ಪಂಚಮಸಾಲಿ ಸಮುದಾಯ ಭವನದ ರಸ್ತೆ ಡಾಂಬರೀಕರಣಕ್ಕೆ ಸಚಿವರಿಂದ ಚಾಲನೆ
ಮಹಾಲಿಂಗಪುರ 12: ಮುಧೋಳ ತಾಲೂಕಿನ ಬೆಳಗಲಿ ಪಟ್ಟಣದ ಸರಹದ್ದಿನ ನಂದಗಾವ ವಿತರಣಾ ಕಾಲುವೆಯಿಂದ ಪಂಚಮಸಾಲಿ ಲಿಂಗಾಯತ ಕಿತ್ತೂರು ರಾಣಿ ಚೆನ್ನಮ್ಮ ಮಂಗಲ ಭವನದ ವರೆಗೆ ಸುಮಾರು 500ಮೀಟರ್ ಉದ್ದದ ರಸ್ತೆ ಸುಧಾರಣೆಯ ಭೂಮಿ ಪೂಜೆ ಕಾರ್ಯಕ್ರಮವನ್ನು ರಾಜ್ಯದ ಜಲಸಂಪನ್ಮೂಲ ಸಚಿವರು ಹಾಗೂ ಮುಧೋಳ ಕ್ಷೇತ್ರದ ಶಾಸಕರಾದ ಗೋವಿಂದ ಎಂ ಕಾರಜೋಳ ನೆರವೇರಿಸಿದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪಂಚಮಸಾಲಿ ಪೀಠದ ಜಗದ್ಗುರು ಜಯ ಬಸವ ಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಪಂಚಮಸಾಲಿ ಸಮಾಜದ ಹಿರಿಯರಾದ ಡಾ.ಎ.ಆರ್.ಬೆಳಗಲಿ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಹನುಮಂತ ಶಿರೋಳ, ಪಂಡಿತ ಪೂಜಾರ, ಈರಪ್ಪ ದಿನ್ನಿಮನಿ, ವಿಜಯಕುಮಾರ ಕುಳಲಿ, ಸಿದ್ದುಗೌಡ ಪಾಟೀಲ್, ಚೆನ್ನಪ್ಪ ಪಟ್ಟಣಶೆಟ್ಟಿ, ಗಂಗಪ್ಪ ಬೀಸನಕೊಪ್ಪ, ಅಶೋಕ ಸಿದ್ದಾಪುರ, ಮಹಾಂತೇಶ ಹಿಟ್ಟಿನಮಠ, ಶ್ರೀಶೈಲಪ್ಪ ರೊಡ್ಡನ್ನವರ, ಮುತ್ತಪ್ಪ ದಲಾಲ, ಮಹಾಲಿಂಗ ಕಂಠಿ, ಬಸವರಾಜ ದೊಡ್ಡಟ್ಟಿ, ಷಣ್ಮುಖಪ್ಪ ಉಳ್ಳೇಗಡ್ಡಿ, ರಾಜುಗೌಡ ಯಡಹಳ್ಳಿ, ಕುಮಾರ ಹುಲಕುಂದ, ಕೆ.ಆರ್. ಮಾಚಪ್ಪನವರ, ಶಿವನಗೌಡ ಪಾಟೀಲ, ಮಹಾಲಿಂಗ ಶಿರೋಳ, ಬಸವರಾಜ ಚಿಕ್ಕಣ್ಣವರ್, ಚನ್ನಬಸು ಯರಗಟ್ಟಿ ಇನ್ನು ಮುಂತಾದವರು ಉಪಸ್ಥಿತರಿದ್ದರು.