ಬಳ್ಳಾರಿ

ಗೃಹಕ್ಕೆ ಬೆನ್ನು ತೋರಿ ಗ್ರಹಗಳಿಗೆ ಮೊರೆಹೋಗುವುದು ಮೌಢ್ಯ: ಗಂಗಾಧರ ಪತ್ತಾರ್‌

ಗೃಹಕ್ಕೆ  ಬೆನ್ನು ತೋರಿ ಗ್ರಹಗಳಿಗೆ ಮೊರೆಹೋಗುವುದು ಮೌಢ್ಯ: ಗಂಗಾಧರ ಪತ್ತಾರ್‌

ಬಳ್ಳಾರಿ, ಡಿ.4: ಗ್ರಹಗತಿ, ಫಲಾಫಲ ನಂಬಿಕೆಯಿಂದ ಮನುಷ್ಯನ ಪ್ರಗತಿ ಕುಂಠಿತವಾಗುತ್ತದೆ. ಎಲ್ಲಾ ಪ್ರಾರಬ್ಧ, ನನ್ನ ಗ್ರಹಗತಿಯೇ ಹಾಗಿದೆ ಎಂದು ಗ್ರಹಶಾಂತಿಗಾಗಿ ಹಲವರು ಇದ್ದ ದುಡ್ಡು ಮತ್ತು ಮನಃಶಾಂತಿ ಎರಡನ್ನೂ ಕಳೆದುಕೊಳ್ಳುತ್ತಾರೆ. ಕಾಣದ ಗ್ರಹಬಲ ನಂಬುತ್ತಾರಾಗಲೀ, ಹಿತೈಷಿ ಬಂಧುಮಿತ್ರರನ್ನು-ಪತ್ನಿಯನ್ನೂ ನಂಬದವರಾಗುತ್ತಾರೆ. ಪಂಚಾಂಗ ನಂಬಿಕೆಯು ಮನುಜನ ಬುದ್ಧಿಭ್ರಮಣಗೊಳಿಸುತ್ತದೆ. ಭವಿಷ್ಯ ತಿಳಿಯುವ ಹುಚ್ಚಿನಲ್ಲಿ ಯಂತ್ರ-ಮಂತ್ರ-ತಂತ್ರಗಳ ಸುಳಿಯಲ್ಲಿ ಸಿಕ್ಕು ತಮ್ಮ ಭವಿಷ್ಯ ತಾವೇ ಹಾಳುಮಾಡಿಕೊಳ್ತಾರೆ” ಎಂಬ ಪ್ರಗತಿಪರ-ಕ್ರಾಂತಿಕಾರಿ ದೃಷ್ಟಿಕೋನದ ವೈ.ನಾಗೇಶಶಾಸ್ತ್ರಿಗಳದಾಗಿತ್ತು.”-ಎಂದು ಟಿ.ಕೆ.ಗಂಗಾಧರ ಪತ್ತಾರ ಹೇಳಿದರು. 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕವು ನಗರದ ಮೃತ್ಯುಂಜಯ ಕುಟೀರದಲ್ಲಿ ಏರಿ​‍್ಡಸಿದ 296ನೇ ಮಹಾಮನೆ ಡಾ. ವೈ.ನಾಗೇಶ ಶಾಸ್ತ್ರಿಗಳ ದತ್ತಿ ಕಾರ್ಯಕ್ರಮದಲ್ಲಿ  ಶರಣ ಸಾಹಿತ್ಯ ಡಾ. ವೈ. ನಾಗೇಶಶಾಸ್ತ್ರಿ ಕುರಿತು ಮಾತನಾಡುತ್ತಾ, ಕನ್ನಡದ ಕಣ್ವ, ಬಿ.ಎಂ.ಶ್ರೀ, ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿಯವರು ಯಾವುದೇ ಸಂದರ್ಭದಲ್ಲಿ ಬಳ್ಳಾರಿ ಎಂಬ ಹೆಸರು ಕಿವಿಗೆ ಬಿದ್ದರೂ ಸಾಕು “ಓ! ಸರ್ವದರ್ಶನ ತೀರ್ಥರು ನೆಲೆಸಿರುವ ಪುಣ್ಯಭೂಮಿ” ಎಂದು ಹರ್ಷದಿಂದುದ್ಗರಿಸಿ ಭಾವ ಪುಳಕಿತರಾಗುತ್ತಿದ್ದರು, ಬಳ್ಳಾರಿ ಬಿರುಬಿಸಿಲು ಭಾರತದ ಸಿರಿಭೂವಲಯಕ್ಕೆ ವಿದ್ವತ್ ಕಾಣ್ಕೆಯಾಗಿ ಸಮರ​‍್ಿಸಿದ ಅಪೂರ್ವ ಜ್ಞಾನನಿಧಿ ವೈ.ನಾಗೇಶ ಶಾಸ್ತ್ರಿಗಳು. ಬಳ್ಳಾರಿಯ ಹೆಸರನ್ನು ಇಡೀ ಭಾರತ ದೇಶದ ವಿದ್ವತ್ ವಲಯದಲ್ಲಿ ದೇದೀಪ್ಯಮಾನವಾಗಿ ಪ್ರಕಾಶಗೊಳಿಸಿದ ಮಹಾನ್ ಕಾವ್ಯಚೇತನ ವೈ.ನಾಗೇಶಶಾಸ್ತ್ರಿ “ಸರ್ವದರ್ಶನ ತೀರ್ಥ” ಎಂಬುದು ತತ್ವಶಾಸ್ತ್ರದ  ಪ್ರತಿಷ್ಠಿತ ವಿದ್ವತ್ ಪದವಿ ಪಡೆದವರು.  

ಯಾವ ಅನುಕೂಲತೆಗಳೂ ಇಲ್ಲದ ಏಳುಬೆಂಚಿ ಗ್ರಾಮದಲ್ಲಿ ಹುಟ್ಟಿದರೂ ಎಲ್ಲ ಬಗೆಯ ಅಡ್ಡಿ-ಅಡಚಣೆ ಎದುರಿಸಿ ರಾಷ್ಟ್ರೀಯ ಖ್ಯಾತಿಯ ಪಂಡಿತರ ಮೇರು ಸ್ಥಾನಾಲಂಕೃತರಾದವರು” ಎಂದು ವೈ. ನಾಗೇಶಶಾಸ್ತ್ರಿಗಳ ಸಮಗ್ರ ಜೀವನ-ದರ್ಶನ ಕುರಿತು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಬೋಧಪ್ರದ ಉಪನ್ಯಾಸ ನೀಡಿದರು. 

ವೈ.ನಾಗೇಶ ಶಾಸ್ತ್ರಿಗಳ ಟ್ರಸ್ಟ್‌ ಗೌರವಾಧ್ಯಕ್ಷರಾದ ಡಾಽಽ ಹೆಚ್‌.ಮಲ್ಲಿಕಾರ್ಜುನಗೌಡರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜೋಳದರಾಶಿ ಪಂಪನಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಖಜಾಂಚಿ ನಾಗರತ್ನಮ್ಮ, ನಾಗೇಶ ಶಾಸ್ತ್ರಿಗಳ ಮೊಮ್ಮಗ ಜಂಬುನಾಥ, ಕನ್ನಡ ಉಪನ್ಯಾಸಕ ಚಾಂದ್‌ಪಾಷಾ, ವಿಚಾರವಾದಿ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಜೋಳದರಾಶಿ ದೊಡ್ಡನಗೌಡರ ಮೊಮ್ಮಗಳು, ಶಿಕ್ಷಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಶರಣ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ಮಾತಾಡಿ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ