ಶ್ರೀಮಠಕ್ಕೆ 2.4 ಎಕರೆ ಭೂಮಿ ದಾನ
ಶಿಗ್ಗಾವಿ 18: ತಾಲೂಕಿನ ಚಾಕಾಪುರ ಗ್ರಾಮದ ಪ್ರಗತಿಪರ ರೈತರಾದ ಪರಸಪ್ಪ ಬಗಾಡೆ ಮತ್ತು ದಿ.ಯಲ್ಲಪ್ಪ ಬಗಾಡೆ ಅವರ ಕುಟುಂಬ ವರ್ಗದವರು ಶುಕ್ರವಾರ ಶ್ರೀಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿಂಹಾಸನ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಅಧ್ಯಕ್ಷರ ಹೆಸರಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 2.4 ಎಕರೆ ಭೂಮಿ ದಾನ ಮಾಡಿ ಶ್ರೀಮಠದ ಮೇಲೆ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಗುರುಪೀಠದ ಅಧ್ಯಕ್ಷರಾದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಅವರಿಗೆ ಶಿಗ್ಗಾವಿ ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ ಗುರುಪೀಠದ ಹೆಸರಿಗೆ ನೋಂದಾಯಿಸಿರುವ ಭೂದಾನ ಪತ್ರವನ್ನು ಬಗಾಡೆ ಕುಟುಂಬದ ಸದಸ್ಯರು ಹಸ್ತಾರಿಸಿದರು.
ನಂತರ ಬಗಾಡೆ ಅವರ ಮನೆಗೆ ತೆರಳಿದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಪರಸಪ್ಪ ಬಗಾಡೆ, ನೀಲಪ್ಪ ಬಗಾಡೆ, ಮಂಜುಳಾ ದಿ.ಯಲ್ಲಪ್ಪ ಬಗಾಡೆ ಕುಟುಂಬ ವರ್ಗದವರನ್ನು ಸನ್ಮಾನಿಸಿ ಆರ್ಶೀವದಿಸಿ ದರು.ಬಗಾಡೆ ಕುಟುಂಬ ವರ್ಗದ ಭಕ್ತಿ ಸ್ಮರಣೀಯವಾಗಿದೆ.ಅವರು ನೀಡಿದ ಭೂಮಿ ಸಾಮಾಜಿಕ ಸತ್ಕಾರ್ಯಗಳಿಗೆ ಸದ್ಭಳಿಕೆಯಾಗಲಿದೆ. ಇದರಿಂದ ಅವರ ಕುಟುಂಬ ವರ್ಗಕ್ಕೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಶಿಗ್ಗಾವಿ ಉಪ ನೋಂದಣಿ ಕಚೇರಿಗೆ ಆಗಮಿಸುತ್ತಿದ್ದ ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳ ಅವರನ್ನು ಬಂಕಾಪುರ ಟೋಲ್ಗೇಟ್ ಬಳಿ ಅಪಾರ ಭಕ್ತ ಸಮೂಹ ಸನ್ಮಾನಿಸಿ ಆರ್ಶೀವಾದ ಪಡೆದರು. ಬಳಿಕ ಶಿಗ್ಗಾವಿ ಪಟ್ಟಣದವರೆಗೂ ನೂರಾರು ಬೈಕ್ ರಾ್ಯಲಿ ಕೈಗೊಂಡು ಸ್ವಾಮೀಜಿ ಅವರನ್ನು ಭರ ಮಾಡಿಕೊಂಡರು. ಸಮಾಜದ ಜಿಲ್ಲಾ ಅಧ್ಯಕ್ಷ ಮಾರುತಿ ಹರಿಹರ,ಶಿಗ್ಗಾವಿ-ಸವಣೂರು ತಾಲೂಕು ಕುರಬ ಸಮಾಜದ ಅಧ್ಯ ಕ್ಷರುಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಪರಶುರಾಮ ನಿರೊಳ್ಳಿ ನೋಂದಣಿ ಖರ್ಚು ಭರಿಸಿದ್ದಾರೆ ಮತ್ತು ಬಂದಿದ್ದ ಭಕ್ತರಿಗೆ ದಾಸೋಹ ಸೇವೆಗೈದರು.