ವೈದ್ಯ ಡಾ. ವಿಜಯಮಹಾಂತೇಶ ಅವರ ಕಾರ್ಯ ಶ್ಲಾಘನೀಯ: ಡಾ. ಬೆಳಗಲಿ
ಮಹಾಲಿಂಗಪುರ : ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ವೈದ್ಯಕೀಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರೂ ಇಂದು ಹಳ್ಳಿಯ ಸಾಮಾನ್ಯ ಜನರ ಆರೋಗ್ಯಕ್ಕಾಗಿ ಉಚಿತ ಶಿಬಿರ ಏರ್ಪಡಿಸಿ, ಅವರ ನೂರಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಡಾ.ಎ.ಆರ್.ಬೆಳಗಲಿ ಹೇಳಿದರು.
ಡಾ. ವಿಜಯಮಹಾಂತೇಶ ಪೂಜಾರಿಯವರ ನರ ವಿಜ್ಞಾನ ಸಂಸ್ಥೆ ವತಿಯಿಂದ ಸ್ಥಳೀಯ ಬನಶಂಕರಿ ದೇವಿ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ನರರೋಗ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಡಾ. ವಿಶ್ವನಾಥ ಗುಂಡಾ, ಡಾ. ವಿಜಯ ಹಂಚಿನಾಳ, ಡಾ. ಅಜಿತ್ ಕನಕರೆಡ್ಡಿ ಮಾತನಾಡಿದರು.
ಡಾ. ವಿಜಯಮಹಾಂತೇಶ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದಲ್ಲಿ ಹಮ್ಮಿಕೊಂಡಿರುವ ಉಚಿತ ತಪಾಸಣೆ ಮತ್ತು ಸಾಲೋಚನೆಯ ಉದ್ದೇಶವನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ 350 ಕ್ಕೂ ಹೆಚ್ಚು ಜನ ಆಗಮಿಸಿ, ತಲೆ ನೋವು, ತಲೆಸುತ್ತು, ವಾಂತಿ, ಪ್ರಜ್ಞಾಹೀನತೆ, ತಲೆ ಪೆಟ್ಟು, ಮೆದುಳು ಗಡ್ಡೆ, ಅಪಸ್ಮಾರ, ಫಿಟ್ಸ್ ,ಮುಖ ವಿಚಲನೆ, ಬೆನ್ನುನೋವು, ಕಾಲು ನೋವು, ಕುತ್ತಿಗೆ ನೋವು, ಸೊಂಟ ನೋವು, ದುರ್ಬಲ ಕೈ ಕಾಲು, ಬೆನ್ನು ಮೂಳೆ ಗಾಯ, ಪಾರ್ಶ್ವವಾಯು,ನರಗಳ ಜ್ವರ ಮುಂತಾದವುಗಳಿಗೆ ಉಚಿತ ನರ ರೋಗ ತಪಾಸಣೆ ಮತ್ತು ಸಲಹೆ ಪಡೆದುಕೊಂಡರು. ವೈದ್ಯ ವಿಜಯಮಹಾಂತೇಶ ಪೂಜಾರಿ, ಸಿಬ್ಬಂದಿ ಕಲ್ಲೊಳ್ಳಿಮಠ, ಹಿರೇಮಠ, ಗೀರೀಶ್ ಸಾರವಾಡ, ರಾಜು, ಆನಂದ, ಸಿದ್ದು, ಮಹಾದೇವ, ನಾಗೇಶ, ಬಸವರಾಜ, ವಿದ್ಯಾಸಾಗರ, ಮಾತಾಂರ್ಡ ತಂಡದಲ್ಲಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರಿಂದ ನಟ ಪುನೀತ್ ರಾಜಕುಮಾರ್ ಅವರಿಗೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಿಸಿ, ನಂತರ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಪುರಸಭಾ ಸದಸ್ಯ ರಾಜು ಚಮಕೇರಿ, ಡಾ. ಹರೀಶ್ ಬೆಳಗಲಿ, ರಾಮಣ್ಣ ಪಾಟೀಲ, ಡಾ. ವಿಶ್ವನಾಥ ನಾರಗೊಂಡ, ಡಾ. ಗೀರೀಶ ನಾರಗೊಂಡ, ಡಾ. ರವಿ ಜಮಖಂಡಿ, ಕೆ. ಎಂ. ಪೂಜಾರಿ, ನಿರ್ಮಲಾ ಪೂಜಾರಿ ಇತರರು ಇದ್ದರು.
ಶಿವಾನಂದ ಬಾಗಲಕೋಟೆ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ, ನಾಗೇಶ ಇಂಗಳಗಿ ವಂದಿಸಿದರು.