ಡಾ. ಅಂಬೇಡ್ಕರ ಮಹಾಪರಿನಿರ್ವಾಣ ದಿನಾಚರಣೆ
ಶಿಗ್ಗಾವಿ 07: ನಗರದ ಅಂಬೇಡ್ಕರ ಭವನದಲ್ಲಿ ಶಿಗ್ಗಾಂವ ತಾಲೂಕ ಚಲವಾದಿ ಮಹಾಸಭಾ ವತಿಯಿಂದ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ 66 ನೇ ಮಹಾಪರಿನಿರ್ವಾಣ ದಿನಾಚರಣೆ ಕಾಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ಶರೀಫ ಮಾಕಪ್ಪನವರ ಅವರು ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡಿ ಮಾತನಾಡಿ ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಶೋಷಿತರಿಗೆ ಧ್ವ್ವನಿಯಾಗಿ ಸಮ ಸಮಾಜದ ಕನಸನ್ನು ಕಂಡು ಅದನ್ನು ಸಂವಿಧಾನದ ಮೂಲಕ ದೇಶದ ಎಲ್ಲರಿಗೂ ಸಮರೆ್ಣ ಮಾಡಿರುವ ಮಹಾನ ಚೇತನ ಡಾ.ಬಿ.ಆರ್. ಅಂಬೇಡ್ಕರ ಅವರು. ತಾವು ರಚಿಸಿದ ಸಂವಿಧಾನದಲ್ಲಿ ಭಾರತೀಯರಾದ ಎಲ್ಲರಿಗೂ ಸಮಾನವಾದ ಕಾನೂನುಗಳನ್ನು ಅವಕಾಶಗಳನ್ನು ಕಲ್ಪಿಸಿದರು ದೂರದೃಷ್ಟಿಯ ವ್ಯಕ್ತಿತ್ವ ಹೊಂದಿದ್ದ ಬಾಬಾಸಾಹೇಬರು ಭವಿಷತ್ತನ್ನು ಮನಸ್ಸಲ್ಲಿ ಇಟ್ಟುಕೊಂಡು ಸಂವಿಧಾನರಚನೆ ಮಾಡಿದರುಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಹಾಗಾಗಿ ಅವರ ಹಾದಿಯಲ್ಲಿ ನಮ್ಮ ಮಕ್ಕಳನ್ನು ಯುವಕರನ್ನು ಬೆಳೆಸಬೇಕಾಗಿದೆ ಎಂದರು.
ಗೌರವಾಧ್ಯಕ್ಷ ಶಂಕರ್ಪ ಇಂಗಳಗಿ ಉಪಾಧ್ಯಕ್ಷ ಪ್ರಮೋಧ ಚಲವಾದಿ ಮಾತನಾಡಿದರು. ಈ ಸಂದರ್ಭದಲ್ಲಿ ನೀಲವ್ವ ಕಾಲವಾಡ, ಹನಮಂತಪ್ಪ ಚಲವಾದಿ, ಶೇಖಪ್ಪ ಬನ್ನಿಮಟ್ಟಿ, ಪಕ್ಕಿರ್ಪ ಬನ್ನಿಮಟ್ಟಿ,ಚಂದ್ರಶೇಖರ ಡೊಳ್ಳೆಶ್ವರ, ಅಶೋಕ ಕಾಳೆ ಮುತ್ತು ಬನ್ನೂರ ಮಾಂತೇಶ ಮಾಕಾಪುರ ಹಾಗೂ ಇತರರುಇದ್ದರು. ಪ್ರಧಾನ ಕಾರ್ಯದರ್ಶಿ ವೀರೇಶ ಕಾಳೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಮಹೇಶ ಕಳಸದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.