ವಿವಿ ಪಠ್ಯಕ್ಕೆ ಡಾ. ಮಂಜುಳಾ ಕಥೆ ಆಯ್ಕೆ
ವಿವಿ ಪಠ್ಯಕ್ಕೆ ಡಾ. ಮಂಜುಳಾ ಕಥೆ ಆಯ್ಕೆ
ಬೀದರ್ 17: ಹಿಂದಿ ಪ್ರಾಧ್ಯಾಪಕಿ ಮತ್ತು ಸಾಹಿತಿ ಡಾ. ಮಂಜುಳಾ ಚವ್ಹಾಣ ಅವರ ರಚನೆಯ ಟೋಟತೆ ಪತ್ತೆ ಕಥೆಯು ಬೀದರ್ ವಿಶ್ವ ವಿದ್ಯಾಲಯದ ಬಿಎ ತೃತೀಯ ಸೆಮಿಸ್ಟರ್‌ನ ಹಿಂದಿ ಐಚ್ಚಿಕ ಪಠ್ಯ ವಿಷಯವಾದ ಸಾಥ್ ಸೀತಾರೆ ಕಥಾ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿದೆ.ಪ್ರಸ್ತುತ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು ಸದಾ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು 16ಕ್ಕಿಂತ ಹೆಚ್ಚು ಪುಸ್ತಕಗಳನ್ನು ಮತ್ತು 50ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರ ಮಹಿಳಾಪರ ವಿಚಾರಗಳ ಕವನಗಳು ಹೆಚ್ಚು ಪ್ರಶಂಸೆಗೆ ಪಾತ್ರವಾಗಿದ್ದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.