ಖಡಕಲಾಟ-ಚಿಂಚಣಿ ರಸ್ತೆ ಕಾಮಗಾರಿಗೆ ಶಾಸಕ ಹುಕ್ಕೇರಿ ಚಾಲನೆ
ಚಿಕ್ಕೋಡಿ 01: ಖಡಕಲಾಟ ಗ್ರಾಮದ ಬಳೋಬಾ ಕ್ರಾಸದಿಂದ ಕೋಥಳಿ, ಶಾಂತಿನಗರ ಮಾರ್ಗವಾಗಿ ಚಿಂಚಣಿಗೆ ತಲಪುವ 1.65 ಕೋಟಿ ರೂ ವೆಚ್ಚದ 13 ಕಿಲೊ ಮಿಟರ್ ರಸ್ತೆ ಕಾಮಗಾರಿಗೆ ಶಾಸಕ ಗಣೇಶ್ ಹುಕ್ಕೇರಿ ಚಾಲನೆ ನೀಡಿದರು.
ಚಿಕ್ಕೊಡಿ ಸದಲಗಾ ಕ್ಷೇತ್ರಕ್ಕೆ ಪ್ರಕಾಶ್ ಹುಕ್ಕೇರಿಯವರು ಶಾಸಕರಾಗಿ ಆಯ್ಕೆ ಆದಾಗಿನಿಂದ. ಕ್ಷೇತ್ರದೆಲ್ಲೆಡೆ ಸುಸಜ್ಜಿತ ರಸ್ತೆ ಕಾಮಗಾರಿಳನ್ನು ಮಾಡಿ ಸಾಋವಜನಿಕರಿಗೆ ಉತ್ತಮ ರಸ್ತೆಗಳನ್ನು ಒದಗಿಸಿದ್ರು. ಅವರಂತೆಯೆ ಶಾಸಕ ಗಣೇಶ್ ಹುಕ್ಕೇರಿಯವರು ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೊರೊನಾ ಮಹಾಮಾರಿಯಿಂದ ಸರ್ಕಾರದಿಂದ ಅನುದಾನ ಬರದೆ ಇರುವ ಹಿನ್ನೆಲೆ, ಕೆಲವು ದಿನಗಳ ಕಾಲ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳ ಕಾರ್ಯ ಸ್ಥಗಿತ ಗೊಂಡಿತ್ತು. ಆದರೆ ಶಾಸಕರಾದ ಗಣೇಶ್ ಹುಕ್ಕೇರಿಯವರ ವಿಶೇಷ ಪ್ರಯತ್ನದಿಂದ ಕ್ಷೇತ್ರದಲ್ಲಿ ಈಗ ಮತ್ತೆ ರಸ್ತೆ ಕಾಮಗಾರಿಗಳ ಭರದಿಂದ ಸಾಗಿದೆ ಎನ್ನುತ್ತಾರೆ ಸ್ಥಳೀಯರು.
ಈ ವೇಳೆ ಮಾತಮಾಡಿದ ಶಾಸಕ ಗಣೇಶ ಹುಕ್ಕೇರಿ ಅವರು, ಗ್ರಾಮಸ್ಥರ ಅನಾನಕೂಲವನ್ನ ಅರಿತುಕೊಂಡು ಸರ್ಕಾರದಲ್ಲಿ ಅನುದಾನ ಇರದೆ ಇದ್ರು ಕೂಡ, ವಿಶೇಷ ಪ್ರಯತ್ನ ಮಾಡಿ ಅನುದಾನ ತಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಗುತ್ತಿಗೆದಾರರು ಆದಷ್ಟು ಬೇಗ ಗುಣಮಟ್ಟದ ರಸ್ತೆ ಕಾರ್ಯವನ್ನು ಪೂರ್ಣಗಿಳಿಸಿ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ಸತೀಶ ಪಾಟೀಲ, ರಾಜೇಶ ಚಿಂಚಣಿ ಮುಂತಾದವರು ಇದ್ದರು.