ಕರಡು ಮತದಾರರ ಪಟ್ಟಿ ಪ್ರಕಟ; ಹೆಸರು ಪರೀಶೀಲಿಸಿ
ಮುಂಡಗೋಡ 25 : ಎಸ್ಐಆರ್ ಪ್ರಕ್ರಿಯೆಯ ಎರಡನೇ ಹಂತದ ಕರಡು ಮತದಾರರ ಪಟ್ಟಿಯನ್ನು ಆ.24ರಂದು ಪ್ರಕಟಿಸಲಾಗಿದ್ದು, ಮತದಾರರು ತಮ್ಮ ಹೆಸರು ಪರೀಶೀಲಿಸಿಕೊಳ್ಳುವಂತೆ ತಹಶೀಲ್ದಾರ್ ಪ್ರಸಾದ ಎಸ್.ಎ. ತಿಳಿಸಿದ್ದಾರೆ. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನಮೂನೆ-6 ಹಾಗೂ ಹೆಸರು ಅಥವಾ ವಿಳಾಸ ತಿದ್ದುಪಡಿಗೆ ನಮೂನೆ-8 ಮೂಲಕ ಅರ್ಜಿ ಸಲ್ಲಿಸಬಹುದು. ಅ.1, 2026ಕ್ಕೆ 18 ವರ್ಷ ಪೂರೈಸುವ ಅರ್ಹರು ಕೂಡ ನಮೂನೆ-6 ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತಾಲೂಕಿನಲ್ಲಿ 78,428 ಮತದಾರರಿದ್ದು, 98 ಮತಗಟ್ಟೆಗಳಿವೆ. ಎಸ್ಐಆರ್ನ ಅಂತಿಮ ಮತದಾರರ ಪಟ್ಟಿಯನ್ನು ಅ.27ರಂದು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.