ಮಹಲಿಂಗಪುರ

ಚಿಮ್ಮಡ ಗ್ರಾಮದ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ, ಪರೀಶೀಲನೆ.

ಚಿಮ್ಮಡ ಗ್ರಾಮದ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ, ಪರೀಶೀಲನೆ.


ಮಹಾಲಿಂಗಪುರ 10: ಸಮೀಪದ ಚಿಮ್ಮಡ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮತಗಟ್ಟೆಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಭೇಟಿ ನೀಡಿ ಮಾಹಿತಿ ಪಡೆದರು. 

ಶುಕ್ರವಾರ ಮಧ್ಯಾಹ್ನ ತಹಶೀಲ್ದಾರ ಸಂಜಯ ಇಂಗಳೆಯವರೊಂದಿಗೆ ಮತಗಟ್ಟೆಗೆ ಭೇಟಿ ನೀಡಿದ ಅವರು ಮತಗಟ್ಟೆಯ ಸುವ್ಯವಸ್ಥೆ, ಮತದಾನದ ವಿವರಗಳ ಕುರಿತು ಮಾಹಿತಿ ಪಡೆದು ಪರೀಶೀಲನೆ ನಡೆಸಿದರು. 

ಸ್ಥಳಿಯ ಮತಗಟ್ಟೆ ಸಂಖ್ಯೆ 372 ರಲ್ಲಿ 14 ಮಹಿಳೆಯರು, 14 ಪುರುಷರನ್ನೊಳಗೊಂಡು ಇಪ್ಪತ್ತೆಂಟು ಜನ ಸದಸ್ಯ ಮತದಾರರಿದ್ದು ಮುಂಜಾನೆ 10-30 ರಿಂದ 12-20 ರೊಳಗೆ ಅನಕ್ಷರಸ್ಥ 6 ಜನ ಮತದಾರರು ತಮ್ಮ ಸಹಾಯಕರೊಂದಿಗೆ ಮತದಾನಮಾಡುವ ಮೂಲಕ ಎಲ್ಲ ಸದಸ್ಯರು ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದರು. 

ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಎಂ.ಎಸ್‌. ರೂಗಿ, ಚುನಾವಣಾಧಿಕಾರಿ ರಾಘವೇಂದ್ರ ಎಂ.ವ್ಹಿ, ಸಹಾಯಕ ಚುನಾವಣಾಧಿಕಾರಿ ಕೆ.ಆರ್‌. ದಾನದ, ಮತಗಟ್ಟೆ ಅಧಿಕಾರಿ ಎನ್‌. ಬಿ. ಬುರಲಿ, ಸರಕಾರದ ಸೂಕ್ಷ?? ನಿಘಾಧಿಕಾರಿ ಹರ್ಷನ್‌ಸಿಂಘ್ ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ