ಸಿಂಧಗಿ

ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ

ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ

ಸಿಂದಗಿ 23 : ನಮ್ಮ ಸಂಸ್ಥೆಯಲ್ಲಿ ಎಲ್ಲ ಜನಾಂಗದ ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೋಮು, ಜಾತಿಗಳ ಭೇದಭಾವಗಳಿಗೆ ಅವಕಾಶವಿಲ್ಲ. 20 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದು ಬೀದರದ ಶಾಹೀನ್ ಇನ್ಸಿಟಿಟ್ಯೂಶನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲï ಖದೀರ್ ಹೇಳಿದರು. 

ಪಟ್ಟಣದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಸಭಾಭವನದಲ್ಲಿ ಸಿಂದಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಫ್ ವಿತರಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಯಾವುದೇ ಧರ್ಮದ ಬಡ ವಿದ್ಯಾರ್ಥಿಗಳಿದ್ದರೂ ಸಹ ಅವರ ಆಯ್ಕೆ ಮಾಡುವ ವಿಧಾನ ಸಿಂದಗಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಡಿಯಲ್ಲಿ ಚಾಲನೆ ನೀಡಲಾಗಿದೆ. 8,10 ಮತ್ತು 12 ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಸಿಂದಗಿ ತಾಲೂಕಿನ ಯಾವುದೇ ವಿದ್ಯಾರ್ಥಿಗಳನ್ನು ನಿಗದಿತ ಸಮಯದಲ್ಲಿ ಆನ್‍ಲೈನ್ ಪರೀಕ್ಷೆಗೆ ಒಳಪಡಿಸಿ ಪಡೆದಕೊಂಡ ಅಂಕಗಳ ಆಧಾರದ ಮೇಲೆ ಮತ್ತು ಅವರ ಮನೆತನದ ಸ್ಥಿತಿಗತಿಯ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು ಸಂಪೂರ್ಣ ಉಚಿತ ಶಿಕ್ಷಣ ಕೊಡುವ ವ್ಯವಸ್ಥಿತ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿಯೇ ವಿಶೇಷ ತಾಂತ್ರಿಕ ಪರಿಣಿತರ ತಂಡವನ್ನು ರಚಿಸಲಾಗಿದೆ ಎಂದರು. 

ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿದರು. 

ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎ.ದುದನಿ, ಮಹಿಬೂಬ ಹಸರಗುಂಡಗಿ, ಎ.ಐ.ಮುಲ್ಲಾ, ಅಬ್ದುಲಗಫೂರ ಮಸಳಿ, ಜಾಕೀರ ಅಂಗಡಿ, ಹಾಪೀಜ ಗಿರಗಾಂವ, ಪ್ರಭುಲಿಂಗ ಲೋಣಿ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ