ದುರಾಸೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರದಿರಲಿ : ಸಿದ್ದೇಶ ಗೌಡ
ಹಗರಿಬೊಮ್ಮನಹಳ್ಳಿ 08: ಮನುಷ್ಯನ ಆಸೆಗೆ ಮಿತಿ ಇಲ್ಲ ಇದನ್ನು ಪರಿಸರದ ಮೇಲೆ ಉಪಯೋಗಿಸದೇ ಪರಿಸರ ಸಂರಕ್ಷಣೆಗೆ ಕಂಕಣ ಬಧ್ಧರಾಗುವಂತೆ ಮುಖ್ಯ ಶಿಕ್ಷಕ ಸಿದ್ದೇಶ್ ಗೌಡ ಹೇಳಿದರು.
ತಾಲೂಕಿನ ಬ್ಯಾಸಿಗದೇರಿಯ ಶ್ರೀ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರಿ್ಡಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯನ ಆಸೆಗೆ ಮಿತಿ ಎಂಬುದೇ ಇಲ್ಲ, ಇಷ್ಟು ಇದ್ದರೆ ಮತ್ತಷ್ಟು ಮತ್ತಷ್ಟು ಇದ್ದರೆ ಮಗದೊಷ್ಟು ಎಂಬ ಹೆಬ್ಬಕೆ ಸಾಮಾನ್ಯವಾಗಿದೆ, ತಮ್ಮ ಆಸೆ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಪರಿಸರವನ್ನು ನಾಶ ಮಾಡದಂತೆ ತಿಳಿಸಿದರು. ಎಷ್ಟು ಪರಿಸರವನ್ನು ನಾವು ಹಾಳು ಮಾಡುತ್ತೆವೆ ದುಪ್ಪಟ್ಟು ಕಷ್ಟಗಳು ನಮಗೆ ಎದುರಾಗುತ್ತವೆ ಪರಿಸರದ ಕಾಳಜಿ ವಹಿಸಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಈ ಸಂಧರ್ಭಧಲ್ಲಿ ಗ್ರಮ ಪಂಚಾಯತಿ ಸದಸ್ಯ ಶಿವಾನಂದ ಸ್ವಾಮಿ, ಮುಖಂಡರಾದ ವಿ.ರಮೇಶ್, ಪಿ.ಬಸವರಾಜ, ವಿರುಪಾಕ್ಷಿ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.