ಶಿವರಾಜ್ ಎಂ. ಅವರಿಗೆ ಡಾಕ್ಟರೇಟ್ ಪದವಿ
ಬಳ್ಳಾರಿ 08: ಸ್ಥಳೀಯ ಮೋಕ ಗ್ರಾಮದ ನಿವಾಸಿ, ಶಿವರಾಜ ಎಂ. ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ನಿರ್ವಹಣಶಾಸ್ತ್ರ ವಿಭಾಗದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಯನ್ನು ಘೋಷಿಸಿದೆ.
ಶಿವರಾಜ ಅವರು ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಕೆ.ಸಿ.ಪ್ರಶಾಂತ ಅವರ ಮಾರ್ಗದರ್ಶನದಲ್ಲಿ “ಇನ್ವೆಸ್ಟ್ಮೆಂಟ್ ಬಿಹೇವಿಯರ್ ಆಫ್ ಕಾಲೇಜ್ ಟೀಚರ್ಸ್ -ಎ ಸ್ಟಡೀ ಆಫ್ ಯುಜಿಸಿ ಕಾಲೇಜ್ ಟೀಚರ್ಸ ಅಂಡರ್ ಜೂರಿಸ್ಡಿಕ್ಷನ್ ವಿಜಯನಗರ ಶ್ರೀಕೃಷ್ಣದೇವರಾಯ ಯೂನಿವರ್ಸಿಟಿ, ಬಳ್ಳಾರಿ” ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ. ಪ್ರಸ್ತುತ ಶಿವರಾಜ ಎಂ. ಅವರು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರನ್ನು ಮೋಕ ಗ್ರಾಮದ ಶಿಕ್ಷಣ ಪ್ರೇಮಿಗಳು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಡಾ.ಟಿ.ದುರುಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ಬಸಪ್ಪ, ಕಾರ್ಯದರ್ಶಿ ಸಿದ್ದೇಶ್ ಮುಂತಾದವರು ಅಭಿನಂದಿಸಿ ಶುಭ ಹಾರೈಸಿದ್ದು, ಇನ್ನೂ ಹೆಚ್ಚಿನ ಸಂಶೋಧನಾ ಕೃತಿಗಳು ಇವರಿಂದ ಹೊರಹೊಮ್ಮಲಿ ಎಂದು ಆಶೀಸಿದ್ದಾರೆ.