ಮಹಲಿಂಗಪುರ

ಸ್ವಾರ್ಥ ಇಟ್ಟುಕೊಂಡು ಸಹಕಾರಿ ರಂಗಕ್ಕೆ ಬರಬೇಡಿ: ಶಾಸಕ ಸವದಿ

ಸ್ವಾರ್ಥ ಇಟ್ಟುಕೊಂಡು ಸಹಕಾರಿ ರಂಗಕ್ಕೆ ಬರಬೇಡಿ:  ಶಾಸಕ ಸವದಿ

ಜ್ಯೋತಿ ಅರ್ಬನ್ ಕೊ ಆಫ್ ಕ್ರೆಡಿಟ್ ಸೊಸೈಟಿ ಶಾಖೆಯ ದಶಮಾನೋತ್ಸವ ಸಮಾರಂಭ 

ಮಹಾಲಿಂಗಪುರ 09:  ಸ್ವಾರ್ಥ ಇಟ್ಟುಕೊಂಡು ಸಹಕಾರಿ ರಂಗಕ್ಕೆ ಬರಬೇಡಿ, ಬದಲಾಗಿ ಬಡವ, ರೈತ ಮತ್ತು ಆರ್ಥಿಕ ಹಿಂದುಳಿದ ವರ್ಗಗಳ ಏಳಿಗೆಯ ನಿಯತ್ತು ಇಟ್ಟುಕೊಂಡು ಬಂದರೆ ಸಹಕಾರಿ ರಂಗ ಅಭಿವೃದ್ಧಿ ಹೊಂದುತ್ತದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಸೋಮವಾರ ಜ್ಯೋತಿ ಅರ್ಬನ್ ಕೊ ಆಫ್ ಕ್ರೆಡಿಟ್ ಸೊಸೈಟಿ (ಲಿ) ಮುಡಲಗಿ, ಮಹಾಲಿಂಗಪುರ ಶಾಖೆಯ ದಶಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬ್ಯಾಂಕುಗಳಲ್ಲಿ ತಮ್ಮ ಭರವಸೆದಾಯಕ ವ್ಯಕ್ತಿತ್ವಕ್ಕೆ ಠೇವಣಿದಾರರು ಹಣ ತೊಡಗಿಸಿರುತ್ತಾರೆ. ಮೋಸ ಆಗದಂತೆ ವೇಳೆಗೆ ಇವರ ಹಣ ಮರುಪಾವತಿ ಆಗಬೇಕು,  

ಇದು ಕೂಡ ಒಂದು ಪುಣ್ಯದ ಕೆಲಸವೆ ಸರಿ, ಇಲ್ಲವಾದಲ್ಲಿ ಅವರು ನೊಂದು ಹಾಕುವ ಶಾಪ ತಮಗೆ ತಟ್ಟೆ ತಟ್ಟುತ್ತದೆ ಎಂದು ಬ್ಯಾಂಕ್ ನ ಎಲ್ಲರಿಗೂ ಕಿವಿ ಮಾತು ಹೇಳಿದರು. ಕಡಿಮೆ ಅವಧಿಯಲ್ಲಿ 55 ಕೋಟಿ ಉಳಿತಾಯ ಮಾಡಿರುವ ಬ್ಯಾಂಕಿನ ಕಾರ್ಯ ಮೆಚ್ಚುವಂಥದ್ದು ಮತ್ತು ಬಡವರಿಗೂ ಸಾಲ ನೀಡಲು ಬಾಂಗ್ಲಾ ದೇಶದ ಪ್ರಧಾನಿ ಅನುಸರಿಸಿರುವ ಮಾರ್ಗ ಎಲ್ಲ ಸಹಕಾರಿ ಬ್ಯಾಂಕ್ ಗಳಿಗೆ ಮಾದರಿ ಎಂದರು. 

ಚಿಮ್ಮಡ ವಿರಕ್ತ ಮಠದ ಪ್ರಭು ಸ್ವಾಮೀಜಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಹಿತ ವಚನ ನೀಡಿ, ಯಾವುದೇ ಹಣಕಾಸು ಸಂಸ್ಥೆ ಲಾಭದಲ್ಲಿ ಇದೆ ಎಂದರೆ ಅದಕ್ಕೆ ಜನತೆಯ ಅಭಿಮಾನವೇ ಕಾರಣ. ಆದ್ದರಿಂದ ರೈತರು ಮತ್ತು ಜನಸಾಮಾನ್ಯರ ಕಷ್ಟಕಾರ​‍್ಪಣಯಗಳನ್ನು ಅರಿತು ಸಾಲ ನೀಡಬೇಕೆಂದು ಸಲಹೆ ನೀಡಿದರು.  

ಸುನದೋಳಿ ಕಾಲೇಜಿನ ಮಾಜಿ ಪ್ರಾಚಾರ್ಯರು ಸುರೇಶ ಲಂಕೆಪ್ಪನವರ ಉಪನ್ಯಾಸ ನೀಡಿ, ಬ್ಯಾಂಕಿನ ಪ್ರಗತಿಗೆ ಗ್ರಾಹಕರು, ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಪ್ರಮುಖ ಪಾತ್ರ ವಹಿಸುವುದು. ಬಾಂಗ್ಲಾ ಪ್ರಧಾನಿ ಮೋಹ್ಮದ್ ಯುನೂಸ್ ವಿನೂತನ ಪ್ರಯೋಗದೊಂದಿಗೆ ಭಿಕ್ಷುಕರು, ಬಡವರು, ಹಾಗೂ ನಿರ್ಗತಿಕರಿಗೆ ಹಣ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಿರುವುದು ವಿಶ್ವಕ್ಕೆ ಮಾದರಿ. ಈ ಕಾರ್ಯಕ್ಕೆ ಅಂತಾರಾಷ್ಟ್ರೀಯ ನೋಬೆಲ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿರುವುದು ಸಹಕಾರಿ ರಂಗಕ್ಕೆ ದೊರಕಿದ ಜಯವೆಂದು ಸಹಕಾರಿ ರಂಗದ ಕಾರ್ಯ ವೈಖರಿಯನ್ನು ಶ್ಲ್ಯಾಘಿಸಿದರು.. 

ಜ್ಯೋತಿ ಅರ್ಬನ್ ಕೊ ಆಫ್ ಕ್ರೆಡಿಟ್ ಸೊಸೈಟಿ ಲಿ ಮೂಡಲಗಿ, ಮಹಾಲಿಂಗಪುರ ಸೇರಿ ಇತರೆ ಐದು ಬ್ಯಾಂಕ್ ಗಳಲ್ಲಿ ಸುಮಾರು 3520 ಜನ ಶೇರುದಾರರಿದ್ದು, ಇವರ ಮೂಲ ಬಂಡವಾಳದಿಂದ ಪ್ರಸಕ್ತ ಸುಮಾರು 58.24 ಲಕ್ಷಗಳಷ್ಟು ಸಂಸ್ಥೆಯು ಲಾಭ ಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಎಂದು ಬ್ಯಾಂಕಿನ ಮಂಜುನಾಥ ಹಡಪದ ವರದಿ ವಾಚನ ಮಾಡಿದರು. ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾತನಾಡಿದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ತೇರದಾಳ ಶಾಸಕ ಸಿದ್ದು ಸವದಿ ನೆರೆವೇರಿಸಿ, ದಿವ್ಯ ಸಾನಿಧ್ಯವನ್ನು ಚಿಮ್ಮಡದ ಪ್ರಭು ಶ್ರೀಗಳು ಮತ್ತು ಅಧ್ಯಕ್ಷತೆಯನ್ನು ಬ್ಯಾಂಕ್ ಅಧ್ಯಕ್ಷ ಮಲ್ಲಪ್ಪ ಮದಗುಣಕಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷರು ಬಸನಗೌಡ ಪಾಟೀಲ್, ಯುವ ಧುರೀಣರಾದ ಸಿದ್ದು ಕೊಣ್ಣೂರ, ಉಪಾಧ್ಯಕ್ಷೆ ಶೀಲಾ ರಾ. ಭಾವಿಕಟ್ಟಿ, ಮಾಜಿ ಜಿಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ, ಸಂಗಪ್ಪ ಹಲ್ಲಿ, ಡಾ.ಮಂಜುನಾಥ ಚನ್ನಾಳ, ಶ್ರೀಶೈಲ ಗಾಣಿಗೇರ, ಮಲ್ಲಪ್ಪ ಸತ್ತಿಗೇರಿ, ಮಲ್ಲಪ್ಪ ಸಿಂಗಾಡಿ, ಪ್ರಕಾಶ ಚನ್ನಾಳ, ಎಸ್ ಎಂ. ಖನದಾಳ, ನಾಗೇಶ ಮುಧೋಳ, ಮುಂತಾದವರಿದ್ದರು. ಸ್ವಾಗತ ಮತ್ತು ನಿರೂಪಣೆಯನ್ನು ಬಸವಣ್ಣೆಪ್ಪ ಮಿರ್ಜಿ ನಡೆಸಿಕೊಟ್ಟರು. 


ಸುದ್ದಿ ಓದಿ