ಮಹಲಿಂಗಪುರ

ಸರ್ಕಾರಿ ಶಾಲೆಯಂದು ಕಡೆಗಣನೆ ಬೇಡ- ಕೋರಡಿ

ಸರ್ಕಾರಿ ಶಾಲೆಯಂದು ಕಡೆಗಣನೆ ಬೇಡ-  ಕೋರಡಿ

ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದಿಂದ ಕಾರ್ಮಿಕ ಕಾರ್ಡ ವಿತರಣೆ 

ಮಹಾಲಿಂಗಪುರ 16 : ಈಗ ಉನ್ನತ ಹುದ್ದೇಯಲ್ಲಿರುವ ಬಹುತೇಕ ಅಧಿಕಾರಿಗಳು ಐ ಎ.ಎಸ್‌. ಆಯ.ಪಿ.ಎಸ್ ಅಧಿಕಾರಿಗಳು ಕೂಡಾ ಅವರ ವಿದ್ಯಾಬ್ಯಾಸವನ್ನು ಸರ್ಕಾರಿ ಶಾಲೆಯಲ್ಲಿಯೇ ಮಾಡಿದ್ದಾರೆ, ಶಾಲೆಯಾವುದು ಎಂಬುದಕ್ಕಿಂತ ನಿಮ್ಮ ಮಕ್ಕಳ ಬುದ್ದಿ ಮಟ್ಟದ ಮೇಲೆ ಅವರ ಭವಿಷ್ಯ ನಿಂತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿಧೇರ್ಶಕರಾದ ಮೋಹನ್ ಕೋರಡಿ ಹೇಳಿದರು.  

ಸಾಧು ನಿರಂಜನ ಸಮೂದಾಯ ಭವನದಲ್ಲಿ  ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಾಲ ಕಾರ್ಮಿಕ ಇಲಾಖೆ, ಪೊಲೀಸ ಇಲಾಖೆ, ಪುರಸಭೆ, ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕರ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಮಿಕ ಕಾರ್ಡ ವಿತರಣೆ ಸಮಾರಂಭವನ್ನು ಉಧ್ಘಾಟನೆ ಮಾಡಿ ಮಾತನಾಡಿದ ಅವರು ಕಾರ್ಮಿಕರೆ ನೀವು ನಿರಂತರ ದುಡಿಯುತ್ತಿರಿ ದುಡಿಯಿರಿ ಆದರೆ ಮಕ್ಕಳಿಗೆ ಮಾತ್ರ ಸರಿಯಾದ ಸಮಯಕ್ಕೆ ಶಿಕ್ಷಣ ನೀಡಿ, ಸರ್ಕಾರ ಈಗ ಎಲ್ಲ ತರಹದ ಅನುಕುಲಗಳನ್ನು ಮಾಡಿ ನಿಮ್ಮ ಮೇಲಿನ ಹೊರೆ ಇಳಿಸಿದೆ. ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಇಟ್ಟು ನಿಮ್ಮ ಮಕ್ಕಳ ವಿದ್ಯಾಬ್ಯಾಸ ಮಾಡಿಸಿ. ಮನೆಯಲ್ಲಿಯೂ ಸಹ ಮಾಡಲಾರದಂತ ಊಟವನ್ನು ನಾವು ವಸತಿ ಶಾಲೆಯಲ್ಲಿ ನೀಡುತ್ತಿದ್ದೇವೆ ನಿಮ್ಮ ಮಕ್ಕಳ ವಿದ್ಯಾಬ್ಯಾಸದ ಎಲ್ಲ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ ಕಾರಣ ಯಾವುದೆ ಭಯವಿಲ್ಲದೆ ಮಕ್ಕಳನ್ನು ಶಾಲೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಿ ನೀವೂ ಕೂಡ ಸಮಾಜದಲ್ಲಿ ಆರ್ಥಿಕವಾಗಿ ಮುಂದೆ ಬನ್ನಿರಿ ಎಂದರು.  

ನಂತರ ಮಾತನಾಡಿದ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಾಹೇಬಗೌಡ ಝಂಜರವಾಡ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಬಿಡದೆ ಅವರಿಗೆ ಸರಿಯಾದ ಶಿಕ್ಷಣ ನೀಡಿ, ನಿಮ್ಮ ಆರ್ಥಿಕ ಸಮಸ್ಯೆಗೆ ನಿಮ್ಮ ಮಕ್ಕಳ ಜೀವನವನ್ನೆ ಬಲಿ ಮಾಡದೆ ಅವರಿಗೂ ಕೂಡ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಒಳ್ಳೆಯವರಾಗಿ ಬಾಳಲು ಅವಕಾಶ ನೀಡಿ, ಒಂದು ವೇಳೆ ಬಾಲ ಕಾರ್ಮಿಕರನ್ನಾಗಿ ಯಾರಾದರೂ ದುಡಿಸುತ್ತಿದ್ದರೆ ಅಂಥವರಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.  

ನಂತರ ಮಾತನಾಡಿದ ಪುರಸಭೆ ಆರೋಗ್ಯಾಧಿಕಾರಿ ಎಂ.ಎಂ ಮುಗಳಖೋಡ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ ಸ್ವಚ್ಚತೆ ಕಾಪಾಡಿಕೊಳ್ಳಿ, ಮನೆ ಮುಂದೆ ಗಲೀಜು ಇರುವುದರಿಂದ ಅನಾರೋಗ್ಯಕ್ಕೆ ಇಡಾಗುವಿರಿ, ಅಲ್ಲದೆ ಮನೆಯನ್ನು ಸಹ ಸ್ವಚ್ಚವಾಗಿಡಬೇಕು ಒಟ್ಟಿನಲ್ಲಿ ಮನೆಯ ವಾತಾವರಣ ಸ್ವಚ್ಚವಾಗಿದ್ದರೆ ಮಾತ್ರ ನೀವು ಆರೋಗ್ಯದಿಂದ ವಾಸಿಸಲು ಸಾಧ್ಯ ಎಂದರು.  

ನಂತರ ಮಾತನಾಡಿದ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಬಂಡಿವಡ್ಡರ ನಮ್ಮ ಸಂಘದಿಂದ ಕಾರ್ಮಿಕ ಇಲಾಖೆಯಲ್ಲಿ ಬರುವ ಎಲ್ಲ ಸೌಲಭ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ಒದಗಿಸುವ ಮತ್ತು ಎಲ್ಲ ಯೋಜನೆಗಳ ಸರಿಯಾದ ಮಾಹಿತಿಗಳನ್ನು ತಮಗೆ ತಿಳಿಸಲಾಗಿದೆ ಕಾರಣ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುವ ಮೂಲಕ ನೀವು ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವುದೆ ನಮ್ಮ ಸಂಘದ ಗುರಿಯಾಗಿದೆ ಎಂದರು.  

ಈ ಸಂದರ್ಭದಲ್ಲಿ ಜಿಲ್ಲಾ ಬಾಲ್ಯ ಕಾರ್ಮಿಕ ಯೋಜನಾ ಸಂಸ್ಥೆಯ ನಿಧೇರ್ಶಕ ಸುಧಾಕರ ಬಡಿಗೇರ, ಮುಧೋಳ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಸಂತೋಷ ಬಾಡಗಿ, ಪಿ.ವಿ ಮಾವರಕರ,ಬಸವರಾಜ ಗಾಣಿಗೇರ, ಹುಚ್ಚೇಶ ವಡ್ಡರ, ಬಂದು ಪಕಾಲಿ, ಲಕ್ಷ್ಮಣ ಬ್ಯಾಳಿ, ಮೌಲಾ ಕೆಂಬಾವಿ, ಸೈಯದ ನಧಾಪ, ತಿಪ್ಪಣ್ಣ ಬಂಡಿವಡ್ಡರ, ದಾದಾ ನಧಾಫ ಸೇರಿದಂತೆ ಹಲವರು ಇದ್ದರು.  

 

ಸುದ್ದಿ ಓದಿ