ಅಕ್ಕತಂಗೇರಹಾಳದಲ್ಲಿ ಜೋಡಿ ಕೊಲೆ : ಬೆಚ್ವಿಬಿದ್ದ ಗ್ರಾಮಸ್ಥರು, ಆರೋಪಿ ಬಂಧನ

ಅಕ್ಕತಂಗೇರಹಾಳದಲ್ಲಿ ಜೋಡಿ ಕೊಲೆ : ಬೆಚ್ವಿಬಿದ್ದ ಗ್ರಾಮಸ್ಥರು, ಆರೋಪಿ ಬಂಧನ

ಬೆಳಗಾವಿ : ಜಿಲ್ಲೆಯ ಅಂಕಲಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಅಕ್ಕತಂಗೆರಹಾಳದಲ್ಲಿ ಜೋಡಿ ಕೊಲೆ ನಡೆದಿರುವ ಘಟನೆ ಮಂಗಳವಾರ ವರದಿಯಾಗಿದೆ.
     ಅಕ್ಕತಂಗೇರಹಾಳ ಗ್ರಾಮದ ಮಲ್ಲಿಕಾರ್ಜುನ ಜಗದಾರ(40) ಹಾಗೂ ರೇಣುಕಾ ಮಾಳಗಿ (42) ಹತ್ಯೆಗೀಡಾದ ದುದೈವಿಗಳಾಗಿದ್ದಾರೆ. ಈ ಕೊಲೆಯ ಆರೋಪಿತನಾದ ಯಲ್ಲಪ್ಪ ಮಾಳಗಿ(45) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆಯಾಗಿರುವ ರೇಣುಕಾ ಮಾಳಗಿ ಅವಳ ಪತಿಯೇ ಈ ಜೊಡಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಅಂಕಲಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಅಂಕಲಿ ಪೊಲೀಸ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ನಿಖರವಾರ ಕಾರಣ ತಿಳಿದು ಬಂದಿರುವದಿಲ್ಲ. 

ಸುದ್ದಿ ಓದಿ