ಮಹಲಿಂಗಪುರ

ಶಾಲಾ ಮಕ್ಕಳಿಗೆ ಸಸಿ ವಿತರಣೆ

ಶಾಲಾ ಮಕ್ಕಳಿಗೆ ಸಸಿ ವಿತರಣೆ

ಮಹಾಲಿಂಗಪುರ 18: ಮಹಾಲಿಂಗಪುರ  ಸಮೀಪದ ಢವಳೇಶ್ವರ ಗ್ರಾಮದ ಬಸವೇಶ್ವರ ಕ್ರೆಡಿಟ್ ಸೌಹಾರ್ದ  ಸಹಕಾರಿ ಬ್ಯಾಂಕಿನ ವತಿಯಿಂದ ಎಲ್ಲ ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ರಮೇಶ ಮಲ್ಲಪ್ಪ ಕಮತಗಿ ಉಪಾಧ್ಯಕ್ಷ ರವೀಂದ್ರ ತಮ್ಮಣ್ಣ ಬ್ಯಾಳಿ  ಸದಸ್ಯರಾದ ಕಲ್ಲಪ್ಪ ಚನ್ನಪ್ಪ ಸಂಗನ್ನವರ, ಅಶೋಕ ದುಂಡಪ್ಪ ಪಟ್ಟೇದ, ಸದಾಶಿವ ಯಲ್ಲಪ್ಪ ಸಿಂಗಾಡಿ, ಬಸನಗೌಡ ಶಂಕರಗೌಡ ಪಾಟೀಲ, ಸಸಿಗಳನ್ನು ವಿತರಿಸಿ "ಸಸಿಗಳಿಗೂ ಜೀವವಿದೆ ಮನುಷ್ಯರಂತೆ ಬೆಳೆಸಿ"  ನಿಮಗೆ ಹೋಮ್ ವರ್ಕ್‌ ಜೊತೆಗೆ ಗ್ರೀನ ವರ್ಕ ಕೊಟ್ಟಿದ್ದೇವೆ ಎಂದು ಮಕ್ಕಳಿಗೆ ತಿಳಿಸಿದರು ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ  ಗುರುಪಾದ  ಪರ​‍್ಪ ಸಂತಿ ಹಾಗೂ ಸಿಬ್ಬಂದಿ ಹಾಜರಿದ್ದರು ಸುಮಾರು 250 ಕ್ಕೂ ಹೆಚ್ಚು ಮಕ್ಕಳು ಸಸಿ ಪಡೆದು ಖುಷಿ ಪಟ್ಟರು. 


ಸುದ್ದಿ ಓದಿ