ಮುದೇನೂರು ಕೆರೆಗೆ ನದಿಯ ನೀರು ಹರಿಸಿ: ಕಚೇರಿಗೆ ಮುತ್ತಿಗೆ
ಲೋಕದರ್ಶನ ವರದಿ
ಹೂವಿನಹಡಗಲಿ 07: ಮಳೆಕೂರತೆಯಿಂದ ಬತ್ತಿದ ಕೆರೆ ಹಾಗೂ ಹಳ್ಳ ಕೂಳಗಳಿಗೆ ನೀರು ಹರಿಸುವುದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವುದು. ಏಕೆಂದರೆ ಮಳೆಗಾಲದಲ್ಲಿ ಕೆಲವೊಂದು ಹಳ್ಳಿಗಳಲ್ಲಿ ಟ್ಯಾಂಕರಗಳಿಂದ ನೀರು ಪೂರೈಕೆ ಮಾಡುತ್ತಿದ್ದು, ಕೂಡಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸರಕಾರ ಜನ ಜಾನುವಾರುಗಳ ಹಿತದೃಷ್ಟಿಯಿಂದ ನೀರು ಹರಿಸಬೇಕು ಎಂದು ಹೂವಿನಹಡಗಲಿ ರೈತರು ಆಗ್ರಹಿಸಿದರು. ಹೂವಿನಹಡಗಲಿ ರೈತರು ಶುಕ್ರವಾರ ಪಟ್ಟಣದ ಸಿಂಗಟಾಲೂರು ಏತ ನೀರಾವರಿ ಇಲಾಖೆ ಮುತ್ತಿಗೆ ಹಾಕಿ ಬೇಡಿಕೆಯ ಮನವಿಯನ್ನು ಸಲ್ಲಿಸಿದರು. ಇದೇ ವೇಳೆ ಹಕ್ಕಂಡಿ ಶಿವನಾಗಪ್ಪ, ಮಹಾದೇವ, ಸುರೇಶ, ಬಾವಿಹಳ್ಳಿ ಬಸವರಾಜ ಸೇರಿದಂತೆ 20 ಕ್ಕೂ ಹೆಚ್ಚು ರೈತರು ಇದ್ದರು.