ಮಹಲಿಂಗಪುರ

ಸೈಬರ್ ವಂಚನೆಗೆ ಬಲಿಯಾಗದಿರಿ: ಗಚ್ಚನ್ನವರ

ಸೈಬರ್ ವಂಚನೆಗೆ ಬಲಿಯಾಗದಿರಿ: ಗಚ್ಚನ್ನವರ

ಮಹಾಲಿಂಗಪುರ : ತಂತ್ರಜ್ಞಾನ ಬದಲಾದಂತೆ ಕಳ್ಳರು ಕೂಡ ಅಪ್ಡೇಟ್ ಆಗುತ್ತಿದ್ದಾರೆ. ವಿದ್ಯಾರ್ಥಿಗಳು ಸೈಬರ್ ವಂಚನೆಗೆ ಬಲಿಯಾದಿರಿ ಎಂದು ಸ್ಥಳೀಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ವೈ.ವೈ.ಗಚ್ಚನ್ನವರ ಹೇಳಿದರು. 

ಸ್ಥಳೀಯ ಕೆಎಲ್ಇ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಆನ್ಲೈನ್ ವ್ಯವಹಾರಕ್ಕಿಂತ ಆಫ್ಲೈನ್ ವ್ಯವಹಾರ ಸುರಕ್ಷಿತ, ಕಲಿಯುವ ವಯಸ್ಸಿನಲ್ಲಿ ಸಾಮಾಜಿಕ ಜಾಲತಾಣಗಳ ಮೋಸದ ಜಾಲಕ್ಕೆ ಬಲಿಯಾಗಬಾರದು. ಕಾನೂನು ಜ್ಞಾನ ಬೆಳೆಸಿಕೊಂಡು ಸರಕಾರದ ನೆರವಿನ ಹೆಲ್ಪ್ಲೈನ್ ಬಳಸಿಕೊಂಡು ಸುರಕ್ಷಿತ ಬದುಕು ನಡೆಸಬೇಕು ಎಂದರು. 

ಉಪನ್ಯಾಸಕ ಶಿವಲಿಂಗ ಸಿದ್ನಾಳ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಎಲ್.ಬಿ.ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಜಿ.ವೈ.ಕಿತ್ತೂರ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎಂ.ಸಿದ್ನಾಳ, ಉಪನ್ಯಾಸಕ ಬಿ.ಬಿ.ಯಲ್ಲಟ್ಟಿ ಇದ್ದರು.


 

ಸುದ್ದಿ ಓದಿ