ಡಾಽಽ ಸವಿತಾ ಸೊನೊಳಿಯವರಿಗೆ ರಾಷ್ಟ್ರೀಯ ಅತ್ಯುತ್ತಮ ಮಹಿಳಾ ಇಂಜಿನಿಯರಿಂಗ್ ಕಾಲೇಜ್ ಶಿಕ್ಷಕಿ ಪ್ರಶಸ್ತಿ
ಬಳ್ಳಾರಿ 29:ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದ (ಆರ್.ವೈ.ಎಂ.ಇ.ಸಿ) - ಉಪಪ್ರಾಂಶುಪಾಲರು ಹಾಗೂ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದ ಪ್ರಾಧ್ಯಾಪಕರಾದ ಡಾಽಽ ಸವಿತಾ ಸೊನೊಳಿ (ಚಿತ್ರಿಕಿ) ಯವರಿಗೆ ಭಾರತೀಯ ಶಿಕ್ಷಣ ಸಂಸ್ಥೆ ಐ.ಎಸ್.ಟಿ.ಇ (ಋಜಚಿಟಿ ಖಠಜಣಥಿ ಜಿಠ ಖಿಜಛಿಟಿಛಿಚಿಟ ಇಜಣಛಿಚಿಣಠ-ಋಖಿಇ) ವತಿಯಿಂದ 2023ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಮಹಿಳಾ ಇಂಜಿನಿಯರಿಂಗ್ ಕಾಲೇಜ್ ಶಿಕ್ಷಕಿ (ಓಚಿಣಠಚಿಟ ಂತಿಚಿಡಿಜ ಜಿಠ ಣಜ ಃಣ ಘಠಜಟಿ ಇಟಿರಟಿಜಜಡಿಟಿರ ಅಠಟಜರಜ ಖಿಜಚಿಛಿಜಡಿ ಜಿಠ ಣಜ ಙಜಚಿಡಿ -2023) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯು ಪದಕ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ಒಳಗೊಂಡಿದೆ.
ಇತ್ತೀಚೆಗೆ ಒರಿಸ್ಸಾದ ಭುವನೇಶ್ವರ್ದಲ್ಲಿರುವ ಕಳಿಂಗ ಇನ್ಸಿ-್ಟಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಾಜಿ (ಏಋಖಿ) ವಿಶ್ವವಿದ್ಯಾಲಯದಲ್ಲಿ ಜರುಗಿದ ಭಾರತೀಯ ಶಿಕ್ಷಣ ಸಂಸ್ಥೆಯ 53ನೇಯ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾಽಽ ಸವಿತಾ ಸೊನೊಳಿ ಯವರಿಗೆ ರಾಷ್ಡ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾಽಽ ಸವಿತಾ ಸೊನೊಳಿಯವರ ಕಳೆದ 26 ವರ್ಷಗಳ ತಾಂತ್ರಿಕ ಶಿಕ್ಷಣದಲ್ಲಿನ ಸಾಧನೆ, ಸಂಶೋಧನೆ, ನೆಚ್ಚಿನ ಅಧ್ಯಾಪಕಿಯಾಗಿ ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ, 60 ಸಂಶೋಧನ ಪ್ರಬಂಧಗಳು, 2 ಪೇಟೆಂಟ್ಗಳ ಪ್ರಕಟಣೆ, 30 ಲಕ್ಷಕ್ಕೂ ಹೆಚ್ಚು ರೂಪಾಯಿಗಳ ಸಂಶೋಧನ ಅನುದಾನ ಗಳಿಕೆ, 5 ಸಂಶೋಧನ ವಿದ್ಯಾರ್ಥಿಗಳಿಗೆ ಇವರ ಮಾರ್ಗದರ್ಶನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ, ತಾಂತ್ರಿಕ ಪುಸ್ತಕ ರಚನೆ, ಸಿಇಟಿ ವಿದ್ಯಾರ್ಥಿಗಳಿಗೆ ವೃತ್ತಿ ಸಮಾಲೋಚನೆ ತರಬೇತಿ, ವಿವಿಧ ಕಾಲೇಜುಗಳಲ್ಲಿ ವಿಶೇಷ ಉಪಾನ್ಯಾಸಗಳು, ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸ. ಈ ರೀತಿಯಾಗಿ, ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ರಾಷ್ರ್ಟೀಯ ಮಟ್ಟದ ಈ ಪ್ರಶಸ್ತಿಯನ್ನು ಅವರಿಗೆ ಪ್ರಧಾನ ಮಾಡಲಾಯಿತು.
ಕೆ.ಐ.ಐ.ಟಿ ಮತ್ತು ಕೆ.ಐ.ಎಸ್.ಎಸ್ ಡಿಮ್ಡ್ ಯೂನಿವರಿ್ಸಟಿ ಸಂಸ್ಥಾಪಕ ಶ್ರೀ ಅಚ್ಯುತ್ ಸಮಂತಾ ಉಪಕುಲಪತಿಗಳಾದ ಪ್ರೊ. ದೀಪಕ್ ಕುಮಾರ್ ಬೆಹರಾ, ಪ್ರೊ. ಸರಂಜಿತ್ ಸಿಂಗ್, ಐ.ಎಸ್.ಟಿ.ಇ ಅಧ್ಯಕ್ಷರಾದ ಪ್ರೊ. ಪ್ರತಾಪ್ ಸಿಂಗ್ ಕಾಕಾ ಸಾಹೇಬ್ ದೇಸಾಯಿ, ಉಪಾಧ್ಯಕ್ಷರಾದ ಡಾಽಽ ಗುಜ್ಜಲ ವೆಂಕಟಸುಬ್ಬಯ್ಯ, ಆರ್. ಬಾಸ್ಕರ್, ಖಾಜಂಚಿ, ಪ್ರೊ. ಶರಣಪ್ಪ ಜಿ.ಮಲಶೆಟ್ಟಿ , ನಿರ್ವಾಹಕ ಕಾರ್ಯದರ್ಶಿ ಡಾಽಽ ಎಸ್.ಎಂ. ಅಲಿ ಅವರು ಡಾಽಽ ಸವಿತಾ ಸೊನೊಳಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.
ಈ ಸಾಧನೆಯನ್ನು ಶ್ಲಾಘಿಸಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಜಾನಕುಂಟೆ ಬಸವರಾಜ್ ಅವರು ಡಾಽಽ ಸವಿತಾ ಸೊನೊಳಿಯವರು ರಾಷ್ರ್ಟಮಟ್ಟದ ಈ ಪ್ರಶಸ್ತಿಗಳಿಸಿ, ಈ ಭಾಗದಲ್ಲಿ ಅಪರೂಪದ ಸಾಧನೆಗೈದು ನಮ್ಮ ವೀ.ವಿ.ಸಂಘಕ್ಕೂ, ಮಹಾವಿದ್ಯಾಲಯಕ್ಕೂ ಹಾಗೂ ತಮ್ಮ ಕುಟುಂಬಕ್ಕೂ ಕೀರ್ತಿ ತಂದಿದ್ದಾರೆ. ಇದು ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೆ ಮಾದರಿಯಾಗಿದ್ದು, ಇದೇ ರೀತಿ ಎಲ್ಲರೂ ಸಾಧನೆ ಮಾಡುವಂತಾಗಬೇಕು, ಅದಕ್ಕೆ ಅಗತ್ಯವಾದ ಎಲ್ಲಾ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ವೀ.ವಿ.ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರಾದ ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳಾದ ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿಗಳಾದ ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳಾದ ಬೈಲುವದ್ದಿಗೇರಿ ಎರಿ್ರಸ್ವಾಮಿ ಅವರು ಅಭಿನಂದಿಸಿ ಶುಭಹಾರೈಸಿದರು.
ಇದೇ ರೀತಿ ಡಾಽಽ ಟಿ.ಹನುಮಂತ ರೆಡ್ಡಿ, ಪ್ರಾಂಶುಪಾಲರು ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಬೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.