ಪತ್ನಿಯ ಮೇಲೆ ವರದಕ್ಷಿಣೆ ಕಿರುಕುಳ: ದೂರು
ಶಿಗ್ಗಾವಿ 20: ತಾಲೂಕಿನ ಬಸವನಕೊಪ್ಪ ಗ್ರಾಮದಲ್ಲಿ ಪತ್ನಿಯ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಮರಣಾಂತಿಕ ಹಲ್ಲೆ ತಡಸ ಪೋಲಿಸ್ ಸ್ಟೇಷನ್‌ಲ್ಲಿ ದಿ ಜನೇವರಿ 20-2024 ರಂದು ಆರೋಪಿತರ ಮೇಲೆ ಆಕ್ಟ್‌ಅಂಡ್ ಐ. ಪಿಸಿ.ಸೆಕ್ಷನ್1860(ಯೂ-143.147.307.323.294.494ಅ.504.506.149.(ವರದಕ್ಷಿಣೆ ಕಾಯ್ದೆ1961(ಯೂ3.4) ದೂರುದಾಖಲಾಗಿದೆ.
ಹುಬ್ಬಳ್ಳಿ ಮೂಲದ ಬಶೀರ್‌ಸಾಬ್ ಐನಾಪುರಿ ಮಗಳಾದ ನಸ್ರೀನ್ ಬಾನು ಯುವತಿಯನ್ನು ಬಸನಕೊಪ್ಪಗ್ರಾಮದ ಕಮಾಲ್‌ಸಾಬ್ ಮುಲ್ಲಾ ಮಗನಾದಅಬ್ದುಲ್ ಮುನ್ನಾಪ ಮುಲ್ಲಾ ಎಂಬಾತನಿಗೆ ಇಸ್ಲಾಂಧರ್ಮದ ಪ್ರಕಾರ ಎಲ್ಲ ಗುರು ಹಿರಿಯರ ಸಮ್ಮುಖದಲ್ಲಿ ನಿಖಾ ಮಾಡಲಾಗಿತ್ತು. ಯುವತಿಯ ತಂದೆ-ತಾಯಿ ಮಗಳು ಸುಖವಾಗಿ ಸಂಸಾರ ಮಾಡುತ್ತಾಳೆ ಎಂಬ ನೀರೀಕ್ಷೆಯಲ್ಲಿದ್ದರು ಕೆಲವೇ ದಿನದಲ್ಲಿ ಪದೇ ಪದೇ ವರದಕ್ಷಿಣೆ ಕಿರುಕುಳ ಕೊಡುತ್ತಾ ಮಾನಸಿಕವಾಗಿ ಕಿರಿಕಿರಿ ಮಾಡುತ್ತಾ ಬಂದಿದ್ದಾರೆ. ಹೀಗೆ ಕಳೆದ ಕೆಲವು ದಿನಗಳ ಹಿಂದೆ 18/1/2024 ರಂದು ಅಮಾಯಕ ಯುವತಿಯನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದು ತಿಳಿದು ಬಂದಿರುತ್ತದೆ. ಹಾಗೆಯೇಯುವತಿಯ ಮೇಲೆ ಮರಣಾಂತಿಕ ಹಲ್ಲೆ ಮಾಡಿಕುತ್ತಿಗೆ ಹಿಚಕಿಲಿಕ್ಕೆ ಪ್ರಯತ್ನ ಸಹ ಮಾಡಿದ್ದರು ಎಂದು ಯುವತಿ ತಮ್ಮ ಅಳಿಲನ್ನು ತೊಡಿಕೊಂಡಿರುತ್ತಾನೆ. ಆರೋಪಿತರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.