ಶಿರಹಟ್ಟಿ

ಡೆಂಗ್ಯೂ ಬಗ್ಗೆ ನಿಷ್ಕಾಳಜಿ ಬೇಡ ಜಾಗೃತಿ ಅಗತ್ಯ: ನಾಗರಾಜ ಕಳಸಾಪೂರ ಕರೆ

ಡೆಂಗ್ಯೂ ಬಗ್ಗೆ ನಿಷ್ಕಾಳಜಿ ಬೇಡ ಜಾಗೃತಿ ಅಗತ್ಯ: ನಾಗರಾಜ ಕಳಸಾಪೂರ ಕರೆ

ಶಿರಹಟ್ಟಿ 16: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಗ್ಯೂ ರೋಗ ಇದೊಂದು ದೊಡ್ಡ ಕಾಯಿಲೆಯಾಗಿ ಬೆಳೆಯುತ್ತಿದ್ದು, ಎಲ್ಲರೂ ನಿಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಕಾಳಜಿವಹಿಸಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ಕಾಳಜಿ ವಹಿಸುದರೊಂದಿಗೆ ಡೆಂಗ್ಯೂ ಹರಡುವ ಸೊಳ್ಳೆಗಳಿಂದ ದೂರವಿದ್ದು, ಈ ರೋಗದ ಬಗ್ಗೆ ಎಲ್ಲರೂ ನಿಷ್ಕಾಳಜಿ ಮಾಡದೇ ಜಾಗೃತರಾಗಿರಿ ಎಂದು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ನಾಗರಾಜ ಕಳಸಾಪೂರ ಅನಿಸಿಕೆ ವ್ಯಕ್ತಪಡಿಸಿದರು. 

ಅವರು ಸೊಳ್ಳೆಗಳಿಂದ ನಿಯಂತ್ರಣ ಮತ್ತು ನಿಮೂರ್ಲನೆಗಾಗಿ ಜನಜಾಗೃತಿ ಮತ್ತು ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಗದಗ ಜಿಲ್ಲಾಡಳಿತ,ಕುಟುಂಬ ಮತ್ತು ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ  ಇವರ ಸಹಭಾಗಿತ್ವದಲ್ಲಿ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಜರುಗಿದ ಡೆಂಗೀ ವಿರೋಧಿ ಮಾಶಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸಸಿಗೆ ನೀರುಣಿಸಿ ಮಾತನಾಡಿದರು. 

ತಾಲೂಕಾ ಆರೋಗ್ಯಾಧಿಕಾರಿ ಜಗದೀಶ ಕೋಡಿಹಳ್ಳಿ ಮಾತನಾಡಿ, ಆರೋಗ್ಯ ಇಲಾಖೆ ಸೊಳ್ಳೆ ನಿರ್ಮೂಲನೆಗಾಗಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಎಲ್ಲರ ಉತ್ತಮ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿದ್ದು,  

ಅದರಂತೆ ಗದಗ ಜಿಲ್ಲೆಯಾದ್ಯಂತ  ಪ್ರತಿ ಮನೆಮನೆಗೆ, ಶಾಲಾ ಕಾಲೇಜು, ಹಳ್ಳಿಗಳಲ್ಲಿ ಜನಜಾಗೃತಿಗೋಸ್ಕರ ಮನೆಮನೆಗೆ ತೆರಳಿ ಡೆಂಗ್ಯೂ ಜಾಗೃತಿ ಕರಪತ್ರ ವಿತರಿಸುವ ಮತ್ತು ಸಾರ್ವಜನಿಕರನ್ನು ಸಂದರ್ಶಿಸುವ ಮೂಲಕ ಡೆಂಗ್ಯೂ ಬಗ್ಗೆ ಜಾಗೃತಿ ನೀಡಲಾಗುತ್ತಿದೆ ಎಂದರು. 

ಈ ಡೆಂಗ್ಯೂ ನಿಯಂತ್ರಣಕ್ಕಾಗಿ ನೀರಿನ ತೊಟ್ಟಿಗೆ ಲಾರ್ವಾ ಸೊಳ್ಳೆಯ ಮರಿ ಮತ್ತು ತತ್ತಿಗಳನ್ನು ತಿನ್ನುವ ಗಪ್ಪಿ ಮೀನುಗಳನ್ನು ಉಚಿತವಾಗಿ ವಿತರಿಸುತ್ತಿದ್ದು, ಇದರ ಲಾಭ ಪಡೆದು ಎಲ್ಲರೂ ಸುರಕ್ಷಿತವಾಗಿರಿ ಎಂದು ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನೀರೀಕ್ಷಕ ಲಿಂಗರಾಜ ನಾರ್ಸಿ ತಿಳಿಸಿದರು. 

ಕಡಕೋಳ ಆರೋಗ್ಯ ಕೇಂದ್ರದ ಉಪನೀರೀಕ್ಷಕ ಸಿಕೆ ಮುಳಕುಂಪಿಮಠ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಹಲವು ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಜನಜಾಗೃತಿಗೆ ಮೊದಲ ಆದ್ಯತೆ ನೀಡಲಾಗಿದೆ. ಮಹಿಳೆ ಮತ್ತು ಮಕ್ಕಳು ಡೆಂಗ್ಯೂ ಬಗ್ಗೆ ತಿಳುವಳಿಕೆ ಹೊಂದುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಡೆಂಗ್ಯೂವನ್ನು ನಿಯಂತ್ರಿಸಿ, ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಶ್ರೀಮತಿ ಬಡಿಗೇರ ನಡೆಸಿದರು,  ರಾಣಿ ಚೆನ್ನಮ್ಮ ವಸತಿ ಶಾಲೆಯ ಎಲ್ಲ ಮಕ್ಕಳು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಇದ್ದರು. 


ಸುದ್ದಿ ಓದಿ