ಕಂಪ್ಲಿ

ಸರ್ಕಾರಿ ಶಾಲಾ ಮಕ್ಕಳಿಗೆ ಊಟದ ತಟ್ಟೆ, ಲೋಟಗಳ ವಿತರಣೆ

ಸರ್ಕಾರಿ ಶಾಲಾ ಮಕ್ಕಳಿಗೆ ಊಟದ ತಟ್ಟೆ, ಲೋಟಗಳ ವಿತರಣೆ

ಲೋಕದರ್ಶನ ವರದಿ 

ಕಂಪ್ಲಿ, ಆ.5: ಮಾಜಿ ಶಾಸಕ ಟಿ.ಎಚ್‌. ಸುರೇಶ್ ಬಾಬು ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಕಂಪ್ಲಿಯ ಸ್ಥಳೀಯ 4ನೇ ವಾರ್ಡ್ನ ಸಂತೆ ಮಾರ್ಕೆಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಹಾಗೂ ಎಂ.ಡಿ. ಕ್ಯಾಂಪಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಬುಧವಾರ ಊಟದ ತಟ್ಟೆ ಹಾಗೂ ಲೋಟಗಳನ್ನು ವಿತರಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಬಾಬು ಅವರ ಅಭಿಮಾನಿ ಲೋಹಿತ್, ಟಿ.ಎಚ್‌. ಸುರೇಶ್ ಬಾಬು ಅವರು ಸಮಾಜ ಸೇವಾ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿದ್ದು, ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಅವರು ಮತ್ತೊಮ್ಮೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲಿ ಹಾಗೂ ಅವರಿಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯ ದೊರೆಯಲಿ ಎಂದು ಹಾರೈಸಿದರು.  

ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಈಶ್ವರ​‍್ಪ, ನಾಗರತ್ನ ಸೇರಿದಂತೆ ಅಭಿಮಾನಿಗಳಾದ ಬಿ. ಶ್ರೀನಿವಾಸ, ದುರುಗೇಶ್, ಸಣ್ಣಕ್ಕಿ ರಾಜಶೇಖರ, ಶಿವಕುಮಾರ, ಲಿಂಗರಾಜು, ಉಮೇಶ್, ಮೆಟ್ರಿ ಸುರೇಶ್, ಮಂಜುನಾಥ, ಮಲ್ಲಿಕಾರ್ಜುನ, ಸಂತೋಷ್, ಪ್ರಕಾಶ್, ಸುರೇಶ್, ರಾಜ, ಸಣ್ಣ ನಾಗರಾಜ, ಗಾಳೆಪ್ಪ, ಸಿ.ಡಿ. ಜಡೇಶ್ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ