ಪುರಸಭೆಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಧಿಡೀರ್ ಭೇಟಿ

ಪುರಸಭೆಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಧಿಡೀರ್ ಭೇಟಿ

ಬ್ಯಾಡಗಿ: ಪಟ್ಟಣದ ಪುರಸಭೆಗೆ ಮಂಗಳವಾರ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಭೇಟಿ ಧಿಡೀರ್ ನೀಡಿದರು. ನಂತರ ಕಚೇರಿಯ ವಿವಿಧ ವಿಭಾಗಗಳ ಪ್ರಗತಿ ಕುರಿತಂತೆ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುರಸಭೆ ಆದಾಯ ಹೆಚ್ಚಳವಾದಲ್ಲಿ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ, ಈ ಹಿ ನ್ನೆಲೆಯಲ್ಲಿ ಪುರಸಭೆಯಿಂದ ಕಟ್ಟಡ ಕಟ್ಟಲು ಪರವಾನಿಗೆ ಪಡೆಯಲು ಬಂದ ಸಾರ್ವಜನಿಕರ ಕಟ್ಟಡ ನಿರ್ಮಾಣ ಸ್ಥಳಕ್ಕೆ ಖು ದ್ದಾಗಿ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಇದರಿಂದ ಇದರಲ್ಲಿ ನಡೆಯುವ ಅಕ್ರಮ ತಡೆಯಲು ಸಾಧ್ಯವೆಂದರು.

ಆಸ್ತಿತೆರಿಗೆ ವಸೂಲಾತಿ ಸಮರ್ಪಕವಾಗಿ ಮಾಡಿ:ಇನ್ನೂಳಿದಂತೆ ಪಟ್ಟಣದಲ್ಲಿ ಆಸ್ತಿ ತೆರಿಗೆ ವಸೂಲಾತಿಯನ್ನು ಸಮರ್ಪಕವಾಗಿ ಮಾಡಿ ಇದರಿಂದಲೂ ಸಹ ಪುರಸಭೆಗೆ ಆದಾಯ ಹೆಚ್ಚಲಿದ್ದು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇದು ಸಹಕಾರಿಯಾಗಲಿದೆ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೇ ನಿಗದಿತ ಅವಧಿಯಲ್ಲಿ ಮಾಡಿಕೊಡುವಂತೆ ಸೂಚನೆ ನೀಡಿದರು. 

ಎಸ್.ಟಿ.ಪಿ. ಸೈಟ್ ವೀಕ್ಷಣೆ: ಪುರಸಭೆಯಿಂದ ಯುಜಿಡಿ ಪ್ಲಾಂಟ್ಗೆ ಭೇಟಿ ನೀಡಿ(ಟ್ರೀಟ್ಮೆಂಟ್ ಪ್ಲಾಂಟ್) ಪರಿಶೀಲನೆ ನಡೆ ಸಿದ ನಂತರ ಮಾತನಾಡಿದ ಅವರು 6 ವರ್ಷ ಕಳೆಯುತ್ತಾ ಬಂದಿದ್ದರೂ ಕಾಮಗಾರಿ ಯಾಕೆ ಮುಗಿಸಿಲ್ಲ..? ಎಂದು ಎಇಇ ಹಾಗೂ ಗುತ್ತಿಗೆದಾರರಿಗೆ ಪ್ರಶ್ನಿಸಿದರು, ಯಾವುದೇ ಸಬೂಬು ನೀಡದೇ ಮತ್ತು ಮುಂದಿನ 15 ದಿನಗಳಲ್ಲಿ ಕಾಮ ಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರಿಗೆ ಬಳಕೆ ನೀಡುವಂತೆ ಖಡಕ್ ಸೂಚನೆ ನೀಡಿದರು. 

 ಈವೇಳೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ. ಯುಜಿಡಿ ಎಇಇ ನವೀನಕುಮಾರ ಇಂಜಿನಿಯರ್ ಮಂಜುನಾಥ ಊದಗಟ್ಟಿ ಪುರಸಭೆ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.



ಸುದ್ದಿ ಓದಿ