ಮಹಲಿಂಗಪುರ

ಸಿದ್ಧಾರೂಢರ ಜ್ಯೋತಿ ಪಾದಯಾತ್ರೆಗೆ ಚಾಲನೆ

ಸಿದ್ಧಾರೂಢರ ಜ್ಯೋತಿ ಪಾದಯಾತ್ರೆಗೆ ಚಾಲನೆ
ಮಹಾಲಿಂಗಪುರ : ಸಹಜಾನಂದ ಸ್ವಾಮಿಜಿ ನೇತೃತ್ವದಲ್ಲಿ ನೂರಾರು ಭಕ್ತರು ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಪಾದಯಾತ್ರೆ ಕೈಗೊಂ

ಮಹಾಲಿಂಗಪುರ 06: ನಮ್ಮ ಆಶ್ರಮದಿಂದ ಹುಬ್ಬಳ್ಳಿಯ ಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ಕಳೆದ 17ವμರ್Àಗಳ ಸುದೀರ್ಘ ಪಾದಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿದ್ದೇವೆ. ಇದರಿಂದ ಮಾನವನ ಅಸ್ಥಿರವಾದ ಮನಸ್ಸು ಪರಿಶುದ್ಧಗೊಂಡು, ಆರೋಗ್ಯದಲ್ಲಿ ಸುಧಾರಣೆಯಲ್ಲದೆ ಎಲ್ಲರೂ ಒಟ್ಟಾಗಿ ಮಾಡುವ ಪಾದಯಾತ್ರೆಯು ಭ್ರಾತೃತ್ವದೊಂದಿಗೆ ಏಕತೆಯನ್ನು ಸಾರುವುದೇ ಆಗಿದೆ ಎಂದು ಸಹಜಾನಂದ ಮಹಾಸ್ವಾಮಿಗಳು ಹೇಳಿದರು.

ಸ್ಥಳಿಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಿಂದ ಮುಂಜಾನೆ 7ಗಂಟೆಗೆ ಶೃಂಗಾರಗೊಂಡ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಅವರು ಭಕ್ತರನ್ನುದ್ದೇಶಿಸಿ  ಮಾತನಾಡಿದರು.

ಜಾಥಾ ಕಾರ್ಯದರ್ಶಿ ಬಾಬುರಾವ ಹಾದಿಮನಿ ಮಾತನಾಡಿ ಪಾದಯಾತ್ರೆಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತವೆ. ಬಡವ ಶ್ರೀಮಂತ,ಮೇಲು-ಕೀಳು ಎಂಬ ಬೇಧ ಭಾವ ತೊಲಗಿ ಪರಸ್ಪರರಲ್ಲಿ ಸೇವಾ ಮನೋಭಾವ ಬೆಳೆಯುತ್ತದೆ. 

ನಗರದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ಇದೊಂದು ಶಾಂತಿ ಹಾಗೂ ಅಪರೂಪದ ಪಾದ ಯಾತ್ರೆಯಾಗಿದೆ. ಆದ್ದರಿಂದ ಪ್ರತಿವμರ್Àವೂ ಪಾದಯಾತ್ರೆಯಲ್ಲಿ ಜನಜಂಗುಳಿಯೇ ಸೇರುತ್ತಿದ್ದು, ನಾಡಿನಾದ್ಯಂತ ಈ ಪಾದಯಾತ್ರೆಯು ಆದ್ಯಾತ್ಮದ ಜ್ಯೋತಿಯನ್ನು ಬೆಳಗಿಸಲಿ ಎಂದರು. 

ವರ್ತಮಾನದಲ್ಲಿ ಯುವಕರಾದಿಯಾಗಿ ಜನರಲ್ಲಿ ಅಧ್ಯಾತ್ಮದ ಒಲವು ಕಡಿಮೆಯಾಗುತ್ತಾ ಬರುತ್ತಿದ್ದು ಇಂತಹ ಪಾದಯಾತ್ರೆಗಳು ಅವರನ್ನು ಜಾಗೃತಿಗೊಳಿಸುವುದೇ ಆಗಿದೆ ಎಂದರು.

ಆಶ್ರಮದಿಂದ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಸಿದ್ಧಾರೂಢರ ಭಕ್ತರು ನಾಮಸ್ಮರಣೆ ಮಾಡುತ್ತಾ ಸಿದ್ಧಾರೂಢರ ಜ್ಯೋತಿ ಹಾಗೂ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದ್ದರು.

ಗಂಗಪ್ಪ ಕರಡಿ, ಚನಮಲ್ಲ ಕರಡಿ, ಹೊನ್ನಪ್ಪ ಕರಡಿ ಸೇರಿದಂತೆ ಸ್ಥಳೀಯ ಕರಡಿ ಕಲಾವಿದರು ಸಿದ್ಧಾರೂಢ ರಿಗೆ ಕರಡಿ ಸೇವೆಯನ್ನು ಸಲ್ಲಿಸಿ ಕೃತಾರ್ಥರಾದರು.

ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಿಂದ ಹೊರಟ ಪಾದಯಾತ್ರೆಯಲ್ಲಿ ಕಲಬುರ್ಗಿ ಜಿಲ್ಲೆಯ ಕಡಗಂಚಿ, ಬೆಳಗಾವಿ ಜಿಲ್ಲೆಯ ಯಕ್ಸಂಬಾ, ಖಾನಟ್ಟಿ ಹಾಗೂ ಬಾಗಲಕೋಟ ಜಿಲ್ಲೆಯ ಗದ್ಯಾಳ, ಮೇಟಗುಡ್ಡ, ಸೈದಾಪೂರ, ಸಂಗಾನಟ್ಟಿ, ಹೊಸೂರ,ಚಿಮ್ಮಡ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ 300ಕ್ಕೂ ಹೆಚ್ಚು ಭಕ್ತರು ಮಹಾಲಿಂಗೇಶ್ವರ ದರ್ಶನ ಪಡೆದು ಅಕ್ಕಿಮರಡಿ ಮಾರ್ಗವಾಗಿ ಪ್ರಯಾಣ ಬೆಳಸಿದರು. ಯಾದವಾಡ, ಚಿಕ್ಕೊಪ್ಪ, ಚಂದರಗಿ, ಮುನ್ನೊಳ್ಳಿ, ಸವದತ್ತಿ, ಅಮ್ಮಿನಭಾವಿ, ರಾಯರ ಹೆಬ್ಬಳ್ಳಿ ಮಾರ್ಗವಾಗಿ ಮಾರ್ಚ 11 ರಂದು ಹುಬ್ಬಳ್ಳಿಯ ಸಿದ್ಧಾರೂಢ ಮಠ ತಲುಪಲಿದ್ದಾರೆ.

ಹೊಸೂರಿನ ಪರಮಾನಂದ ಸ್ವಾಮಿಜಿ, ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ನಿಯೋಜಿತ ಉತ್ತರಾಧಿಕಾರಿ ಜ್ಞಾನಮಯಾನಂದ ಸ್ವಾಮಿಜಿ, ಸಿದ್ದಾರೂಢ ಟ್ರಸ್ಟ್ ಕಮೀಟಿ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಧರ್ಮದರ್ಶಿಗಳಾದ ಮಲ್ಲಪ್ಪ ಭಾಂವಿಕಟ್ಟಿ, ಲಕ್ಕಪ್ಪ ಚಮಕೇರಿ, ಸದ್ಭಕ್ತರಾದ ಜಯಪ್ಪ ಘಟ್ನಟ್ಟಿ, ಪರಪ್ಪ ಹುದ್ದಾರ, ಸುಭಾಸ ನಾಯಕ, ಸುರೇಶ ಕೆಂಪವಾಡ, ಬಸಪ್ಪ ಗುರವ, ಶ್ರೀಕಾಂತ ಪರೀಟ, ಮುತ್ತಪ್ಪ ಸವದಿ, ಮಲ್ಲಪ್ಪ ಯಾದವಾಡ(ರೆಡ್ಡಿ), ಮಹೇಶ ಬಡಿಗೇರ, ತುಕಾರಾಮ ಮಣ್ಣಿಕೇರಿ, ಸಿದ್ದರಾಮಯ್ಯ ಗೋಠೆ, ಚನ್ನಪ್ಪ ಚಂಡೋಲ, ಬಾಗಪ್ಪ ಹನಗಂಡಿ, ಬಾಳಪ್ಪ ತುಪ್ಪದ, ಮಹಾಲಿಂಗ ಜಿಟ್ಟಿ, ಸದಾಶಿವ ಇಂಗಳಗಿ, ಉಮೇಶ ಮೇಟಿ, ಸಿದ್ದಪ್ಪ ಗಿಡ್ಡನ್ನವರ, ಎಸ್.ಕೆ.ಗಿಂಡೆ, ಸಿದ್ದು ದಢೂತಿ ಸೇರಿದಂತೆ ಹಲವರು ಇದ್ದರು.

ಸುದ್ದಿ ಓದಿ