಟೀಲ, ತಾ.ಪಂ ಸದಸ್ಯ ದತ್ತಾತ್ರಯ ವಡಗಾಂವೆ, ಭಾಸ್ಕರ ಖೋತ, ಸುನೀಲ ಸುತಾರ,ದಯಾನಂದ ಸ್ವಾಮಿ,ರಾಜೇಂದ್ರ ಖೋತ, ಸುನೀಲ ಮಾನೆ, ಪಾಂಡುರಂಗ ಶಿಂಪುಕಡೆ, ಸುಜೀತ ಶಿಂಪುಕಡೆ,ವಿಜಯ ಪವಾರ, ಕೇಶವ ಕುಂಭಾರ, ಸಚೀನ ಕುಂಭಾರ,ಮಹೇಶ ಶಿಂಪುಕಡೆ, ರಂಗರಾವ ವಡಗಾಂವೆ, ಬಸವರಾಜ ಹುಂದರಿ, ಆರ್.ಎಸ್.ತರಾಳ, ಪಂಡೀತ ಶಿಂಪುಕಡೆ ಹಾಜರಿದ್ದರು.