ಶಿರಹಟ್ಟಿ

ವಿಶಿಷ್ಠಚೇತನ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ನೀಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ: ಶಾಸಕ ಚಂದ್ರು ಲಮಾಣಿ ಕರೆ

ವಿಶಿಷ್ಠಚೇತನ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ನೀಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ: ಶಾಸಕ ಚಂದ್ರು ಲಮಾಣಿ ಕರೆ

ಶಿರಹಟ್ಟಿ 03: ಮನೆಯಲ್ಲಿ ವಿಶಿಷ್ಠಚೇತನ ಮಕ್ಕಳು ಹುಟ್ಟಿದರೆ ನಮ್ಮ ಹಿಂದಿನ ಜನ್ಮದಲ್ಲಿ ನಾವೇನೋ ತಪ್ಪು ಮಾಡಿರಬೇಕು ನಮಗೆ ಈ ಜನ್ಮದಲ್ಲಿ ಇಂತಹ ಮಕ್ಕಳನ್ನು ಆ ದೇವರು ಕೊಟ್ಟಿದ್ದಾನೆ ಎಂಬ ಮೂಢನಂಬಿಕೆಯಿತ್ತು, ಆದರೆ ಈ ಪ್ರಸ್ತುತ ಕಾಲದಲ್ಲಿ ಇಂಥಹ ವಿಶಿಷ್ಠಚೇತನ ಮಕ್ಕಳು ಹುಟ್ಟಿದರೆ ನಮ್ಮ ಕುಟುಂಬವನ್ನು ಉದ್ದಾರ ಮಾಡಲು ದೇವರು ನಮಗೆ ಈ ವರ ದಯಪಾಲಿಸಿದ್ದಾನೆ ಎಂದುಕೊಳ್ಳಬೇಕು, ಏಕೆಂದರೆ ಈ ಸದೈದ ಪರಿಸ್ಥಿತಿಯಲ್ಲಿ ಸರ್ಕಾರ ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವರಿಗೆ ಅನುಕಂಪದ ಬದಲು ಅವಕಾಶ ನೀಡಿದರೆ ನಮ್ಮಂತಹ ಸಾಮಾನ್ಯ ಜನರಿಗಿಂತಲೂ ವಿಭಿನ್ನವಾದ ಸಾಧನೆ ಮಾಡಿ ತೋರಿಸುತ್ತಾರೆ, ಅದಕ್ಕೆ ಅವರಿಗೆ ಅನುಕಂಪದ ಬದಲು ಅವಕಾಶಗಳನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.  

ಅವರು ಪಟ್ಟಣದ ಸೇಂಟ್ ಪಾಲ್ಸ್‌ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಗಾಟನೆ ನೆರವೇರಿಸಿ ಮಾತನಾಡಿದರು.  

ಇವರೆಲ್ಲ ವಿಶಿಷ್ಠಚೇತನರು ಮಾತ್ರವಲ್ಲಿ ವಿಶೇಷವಾದ ಆಘಾದವಾದ ಶಕ್ತಿಯುಳ್ಳವರಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಾಭಲ್ಯ ಹಾಗೂ ವಿಶೇಷವಾದ ಗುರುತು ಹೊಂದಿದವರಾಗಿದ್ದು, ಎಲ್ಲರಿಗೂ ವೀಶೇಷವಾದ ಕೌಶಲ್ಯಗಳನ್ನು ನೀಡಿದ್ದೇ ಆದರೆ ಎಲ್ಲರಿಗಿಂದ ವಿಭಿನ್ನವಾದ ಸಾಧನೆ ಮಾಡಿ ತೋರಿಸುವಲ್ಲಿ ಮುಂದಾಗುತ್ತಾರೆ. ಆದ್ದರಿಂದ ಇವರನ್ನು ಎಲ್ಲ ಮಕ್ಕಳಲ್ಲಿ ತಾರತಮ್ಯ ಮಾಡದೇ ಎಲ್ಲ ಮಕ್ಕಳಂತೆಯೇ ಇವರಿಗೂ ಅವಕಾಶ ಕಲ್ಪಿಸಿಕೊಡಲು ಪ್ರತಿಯೊಬ್ಬ ಪಾಲಕರು, ಶಿಕ್ಷಕರು ಮುಂದಾಗಬೇಕೆಂದರು. 

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೆಕಾರ,  ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ, ಬಿಎಸ್ ಭಜಂತ್ರಿ, ಕೃಷಿ ಅಧಿಕಾರಿ ರೇವಣೆಪ್ಪ ಮನಗೂಳಿ, ಬಸವರಾಜ ಹರ್ಲಾಪೂರ, ಮೋಹನ ಮಾಂಡ್ರೆ, ರಾಮಣ್ಣ ಕಂಬಳಿ, ಗೌತಮ ಕಪ್ಪತ್ತನವರ, ನಂದಾ ಪಲ್ಲೇದ, ವಿಶಿಷ್ಠಚೇತನ ಮಕ್ಕಳು ಸೇರಿದಂತೆ ಪಾಲಕರಿದ್ದರು. 

ಕಾರ್ಯಕ್ರಮದ ನಿರೂಪಣೆಯನ್ನು ಎನ್‌ಎನ್ ಸಾವಿರಕುರಿ, ಪ್ರಾರ್ಥನೆಯನ್ನು ಸೇಂಟ್ ಪಾಲ್ಸ್‌ ಶಾಲೆಯ ಮಕ್ಕಳು, ಪ್ರಾಸ್ತಾವಿಕ ನುಡಿಗಳನ್ನು ಬಿ.ಎಸ್ ಭಜಂತ್ರಿ,  ಸ್ವಾಗತವನ್ನು ಎನ್‌.ಬಿ ಮಜ್ಜಿಗುಡ್ಡ ನಡೆಸಿಕೊಟ್ಟರು. 


ಸುದ್ದಿ ಓದಿ