ಆಧುನಿಕ ಜಗತ್ತಿನ ಸಾಕ್ಷಾತ್ ದೇವರ ಸ್ವರೂಪಿಗಳೇ ವೈದ್ಯರು: ಡಾ. ವಿನೋದ ಮೇತ್ರಿ
ಮಹಾಲಿಂಗಪುರ 01: ಆರೋಗ್ಯವೇ ಭಾಗ್ಯ ಎನ್ನುವುದು ಸರ್ವಕಾಲಿಕ ಸತ್ಯ. ಇಂದಿನ ಜಗತ್ತಿನಲ್ಲಿ ಅನೇಕ ರೋಗಗಳು ಮನುಷ್ಯ ಮತ್ತು ಪ್ರಾಣಿಗಳನ್ನು ಬಾದಿಸುತ್ತಿವೆ. ಅದರ ಸಿಲುಕಿ ಬದಕು ನರಳುತ್ತಿದೆ. ರೋಗಗಳು ನಿರಂತವಾಗಿ ಹೊಸ ಹೊಸ ರೂಪದಲ್ಲಿ ಹುಟ್ಟಿಕೊಂಡು ಹರಡುತ್ತಿವೆ ಅವುಗಳಿಗೆ ಓಷಧ ಕಂಡುಹಿಡಿಯುವುದು ಅಷ್ಟು ಸುಲಭವಾಗಿಲ್ಲ, ಅದು ಸಮಯ ತೆಗೆದುಕೊಳ್ಳುತ್ತದೆ. ಇವೆಲ್ಲವುಗಳಿಂದ ನಮಗೆ ರಕ್ಷಣೆ ಕೊಡುವ ಆಧುನಿಕ ಜಗತ್ತಿನ ದೇವರಾಗಿ ವೈದ್ಯರು ಕಾಣುತ್ತಿದ್ದಾರೆ ಎಂದು ಖ್ಯಾತ ವೈದ್ಯ ಡಾ ವಿನೋದ ಮೇತ್ರಿ ಹೇಳಿದರು.
ಅವರು ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಬುದ್ನಿ ಪಿ ಡಿ ಯಲ್ಲಿರುವ ಅಕ್ಷರ ವಿದ್ಯಾವಿಹಾರ ಶಾಲೆಯಲ್ಲಿ ನಡೆದ ವೈದ್ಯ ಹಾಗೂ ಪತ್ರಿಕಾ ದಿನಾಚರಣೆಯ ನಡೆದ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ಭಾರತದ ಪೌರಾಣಿಕ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಭಾರತ ರತ್ನ ಡಾ. ಬಿಧನ ಚಂದ್ರ ರಾಯ ಅವರ ಜನ್ಮ ದಿನದ ಸವಿ ನೆನಪಿಗಾಗಿ ವೈದ್ಯರ ದಿನ ಆಚರಿಸಿ ಇಡೀ ದೇಶ ಈ ಮೂಲಕ ಅವರನ್ನು ಗೌರವಿಸುತ್ತದೆ.
ಕೋವಿಡ್ ಸಮಯದಲ್ಲಿ ತಮ್ಮ ಜೀವವನ್ನೇ ಲೆಕ್ಕಿಸದೆ ಜಗತ್ತಿನ ಜನರ ರಕ್ಷಿಸಿ ಜಗತ್ ರಕ್ಷಕರಾಗಿ ಕಾರ್ಯನಿರ್ವಹಿಸಿ "ವೈದ್ಯೋ ನಾರಾಯಣ ಹರಿ "ನಾನ್ನುಡಿಗೆ ನಿಜವಾದ ಅರ್ಥ ಕೊಟ್ಟರು. ಜಗತ್ತಿನ ದೇವಾನು ದೇವತೆಗಳು ಮಂದಿರದ ಬಾಗಿಲು ಮುಚ್ಚಿ ಪೂಜೆ ಪುನಸ್ಕಾರ ಬಂದ ಮಾಡಿ ಕುಳಿತುಕೊಂಡಾಗ ಜನರಿಗೆ ನಿಜವಾಗಿಲು ದೇವರಾಗಿದ್ದು ವೈದರು ಎಂಬುದನ್ನು ಯಾರು ಮರೆಯೋ ಹಾಗಿಲ್ಲ ಈ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪನಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಿಸಲಾಗುತ್ತದೆ ಎಂದರು.
ನಂತರ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಅಂಗಡಿ ಮಾತನಾಡಿ ಒಂದು ಮನೆ ನಿರ್ಮಿಸಲು ನಾಲ್ಕು ಸ್ಥಂಬಗಳು (ಪಿಲ್ಲರ್ )ಬೇಕು ಹಾಗೆ ದೇಶವನ್ನು ಸಮರ್ಥವಾಗಿ ಮುನ್ನಡಸಲು ನಾಲ್ಕು ಸ್ಥಂಬಗಳು ಬೇಕು ಅವುಗಳ ಶಾಸಕಾಂಗ, ಕಾಯಂರ್ಗ, ನ್ಯಾಯಾಂಗ,ಕೊನೆಯ ಅಂಗವಾದ ಪತ್ರಿಕಾ ರಂಗ ಇದು ಮೇಲಿನ ಮೂರು ಅಂಗಗಳು ಮಾಡುವು ತಪ್ಪುಗಳನ್ನು ಸ್ಪಷ್ಟವಾಗಿ ಬರೆದು ಜನರಿಗೆ ತೋರಿಸುವುದೇ ಪತ್ರಿಕೆ ಮುಖ್ಯ ಉದ್ದೇಶವಾಗಿದೆ. ಇದರಿಂದ ಈ ನಾಲ್ಕನೇಯ ಅಂಗವು ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಅತೀ ಮುಖ್ಯ ಅಂಗವಾಗಿ ಕೆಲಸ ಮಾಡುತ್ತದೆ. ಪತ್ರಿಕೆಗಳಿಗೆ ಸುದ್ದಿ ಒದಗಿಸುವ ಪತ್ರಕರ್ತರನ್ನು ಗೌರವಿಸುವದು ಪತ್ರಿಕಾ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಸನ್ಮಾನ : ಪತ್ರಕರ್ತರನ್ನು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳು ಅರೋಗ್ಯ ಕುರಿತು ವಿಶೇಷ ವಿಟ್ಯಾಮಿನ್ ರೂಪಕ ಆರೋಗ್ಯದ ಮಹತ್ವ ಸಾರಿತು. ಮಕ್ಕಳು ಹಾಕಿದ ವೈದ್ಯರ ವೇಷ ಭೂಷಣ ನೋಡುಗರ ಗಮನ ಸೆಳೆಯಿತು. ವೈದ್ಯರ ದಿನದ ಗೌರವಾರ್ಥವಾಗಿ ಸಂಸ್ಥೆಯ ಅಧ್ಯಕ್ಷ ಡಾ. ವಿನೋದ ಮೇತ್ರಿ ಕೇಕ್ ಕಟ್ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ಪತ್ರಕರ್ತರಾದ ಚಂದ್ರಶೇಖರ ಮೊರೆ, ಲಕ್ಷ್ಮಣ ಕಿಶೋರ ಮಾತನಾಡಿದರು. ಸ್ಥಳೀಯ ಕಾನಿಪ ಸಂಘದ ಅಧ್ಯಕ್ಷ ಮಹೇಶ ಮಣ್ಣಯ್ಯನವರಮಠ, ಪತ್ರಕರ್ತರಾದ ಹಣಮಂತ ನಾವಿ, ಡಾ. ತೇಜಿಸ್ವಿತಾ ಮೇತ್ರಿ, ಡಾ. ಪೂಜಾ ಬಾಗೋಜಿ, ಡಾ. ಅಶ್ವಿನಿ ಬಡೆಗೇರ, ಸುನೀತಾ ಹಾವಿನಾಳ, ಕಲ್ಮೇಶ ಕೋಟಿ, ಸಂಜಯ ಪಂಗಣ್ಣವರ ಸೇರಿ ಹಲವರು ಉಪಸ್ಥಿತರಿದ್ದರು.
ಶಾಲಾ ಗುರು ವೃಂದ ಶಾಲಾ ಮಕ್ಕಳು ಭಾಗವಹಿಸಿದರು.ಕಾರ್ಯಕ್ರಮವನ್ನು ಗುರುಮಾತೆ ರೂಪಾ ಮಣ್ಣಯ್ಯನವರಮಠ ನಿರೂಪಿಸಿ ವಂದಿಸಿದರು.