ಮಹಲಿಂಗಪುರ

ಅಧ್ಯಕ್ಷರಾಗಿ ಡಾ. ಅಶೋಕ, ಉಪಾಧ್ಯಕ್ಷರಾಗಿ ಶಿವಾನಂದ ಆಯ್ಕೆ.

ಅಧ್ಯಕ್ಷರಾಗಿ ಡಾ. ಅಶೋಕ, ಉಪಾಧ್ಯಕ್ಷರಾಗಿ ಶಿವಾನಂದ ಆಯ್ಕೆ.

ಮಹಾಲಿಂಗಪುರ: ವೀರರಾಣಿ ಕಿತ್ತೂರು ಚೆನ್ನಮ್ಮ ಸೌಹಾರ್ದ ಸಹಕಾರಿ ನಿಯಮಿತ ಮಹಾಲಿಂಗಪುರ ಇದರ ನೂತನ ಅಧ್ಯಕ್ಷರಾಗಿ ಡಾ. ಅಶೋಕ ಚಂದ್ರನಾಯಕ ದಿನ್ನಿಮನಿ, ಉಪಾಧ್ಯಕ್ಷರಾಗಿ ಶಿವಾನಂದ ಗುರುಲಿಂಗಪ್ಪ ಹುಬ್ಬಳ್ಳಿ ಆಯ್ಕೆಯಾಗಿದ್ದಾರೆ ಎಂದು ರಿಟನಿಂರ್ಗ್ ಆಫೀಸರ್ ಎಸ್‌. ಆರ್‌. ನ್ಯಾಮಗೌಡ ತಿಳಿಸಿದರು. ಶುಕ್ರವಾರ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. 

 ಹಾಗೂ ನಿಕಟಪೂರ್ವ ಅಧ್ಯಕ್ಷ ಚನ್ನಪ್ಪ ಪಟ್ಟಣಶೆಟ್ಟಿ, ಸದಸ್ಯರಾದ ಹನುಮಂತ ಕೊಣ್ಣೂರ, ಹನುಮಂತ ಶಿರೋಳ, ಬಸವರಾಜ ದಲಾಲ, ಕಸ್ತೂರೆವ್ವ ಕುಳಲಿ, ಸುಜಾತಾ ಬಿಸ್ವಾಗರ ಆಡಳಿತ ಮಂಡಳಿ ನಿರ್ದೇಶಕರಾಗಿ ಪುನರಾಯ್ಕೆಯಾದರು.ಬಸಪ್ಪ ಕೊಪ್ಪದ ಹಾಗೂ ಚನ್ನಬಸು ಯರಗಟ್ಟಿ ನೂತನ ನಿರ್ದೇಶಕರಾಗಿ ಆಯ್ಕೆಯಾದರು. ಮ್ಯಾನೇಜರ್ ಮಲ್ಲಿಕಾರ್ಜುನ ಇಟ್ನಾಳ, ವಿಜಯಕುಮಾರ ಕುಳಲಿ ಇದ್ದರು. 


ಸುದ್ದಿ ಓದಿ