ಬಳ್ಳಾರಿ

ವಿ.ಗಂಗೋತ್ರಿಗೆ ಡಾಕ್ಟರೇಟ್ ಪದವಿ

ವಿ.ಗಂಗೋತ್ರಿಗೆ ಡಾಕ್ಟರೇಟ್ ಪದವಿ

ಬಳ್ಳಾರಿ ಜು.18: ಸ್ಥಳೀಯ ಕೌಲ್‌ಬಜಾರ್ ಪ್ರದೇಶದ ಬಂಡಿಹಟ್ಟಿ ನಿವಾಸಿಯಾಗಿರುವ ವಿ.ಗಂಗೋತ್ರಿ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿಯನ್ನು ಘೋಷಿಸಿದೆ.  

ವಿ. ಗಂಗೋತ್ರಿ ಅವರು ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಹೆಚ್‌. ಅವರ ಮಾರ್ಗದರ್ಶನದಲ್ಲಿ “ಗ್ರೇಟ್ ಮೆಟ್ರೋಪಾಲಿಟನ್ ಸಿಟಿ ಆಫ್ ಹಂಪಿ- ಹಿಸ್ಟಾರಿಕಲ್ ಸ್ಟಡಿ” ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿಯನ್ನು ಘೋಷಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರು ತಮ್ಮ ಕಚೇರಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ