ಬಲಿಗಾಗಿ ಕಾಯುತ್ತಿರುವ ಒಳಚರಂಡಿ
ಸಿಂದಗಿ:27ಪಟ್ಟಣದ ಹೃದಯಭಾಗದಲ್ಲಿರುವ ಕಾಳಿಕಾನಗರದ ಭಡಾವಣೆಯ ಮುಖ್ಯ ರಸ್ತೆಯ ಮಧ್ಯ ಇರುವ ಒಳಚರಂಡಿ ಬಲಿಗಾಗಿ ಕಾದಿವೆ ಎಂದು ಸಾರ್ವಜನಿಕರ ಆಕ್ರೋಶ.
ಇಲ್ಲಿಯ ವಾರ್ಡನಂ3ರಲ್ಲಿರುವ ರಸ್ತೆ ಮಧ್ಯ ನಿರ್ಮಿಸಿರಿವ ಒಳ ಚರಂಡಿಯು ಸಂಪೂರ್ಣ ಹಾಳಾಗಿದ್ದು ಕಿಚ್ಚಿತ್ತು ಪುರಸಭೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಇಲ್ಲಿಯ ನಿವಾಸಿಗರು ಪುರಸಭೆ ಅಧಿಕಾರಿಗಳಿಗೂ ಚುನಾಯಿತ ಪ್ರತಿನಿಧಿಗಳಿಗು ಹಿಡಿಶಾಪ ಹಾಕುತ್ತಿದ್ದಾರೆ. ಇದೇ ರೀತಿ ಹಿಂದೆ ಲೋಕದರ್ಶನ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ನೋಡಿದ ಅಧಿಕಾರಿಗಳು ಬಾಯತರೆದ ಒಳಚರಂಡಿಯ ಸುತ್ತ ಮುಳ್ಳುಕಂಟಿಯನ್ನು ಇಟ್ಟು ಕೈಯಿತೊಳದುಕೊಂಡಿದ್ದಾರೆ. ಎಂದು ಇಲ್ಲಿಯ ನಿವಾಸಿಗಳಾದ ಪುರಸಭೆಯ ಅಧಿಕಾರಿಗಳಿಗೆ ಮಹಿಳೆರು ಅಧಿಕಾರಯಗಳಿಗೆ ಲಟಗಿ ಮುರಿಯುತ್ತಿದ್ದಾರೆ. ಈಗಗಾಲೇ ಅನೇಕರು ಈ ಚರಂಡಿಯಲ್ಲಿ ರಾತ್ರಿಯ ವೇಳೆಯಲ್ಲಿ ಬಿದ್ದಿದ್ದಾರೆ ಎನ್ನುತ್ತಾರೆ. ಪ್ರತ್ಯಕ್ಷದರ್ಶಗಳು ಇದು ಏನು ಯಾರರೆ ಇಲ್ಲಿ ಬಿದ್ದಸಾಯಿ ತನಕ ಈ ಗುಂಡಿ ಮುಚ್ಚಂಗ ಕಾಣಲ್ರಿ ಅನ್ನುತ್ತಾರೆ ಇದೆ ಮಾರ್ಗದಲ್ಲಿ ಸಂಚರಿಸುವರು ಸಾರ್ವಜನಿಕರು. ಇದನ್ನು ಕಂಡ ಕೂಡಲೆ ಅಧಿಕಾರಿಗಳು ಒಳಚರಂಡಿಯ ದುರಸ್ತಿ ಕಾರ್ಯದಲ್ಲಿ ಮುಂದಾಗಬೇಕು ಒಂದು ವೇಳೆ ಇದನ್ನು ನೋಡಿಯು ಅಧಿಕಾರಿಗಳು ಸುಮ್ಮನಿದ್ದರೆ ಕನ್ನಡಪರ ಸಂಘಟನೆಯ ಒಳಗೊಂಡು ಹೋರಾಟ ಮಾಡಬೇಕಾಗುತ್ತದೆ ಎಂದು ಇಲ್ಲಿಯ ನಿವಾಸಿಗರು ಎಚ್ಚರಿಸಿದ್ದಾರೆ.