ಡಾಡ್ಜ ಬಾಲ್ ಆಟಗಾರ್ತಿ ಪೂರ್ವಿ ಅಂಗಡಿಗೆ ಕೆಎಲ್ಇ ಸಂಸ್ಥೆಯಿಂದ ಸನ್ಮಾನ
ಸಿಂಗಾಪುರನಲ್ಲಿನ ಡಾಡ್ಜಬಾಲ್ ಕ್ರೀಡೆಯಲ್ಲಿ ಭಾರತದಿಂದ ಪ್ರತಿನಿಧಿಸಿದ ಫೂರ್ವಿ ಅಂಗಡಿ
ಮಹಾಲಿಂಗಪುರ 23: ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿಯವರ ಪುತ್ರಿ, ಅಂತರಾಷ್ಟ್ರೀಯ ಡಾಡ್ಜಬಾಲ್ ಆಟಗಾರ್ತಿ ಪೂರ್ವಿ ಅಂಗಡಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನ. 17,18 ರಂದು ಸಿಂಗಾಪುರದಲ್ಲಿ ನಡೆದ ಡಾಡ್ಜಬಾಲ್ ಕ್ರೀಡೆಯಲ್ಲಿ ಭಾರತ ತಂಡ ಪ್ರತಿನಿಧಿಸಿ ಮುಂದೆ ಆಸ್ಟ್ರಲೀಯಾದಲ್ಲಿ ನಡೆಯವ ವಿಶ್ವ ಚಾಂಪಿಯನ್ಸ ಡಾಡ್ಜಬಾಲ್ ಸ್ಪರ್ಧೆಗೆ ಆಯ್ಕೆಯಾಗಿದಕ್ಕೆ ಕಾರ್ಯಕ್ರಮ ಆಯೋಜಿಸಿ ಕೆ.ಎಲ್.ಇ ಅಂಗಸಂಸ್ಥೆಗಳು ಸನ್ಮಾನಿಸಿ ಅಭಿನಂದಿಸಿದವು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂರ್ವಿ ಅಂಗಡಿಯವರು ಈ ಸಾಧನೆಯಲ್ಲಿ ನನ್ನ ಅಪ್ಪ ಅಮ್ಮನ ಮತ್ತು ಗುರುವೃಂದರ ಸಹಕಾರ ಅತ್ಯಮೂಲ್ಯವಾಗಿದೆ, ನಾನು ಜಗತ್ತ ವಿಖ್ಯಾತ ಕೆ.ಎಲ್.ಇ ವಿದ್ಯಾರ್ಥಿನಿ ಎಂದು ಹೇಳುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು.
ನಂತರ ಅಧ್ಯಕ್ಷೀಯ ನುಡಿ ಮಾತನಾಡಿದ ಕೆ.ಎಲ್.ಇ ಅಜೀವ ಸದಸ್ಯರಾದ ಎಸ್.ಆಯ್.ಕುಂದಗೋಳ ಅವರು ಕ್ರೀಡೆಯಲ್ಲಿ ಭಾಗವಹಿಸುವಿಕೆ, ಪರಿಶ್ರಮ ಮತ್ತು ಅದೃಷ್ಟ ಇದ್ದರೆ ಮಾತ್ರ ಸಾಧನೆ ಮಾಡಲು ಸಾದ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಸ್ಥಳೀಯ ಆಡಳೀತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಮ್.ಅವರಾದಿ, ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಎಲ್.ಬಿ.ತುಪ್ಪದ, ಬಿ.ಎನ್.ಅರಿಕೇರಿ, ದೈಹಿಕ ನಿರ್ದೇಶಕ ವಿ.ಎಸ್.ಅಂಗಡಿ, ಡಾ ಎಸ್.ಡಿ.ಸೊರಗಾಂವಿ ಹಾಗೂ ಎಲ್ಲ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫೋಟೊ; 23 ಎಂ.ಎಲ್.ಪಿ.3
ಮಹಾಲಿಂಗಪುರ : ಸಿಂಗಾಪುರನಲ್ಲಿನ ಡಾಡ್ಜಬಾಲ್ ಕ್ರೀಡೆಯಲ್ಲಿ ಭಾರತದಿಂದ ಪ್ರತಿನಿಧಿಸಿದ ಫೂರ್ವಿ ಅಂಗಡಿಗೆ ಕೆ.ಎಲ್.ಇ ಸಂಸ್ಥೆ ಸನ್ಮಾನಿಸಿ ಗೌರವಿಸಿದರು.