ಕೆಎಂಸಿ ಅಧ್ಯಕ್ಷರಾಗಿ ಡಾ.ಯೋಗಾನಂದ ರೆಡ್ಡಿ ಆಯ್ಕೆ
ಬಳ್ಳಾರಿ 20: ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕ ವೈದ್ಯಕೀಯ ಪರಿಷತ್ತಿನ (ಕೆಎಂಸಿ) ಅಧ್ಯಕ್ಷರಾಗಿ ಬಳ್ಳಾರಿಯ ಖ್ಯಾತ ಮಕ್ಕಳ ತಜ್ಞರಾದ ಡಾ.ಯೋಗಾನಂದ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ. ಈ ಕುರಿತು ತಮ್ಮ ಸಂತಸ ವ್ಯಕ್ತಪಡಿಸಿರುವ ಬಳ್ಳಾರಿಯ ಐಎಂಎ ಅಧ್ಯಕ್ಷರಾದ ಡಾ.ಶ್ರೀನಿವಾಸಲು ಡಿ. ಅತ್ಯಂತ ಅರ್ಹ ವ್ಯಕ್ತಿಗೆ ಈ ಸ್ಥಾನ ಸಿಕ್ಕಿದೆ ಎಂದು ತಿಳಿಸುತ್ತಾ ಅವರಿಗೆ ಸಂಘದ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದೇ ಚುನಾವಣೆಯಲ್ಲಿ ಮೈಸೂರಿನ ಕ್ಯಾನ್ಸರ್ ತಜ್ಞರಾದ ಡಾ.ರವಿ ಕೃಷ್ಣಪ್ಪ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದು, ಭಾರತೀಯ ವೈದ್ಯಕೀಯ ಸಂಘ ಬಳ್ಳಾರಿ ಶಾಖೆಯ ಕಾರ್ಯದರ್ಶಿಯಾದ ಡಾ.ರಾಘವೇಂದ್ರ, ಉಪಾಧ್ಯಕ್ಷರಾದ ಡಾ.ಮಾಣಿಕ್ ರಾವ್ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಡಾ.ಸಂಗೀತ ಕಟ್ಟೀಮನಿ, ಖಜಾಂಚಿ ಡಾ.ವಾರಿಜಾ ಟಿ. ಹಾಗೂ ಸಂಘದ ಸರ್ವ ಸದಸ್ಯರು ಡಾ. ಯೋಗಾನಂದ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.