ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರವಾಹ ಪೀಡಿತರಿಗೆ ರೇಷನ್, ಕಿಚನ್ ಕಿಟ್ ವಿತರಣೆ
ಬಳ್ಳಾರಿ 08: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಜಿಲ್ಲಾ ಶಾಖೆ ಇವರ ವತಿಯಿಂದ ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ಗ್ರಾಮಾಂತರ ಪ್ರದೇಶವಾದ ಬಸರಕೋಡು ಗ್ರಾಮದ ಪ್ರದೇಶದಲ್ಲಿ ಅತೀ ಹೆಚ್ಚಾಗಿ ಮಳೆ ಬಂದು ಪ್ರವಾಹದ ಪರಿಸ್ಥಿತಿ ಯದುರಿಸಿ ತಮ್ಮ ಜೀವನವನ್ನು ಕಷ್ಟದಲ್ಲಿ ಸಾಗಿಸುತ್ತಿರುವ ಬಡ ಜನರಿಗೆ ದಿ. 07ರಂದು ವಿಷೇಶವಾಗಿ ದಿನಸಿ ಕಿಟ್ ಮತ್ತು ಇತರೆ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ದಿನಸಿ ಕಿಟ್ಟಿ ಸುಮಾರು 15 ಕೇ.ಜಿ ತೂಕದ ರೇಷನ್ ಕಿಟ್ ಇದರಲ್ಲಿ ಅಕ್ಕಿ 5 ಕೇ.ಜಿ, ಬೆಳೆ 2 ಕೇ.ಜಿ, ಸಕ್ಕರೆ 1 ಕೇ.ಜಿ, ಎಣ್ಣಿ 1 ಕೇ.ಜಿ, ಮಾಸಾಲೆ, ಸಾಂಬರ್ ಪುಡಿ, ಬೆಲ್ಲ ಮತ್ತು ಸೋಜಿ ಇರುತ್ತದೆ. ಅಡುಗೆ ಕಿಟ್‌ನ ಪಾತ್ರ, ಮಹಿಳೆಯರ ಹೈಜೀನ್ ಕಿಟ್ಟ, ಬೆಡ್ ಶೀಟ್ ಮತ್ತು ತಾಡಪಲ್ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಇದೇ ಸಂದರ್ಬದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಎಂ.ಎ.ಷಕೀಬ್, ಕಾರ್ಯದರ್ಶಿ ಇಜಾಜ್ ಅಹಮದ್, ಮಹಬೂಬ್ ಬಾಷಾ, ಚನ್ನ ಬಸವ, ಶಮೀಮ್ ಜಕಾಲಿ, ತಾಹಿರ್ ಸೇಟ್, ವಿಖಾರ್ ಅಹಮದ್ ಮತ್ತು ತಂಡದವರು ಸಾಮಾಗ್ರಿಗಳನ್ನು ವಿತರಿಸಿದ್ದರು.