ಮಹಲಿಂಗಪುರ

ಭೂಪಾಲ್ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಜಿಲ್ಲೆಯ ಭಾಜಪ ಮುಖಂಡರು ಭಾಗಿ

ಭೂಪಾಲ್ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಜಿಲ್ಲೆಯ ಭಾಜಪ ಮುಖಂಡರು ಭಾಗಿ

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೌಹಾರ್ದ ಭೇಟಿ.

ಮಹಾಲಿಂಗಪುರ : ಮಧ್ಯಪ್ರದೇಶ ರಾಜ್ಯದ ರಾಜಧಾನಿ ಭೂಪಾಲ್ ನಲ್ಲಿ 10ದಿವಸಗಳ ವರೆಗೆ ನಡೆದ ರಾಷ್ಟ್ರೀಯ ವಿಸ್ತಾರಕರ ಕಾರ್ಯಾಗಾರ ಸಭೆಗೆ ಬಾಗಲಕೋಟ ಜಿಲ್ಲೆಯ ಭಾಜಪ ಪಕ್ಷದ ಎಂಟು ಜನ ಮುಖಂಡರು ಭಾಗವಹಿಸಿದ್ದರು.

ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಭಾಜಪ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕಾರ್ಯಕರ್ತರಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿ, ಹಾರೈಸಿದರು ಎಂದು ಪುರಸಭೆ ಸದಸ್ಯ ರವಿ ಜವಳಗಿ ಮಾಹಿತಿ ನೀಡಿದ್ದಾರೆ. 

ಬಾಗಲಕೋಟ ಜಿಲ್ಲೆಯ ಪರವಾಗಿ ಭುವನೇಶ ಪೂಜಾರಿ, ನಂದು ಗಾಯಕ್ವಾಡ್, ವಿಠ್ಠಲ ಯತ್ನಟ್ಟಿ, ಸತ್ಯನಾರಾಯಣ ಹೇಮಾದ್ರಿ, ಕಪಿಲಕುಮಾರ, ನಾಗಪ್ಪ ಅಂಬಿ, ಶಂಕರ ಹುನ್ನೂರು ಪಾಲ್ಗೊಂಡಿದ್ದರು 

ಸುದ್ದಿ ಓದಿ