ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ ಸ್ಮಾರಕ ನಾಟಕೋತ್ಸವ ಸಾಂಸ್ಕೃತಿಕ ಕಲಾಮೇಳ
ಬೆಂಗಳೂರು 02: ವಿಕೆಎಂ ಕಲಾವಿದರು ಸಂಘಟನೆಯಿಂದ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಿಂದ ಬೆಂಗಳೂರಿನ ನಯನ ರಂಗಮಂದಿರದ ರವೀಂದ್ರರ ಕಲಾಕ್ಷೇತ್ರದಲ್ಲಿ ಜೂನ್ 8 ರಿಂದ 10 ವರೆಗೆ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ ಸ್ಮಾರಕ ನಾಟಕೋತ್ಸವ ಸಾಂಸ್ಕೃತಿಕ ಕಲಾಮೇಳ 2026 ಕಾರ್ಯಕ್ರಮ ನಡೆಯಲಿದೆ.ದಿ.8 ರಂದು ಸಂಜೆ 4.30 ಕ್ಕೆ ಗೀತಾ ಮತ್ತು ಪ್ರೀತಮ್ ತಂಡದವರಿಂದ ಭರತನಾಟ್ಯ ,ಕೋಲಾಟ,ಜಾನಪದ ನೃತ್ಯ, ರಂಗಗೀತೆಗಳು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಕಲಾವಿದೆ ಪ್ರೇಮಾ ಮೂರ್ತಿ ವಹಿಸುವರು. ಮುಖ್ಯ ಅತಿಥಿಗಳಾಗಿ ಪೂರ್ಣಿಮಾ ಮೂರ್ತಿ, ವಿಕೆಎಂ ಕಲಾವಿದರು ಅಧ್ಯಕ್ಷ ಕೆ.ಎಸ್.ವೆಂಕಟೇಶಾಲು, ರತ್ನ ನಾಗೇಶ್, ರಾಮಚಂದ್ರ, ವಿಜಯ, ವಾಸಂತಿ ಟಿ.ಎಂ ರಘು ಆಗಮಿಸುವರು. ಸಂಜೆ 6-30 ಕ್ಕೆ ವಿಕೆಎಂ ಕಲಾವಿದರು ಅಭಿನಯಿಸುವ ಡಾ. ಚಂದ್ರಶೇಖರ ಕಂಬಾರರ ವಿರಚಿತ ಮತ್ತು ಸಿ.ಎಂ. ತಿಮ್ಮಯ್ಯ ನಿರ್ದೆಶನದ ಸಂಗ್ಯಾ ಬಾಳ್ಯಾ ಜನಪದ ನಾಟಕದ 60 ನೇ ಪ್ರದರ್ಶನ ನಡೆಯಲಿದೆ.
ಅಹ್ವಾನಿತರರಾಗಿ ಗಂದುಡಿ ಕೃಷ್ಣಯ್ಯ ಸಾಯಿಬಾಬಾ ಆಗಮಿಸುವರು. ದಿ. 9 ರಂದು ಸಂಜೆ 5-30 ಕ್ಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಲತೇಶ ಬಡಿಗೇರ, ವಿಠ್ಠಲ ಕೊಪ್ಪದ, ಸುಬ್ಬು ಹೊಲಿಯಾರ್, ಡಾ. ಅಶ್ವತ್ಥ ನಾರಾಯಣ ಕೆ.ಪಿ. ವೆಂಕಟಾಚಲ ಆಗಮಿಸುವರು. ಸಂಜೆ 6-30 ಕ್ಕೆ ವಿಕೆಎಂ ಕಲಾವಿದರು ಅರ್ಿಸುವ ಮತ್ತು ಮೈಕೋ ಶಿವಶಂಕರ್ ನಿರ್ದೆಶನದ “ಮಾಸ್ತಿ ವೆಂಕಟೇಶ್ ಅಯ್ಯಂಗಾರ್” ವಿರಚಿತ ರಂಗದರ್ಶನ ಅಭಿನಯಿಸುವ ಕಾಕನಕೋಟೆ ನಾಟಕವನ್ನು ಪ್ರದರ್ಶಿಸಲಿದ್ದಾರೆ. ದಿ.10 ರಂದು ಸಂಜೆ 5ಕ್ಕೆ ವಿದೂಷಿ ಡಾ. ಶ್ರೀದೇವಿ ಮತ್ತು ಮಹಿಳಾ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಕ್ಕೆ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಡಾ.ಸಿ.ಸೋಮಶೇಖರ್ , ಕನ್ನಡ ಸಂಸ್ಕೃತಿ ಇಲಾಖೆ ಮಾಜಿ ನಿರ್ದೆಶಕ ವೈ.ಕೆ.ಮುದ್ದುಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಚಂದ್ರಶೇಖರ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ,ಗಿನ್ನಿಸ ದಾಖಲೆ ರಕ್ತದಾನಿ ಮಧುರ ಅಶೋಕಕುಮಾರ್ ಆಗಮಿಸುವರು.
ಇದೇ ಸಂದರ್ಭದಲ್ಲಿ ರಂಗಗೌರವ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ರಂಗಭೂಮಿ ಕಲಾವಿದರಾದ ಪದ್ಮ ಮುಖ್ಯಮಂತ್ರಿ ಚಂದ್ರು, ಭರತನಾಟ್ಯ ಕಲಾವಿದೆ ವಿದೂಷಿ ಡಾ. ಶ್ರೀದೇವಿ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ರಂಗಭೂಮಿ , ವಸಾೊಲಂಕಾರ, ವರ್ಣಾಲಂಕಾರ ಕಲಾವಿದರಾದ ಡಿ.ರಾಜಪ್ಪ ನೀಡುವರು.ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ಲೇಖಕಿ ಶಾಂತಸ್ವಾಮಿ, ರಾಜ್ಯ ಪೋಲಿಸ ಇಲಾಖೆ ಸಹಾಯಕ ಆಡಳಿತಾಧಿಕಾರಿ ಎನ್.ನರಸಿಂಹಮೂರ್ತಿ, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಖ್ಯಾತ ವೈದ್ಯ ಡಾ.ಎಲ್.ನಾಗರಾಜಯ್ಯ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ದಿ ನಿಗಮದ ಪ್ರಧಾನ ವ್ಯವಸ್ಥಾಪಕ ಷಡಕ್ಷರಯ್ಯ ಎಚ್, ಬೈಂದೂರ ಪತ್ರಕರ್ತ ಬಿ.ಎಂ.ನಾಥ, ದಲಿತ ಮುಖಂಡ ಮಾವಳ್ಳಿ ಶಂಕರ್, ಮಕ್ಕಳ ಸಾಹಿತ್ಯ ಪರಿಷತ್ತು ಬೈಲಹೊಂಗಲ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ, ಗಾಯಕಿ, ಸಾಹಿತಿ ಡಾ.ಬಿ.ವಿ.ಪೂರ್ಣಿಮಾ ಬಳಿಗಾರ್,
ದೂರದರ್ಶನ ನಿರೂಪಕಿ ಡಾ.ಉಮಾ ಗೌತಮ್ ಇವರಿಗೆ ನೀಡಲಾಗುವುದು.ಸಿದ್ಧಾರ್ಥ ಪ್ರಶಸ್ತಿಯನ್ನು ಸಂಗೀತ ನಿರ್ದೆಶಕ ಸತೀಶ್ ಸುರತ್ಕಲ್, ಹಿನ್ನೆಲೆ ಗಾಯಕರಾದ ಚಂದ್ರಹಾಸ ಸುವರ್ಣ, ತಬಲಾವಾದಕ ರಾಮಣ್ಣ, ಸಮಾಜ ಸೇವಕಿ ಆಶಾನಾಯಕ್, ಚಲನಚಿತ್ರ ನಟಿ ಮೈತ್ರಿ, ಮಳವಳ್ಳಿ ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಘನಶ್ಯಾಮ್ ದಾಸ್, ರಂಗಭೂಮಿ ಕಲಾವಿದ ಶಿವು, ಕನಕಪುರ ಸಿೊಥ ಶಕ್ತಿ ಪೌಂಡೇಶನ್ ಅಧ್ಯಕ್ಷ ರೇಖಾಕುಮಾರ್, ನಾಟಕ ಕಲಾವಿದರಾದ ಸಂಪತ್ ಎನ್ ಹಾಗೂ ಕಾಸರಗೊಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಶಿವರಾಮ್ ಕಾಸರಗೋಡು ಅವರಿಗೆ ಗಡಿನಾಡು ಸಂಘಟನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯರು, ವಿಕೆಎಂ ಕಲಾವಿದರು ಸಂಘಟನೆ ಕಾರ್ಯದರ್ಶಿ ಸಿ.ಎಂ.ತಿಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.