'ಕಲಿಯುಗದ ಕಲಾ ಪ್ರಪಂಚದಲ್ಲಿ ಅಜರಾಮರವಾಗಿ ಉಳಿದವರು ಡಾ.ಪಂ. ಪುಟ್ಟರಾಜ ಗವಾಯಿ'
ಬಳ್ಳಾರಿ 08: ರಂದು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್(ರಿ) ಹಾಗೂ ಆಲಾಪ್ ಸಂಗೀತ ಕಲಾ ಟ್ರಸ್ಟ್(ರಿ) ಇವರ ಸಹಯೋಗದಲ್ಲಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳು 13ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಿಮಿತ್ತ ಗಾನ ನಮನ ಸಂಗೀತ ಕಾರ್ಯಕ್ರಮವನ್ನು ಶನಿವಾರ ಸಾಯಂಕಾಲ ನಗರದ ಸಂಗಮ ವೃತ್ತ ಬಳಿ ಇರುವ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕಲಿಯುಗದ ಕಲಾ ಪ್ರಪಂಚದಲ್ಲಿ ಅಜರಾಮರವಾಗಿ ಉಳಿದವರು ಪಂಡಿತ ಪುಟ್ಟರಾಜ ಗವಾಯಿಗಳು ಇವರು ಹಿಂದುಸ್ತಾನಿ ಗಾಯನದಲ್ಲಿ ಪ್ರಖ್ಯಾತಿಯನ್ನು ಪಡೆದವರು. ಅಂದ ಅನಾಥ ಮಕ್ಕಳ ದೈವವಾಗಿ ಬೆಳೆದವರು ಮಾನವನ ಮನಸ್ಸಿನ ಕಲ್ಮಶ ತೊಳೆಯಬೇಕಾದರೆ ಸಂಗೀತ ಮುಖ್ಯ ಎಂದು ಕೆಂಗಲ್ ಹನುಮಂತಯ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷರಾದಟಿ.ಹೆಚ್.ಎಂ.ಬಸವರಾಜ್ ರವರು ಹೇಳಿದರು.
ನಂತರ ಜೀವನದಲ್ಲಿ ಸ್ಪೂರ್ತಿಯನ್ನು ನೀಡುವುದು ಸಂಗೀತ ಮಾತ್ರ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು. ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶ್ರೀ ಕೆ ಚನ್ನಪ್ಪನವರು
ಲಿಂಗನಿಷ್ಠ ಬ್ರಹ್ಮಾಚಾರಿ ತುಂಗದಾಯಾಳು ಮಹಾದುಪಕಾರಿಯಾಗಿ ಜೀವಿಸಿದಂತವರು ಹಲವಾರು ವಿದ್ಯಾರ್ಥಿಗಳಿಗೆ ಸಂಗೀತದ ಮುಖಾಂತರ ಬಾಳಿಗೆ ಬೆಳಕು ನೀಡಿದವರು ಪುಟ್ಟರಾಜ ಗವಾಯಿಗಳು ಎಂದು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿಕೊಂಡಿದ್ದ ಪರಮಪೂಜ್ಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು ಮಾಹಿತಿ ನೀಡಿದರು.
ತರುವಾಯ ಮಠದಲ್ಲಿ ಕಲಿತ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಜೀವನವನ್ನು ಸಾಗಿಸಬಹುದು ಕಲಾವಿದರಿಗೆ ವೇದಿಕೆ ಬಹಳ ಮುಖ್ಯ ಎಂದು ಮುಖ್ಯ ಅತಿಥಿಗಳಾದ ತುಂಗಭದ್ರಾ ರೈತ ಸಂಘ ಜಿಲ್ಲಾಧ್ಯಕ್ಷರು ದರೂರು ಪುರುಷೋತ್ತಮ ಗೌಡ ಮಾತನಾಡಿದರು.
ನಂತರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಶ್ರೀ ಪುಟ್ಟರಾಜ ಕವಿ ಗವಾಯಿಗಳವರ ಗುರು ಬಂಧು ಬಳಗದಿಂದ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ವಿಶೇಷ ಸಂಗೀತ ವೆಂಕಟೇಶ್ ಅಲ್ಕೋಡ್ ಗದಗ ನಡೆಸಿಕೊಟ್ಟರು. ಮಹಾಂತೇಶ ಚಿಕ್ಕಮಠ ತಬಲಾ ಸಾಥ್ ನೀಡಿದರು.ವಿಶೇಷ ಗೀತೆ ಗಾಯನ ಕುಮಾರಿ ಪ್ರಕೃತಿ ರೆಡ್ಡಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ರಾಮಾಂಜನೇಯಲು,ಮುದ್ದಟನೂರು ತಿಪ್ಪೇಸ್ವಾಮಿ, ಸುಬ್ಬಣ್ಣ, ನಾಗನಗೌಡ,ಎ ಎಂ ಪಿ ವೀರೇಶ್ ಸ್ವಾಮಿ, ಅಡವಿ ಸ್ವಾಮಿ,ಸಂಗೀತ ಕಲಾಭಿಮಾನಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.ವೇದಿಕೆಯ ಮೇಲೆ ನಿವೃತ್ತ ಉಪನ್ಯಾಸಕರಾದ ಎನ್ ಬಸವರಾಜ,ಕೆಎಂ ಮಂಜುನಾಥ, ಖಾಸಿಂ ಅಲಿ,ಹಾಸ್ಯ ಕಲಾವಿದರು ಎರಿಸ್ವಾಮಿ, ಮೃತ್ಯುಂಜಯ ಸ್ವಾಮಿ ಒಡೆಯರ್ ಗೋವಿಂದವಾಡ ವೆಂಕಟೇಶ್ ಆಲ್ಕೋಡ್ ಮಹಾಂತೇಶ ಚಿಕ್ಕಮಠ ಕುಮಾರಿ ಪ್ರಕೃತಿ ರೆಡ್ಡಿ ಶ್ರೀ ದೊಡ್ಡಬಸಪ್ಪ ಗವಾಯಿಗಳು, ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.